ಸುಳ್ಯ: ರಾಜ್ಯ ವಿಧಾನ ಸಭಾ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಸುಳ್ಯ ತಾಲೂಕಿನಲ್ಲಿ 184 ಅಂಚೆ ಮತದಾನವಾಗಿದೆ ಎಂದು ಅಧಿಕಾರಿಗಳು ದೃಡ ಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಥಮವಾಗಿ ಈ ಭಾರಿ ಚುನವಣಾ ಆಯೋಗ ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಕುಳಿತು ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು, ಇದರಿಂದ ಸಾವಿರಾರು ಮಂದಿ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಈ ಹಿಂದೆ ಹಲವು ಮಂದಿ ಮತದಾನ ದಿಂದ ವಂಚಿತರಾಗುತ್ತಿದ್ದರು, ಇದೀಗ ಹಲವಾರು ಮಂದಿಗೆ ಅವಕಾಶ ಲಭಿಸಿದೆ.
ಸುಳ್ಯ ತಾಲೋಕಿನಲ್ಲಿ 184 ಮತ ಚಲಾವಣೆ ಯಾಗಿದ್ದು ಇದರಲ್ಲಿ 34 ವಿಕಲ ಚೇತನರು ಹೆಣ್ಣು 17,ಗಂಡು17, ಮತ ಚಲಾಯಿಸಿದ್ದಾರೆ 150 ಹಿರಿಯ ನಾಗರೀಕರು ಮತ ಚಲಾಯಿಸಿದ್ದು . 47 ಪುರುಷ ಮತದಾರರು, 103 ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಚುನಾವಣಾಧಿಕಾರಿ ಅರುಣ್ ಕುಮಾರ್, ಮಂಜುನಾಥ್ , ವೀಣಾ ಮತ್ತು ಇತರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದಾರೆ.