News Karnataka Kannada
Saturday, April 27 2024
ಮಂಗಳೂರು

ಮಂಗಳೂರು ನಗರಕ್ಕೆ ಏಪ್ರಿಲ್‌ನಿಂದ ನೀರು ರೇಶನಿಂಗ್‌

Water rationing for Mangaluru city from April
Photo Credit : News Kannada

ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ಒಳಹರಿವು ಕುಸಿತವಾಗಿದ್ದು, ಮುಂದಿನ ತಿಂಗಳಿನಿಂದ ರೇಶನಿಂಗ್‌ ವ್ಯವಸ್ಥೆಯಲ್ಲಿ ನೀರು ಪೂರೈಕೆಗೆ ಲಿಕೆ ಯೋಜನೆ ರೂಪಿಸಿದೆ. 155 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದ್ದು, ತುಂಬೆ ಡ್ಯಾಂನಲ್ಲಿ ನೀರು ಕಡಿಮೆಯಾಗದಂತೆ ತಡೆದು ನಗರಕ್ಕೆ ನೀರು ಪೂರೈಕೆ ವ್ಯತ್ಯಯವಾಗದಂತೆ 3 5 ತಡೆಯಲು ಎಎಂಆರ್ ಡ್ಯಾಂನಿಂದ ಹಂತ ಹಂತವಾಗಿ ನೀರು ಹರಿಸಲಾಗುತ್ತಿದೆ.

ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಮಾ.6 ಕ್ಕೆ 5.85 ಮೀಟರ್‌ಗೆ ಇಳಿಕೆಯಾಗಿದ್ದು, ಪ್ರಸ್ತುತ ಎಎಂಆರ್ ನೀರು ಹರಿಸಿ 5.45 ಮೀಟರ್‌ವರೆಗೆ ಕೃತಕವಾಗಿ ಏರಿಸಲಾಗುತ್ತಿದೆ. ಆದರೆ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗುತ್ತಿದ್ದು, ಬೇಡಿಕೆಗೆ ಪೂರಕವಾದ ನೀರು ಮುಂದಿನ ದಿನಗಳಲ್ಲಿ ಲಭ್ಯವಾಗುವುದು ಕಷ್ಟ. ಈ ಹಿನ್ನೆಲೆಯಲ್ಲಿ ಏಪ್ರಿಲ್ ಮೊದಲ ವಾರದಿಂದ ಮಂಗಳೂರು ನಗರಕ್ಕೆ ರೇಶನಿಂಗ್ ವ್ಯವಸ್ಥೆಯಲ್ಲಿ ನೀರು ಪೂರೈಕೆ ಮಾಡುವ ಅನಿವಾರ್ಯ ಪಾಲಿಕೆಗಿದೆ.

ಈ ರೀತಿ ಪರ್ಯಾಯ ವ್ಯವಸ್ಥೆ:
ಪ್ರಸ್ತುತ ನಗರ ಪ್ರದೇಶಗಳಲ್ಲಿ 27 ಗಂಟೆ ನೀರು ಪೂರೈಕೆಯಾಗುತ್ತಿದ್ದು, ಏಪ್ರಿಲ್‌ನಿಂದ 4 ಗಂಟೆ ಮಾತ್ರ ಪೂರೈಕೆಯಾಗಲಿದೆ. ದಿನದ ಯಾವುದಾದದರೂ 2 ಹೊತ್ತು ಮತ್ರ ನೀರು ಪೂರೈಕೆಯಾಗಲಿದೆ.

ತುಂಬೆ ಡ್ಯಾಂನಲ್ಲಿ ನೀರು ಮಟ್ಟ ಇಳಿಕೆಯಾಗುತ್ತಿದ್ದು, ಮುಂದಿನ ತಿಂಗಳಿನಿಂದ ರೇಶನಿಂಗ್‌ ಮಾಡುವುದು ಅಗತ್ಯ . ಕುಡಿಯುವ ನೀರಿಗೆ ತೊಂದರೆಯಾದಲ್ಲಿ ಕೈಗಾರಿಕೆ ಕಾಮಗಾರಿಗೆ ನೀರು ಸರಬರಾಜು ನಿಯಂತ್ರಿಸಲಾಗುವುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು