News Karnataka Kannada
Friday, May 10 2024
ಅಡುಗೆ ಮನೆ

ಗುಜರಾತಿ ಶೈಲಿಯ ಶ್ರೀಖಂಡ್ ಮಾಡುವ ವಿಧಾನ ಇಲ್ಲಿದೆ

How to make Gujarati-style Shrikhand
Photo Credit : Pixabay

ಗುಜರಾತಿ ಶೈಲಿಯ ಶ್ರೀಖಂಡ್  ಆರೋಗ್ಯಕರ  ಸಿಹಿತಿಂಡಿಯಾಗಿದ್ದು, ಇದನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಬಾಯಿಗೂ ರುಚಿಕರ ಅರೋಗ್ಯಕ್ಕೂ ಹಿತಕರ. ಇದನ್ನು ಮಾಡುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:

3 ಕಪ್ ಮೊಸರು
1/4 ಕಪ್  ಪುಡಿ ಸಕ್ಕರೆ
1/2 ಟೀಸ್ಪೂನ್ ಏಲಕ್ಕಿ ಪುಡಿ
10-15 ಬಾದಾಮಿ ಮತ್ತು ಗೋಡಂಬಿ

ಮಾಡುವ ವಿಧಾನ:

ಒಂದು ಬೌಲ್ ಅನ್ನು ತೆಗೆದುಕೊಂಡು ಅದರ ಮೇಲೆ  ಮಸ್ಲಿನ್ ಬಟ್ಟೆ ಅಥವಾ ಚೀಸ್ ಕ್ಲಾತ್ ಅನ್ನು ಹರಡಿ ಮಧ್ಯದಲ್ಲಿ ಮೊಸರನ್ನು ಹಾಕಿ ನೀರೆಲ್ಲ ಬಸಿದು ಹೋಗುವಂತೆ ಬಿಗಿಯಾಗಿ ಕಟ್ಟಿ, ಅದರ ಮೇಲೆ ಭಾರವಾದ ವಸ್ತುವನ್ನು ಇಟ್ಟು ಸುಮಾರು 6 ರಿಂದ 7 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಡಿ.

ನಂತರ ಆ ಮೊಸರನ್ನು ಒಂದು ಬೌಲ್ ಗೆ ವರ್ಗಾಯಿಸಿ ಅದಕ್ಕೆ ಸಕ್ಕರೆ ಪುಡಿ, ಏಲಕ್ಕಿ ಪುಡಿ ಸೇರಿಸಿ ವಿಸ್ಕರ್ ಅಥವಾ ಹ್ಯಾಂಡ್ ಬೀಟರ್ ನ ಮೂಲಕ ನಯವಾಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ, ಕೊನೆಯಲ್ಲಿ ಕತ್ತರಿಸಿದ ಬಾದಾಮಿ ಮತ್ತು ಗೋಡಂಬಿಯನ್ನು ಸೇರಿಸಿ ಕನಿಷ್ಠ ಒಂದು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿ ಇಟ್ಟರೆ ರುಚಿ ರುಚಿಯಾದ ಶ್ರೀಖಂಡ್ ಸವಿಯಲು ಸಿದ್ಧ. ಬಣ್ಣಕ್ಕೆ ಬೇಕಾದರೆ ಕೇಸರಿ ಎಸಳುಗಳನ್ನು ಸೇರಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು