News Karnataka Kannada
Monday, April 29 2024
ದೆಹಲಿ

ದತ್ತಾಂಶ ಕಳವು: ಈ ಫಾರ್ಮಸಿ ಬಂದ್‌ ಸಾಧ್ಯತೆ

Data theft: This pharmacy likely to be shut down
Photo Credit : By Author

ನವದೆಹಲಿ: ‘ದತ್ತಾಂಶ (ಡೇಟಾ) ದುರುಪಯೋಗ ಹಿನ್ನೆಲೆಯಲ್ಲಿಇ-ಫಾರ್ಮಸಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಈ ವಲಯಕ್ಕೆ ದೊಡ್ಡ ಹೊಡೆತವಾಗಲಿದೆ. ಅಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಸಚಿವರ ಗುಂಪು (ಜಿಒಎಂ) ಕೂಡ ಡಿಜಿಟಲ್, ಅಂದರೆ ಇ-ಫಾರ್ಮಸಿಗಳ ಪರವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಮಹಾನಿಯಂತ್ರಕರು 20 ಹೆಚ್ಚು ಇ-ಫಾರ್ಮಸಿಗಳಿಗೆ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ಟಾಟಾ 1ಎಂಜಿ, ಅಮೆಜಾನ್, ಸ್ಲಿಪ್‌ಕಾರ್ಟ್, ನೆಟ್‌ಮೆಡ್ಸ್, ಮೆಡಿಬಡ್ಡಿ, ಪ್ರಾಕ್ಟೋ, ಫ್ರಾಂಕ್ರಾಸ್, ಅಪೋಲೊ ಮುಂತಾದವು ಷೋಕಾಸ್‌ ನೋಟಿಸ್‌ ಪಡೆದ ಪ್ರಮುಖ ಇ-ಫಾರ್ಮಸಿಗಳಾಗಿವೆ.

ಡಿಸಿಜಿಐ ಹೇಳುವುದೇನು?: ಪರವಾನಗಿ ಇಲ್ಲದೇ ಆನ್ ಲೈನ್, ಇಂಟರ್‌ನೆಟ್ ಅಥವಾ ಇತರ ಎಲೆಕ್ಟ್ರಾನಿಕ್ ವೇದಿಕೆಗಳ ಮೂಲಕ ಔಷಧಗಳ ಮಾರಾಟ ಅಥವಾ ವಿತರಣೆ ಕುರಿತ ಸ್ಟಾಕ್, ಪ್ರದರ್ಶನ ಅಥವಾ ಮಾರಾಟದ ಆಫರ್‌ಗಳನ್ನು ಮಾಡುವುದರಿಂದ ಔಷಧಗಳ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವುಂಟಾಗುವ ಸಾಧ್ಯತೆಯಿದೆ ಎಂದು –ಫಾರ್ಮಸಿಗಳಿಗೆ ಜಾರಿ ಮಾಡಿರುವ ನೋಟಿಸ್‌ನಲ್ಲಿ -ಸಿಜಿಐ ಅಭಿಪ್ರಾಯ ಪಟ್ಟಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು