News Karnataka Kannada
Monday, April 15 2024
Cricket
ಮಂಗಳೂರು

ಉಪ್ಪಿನಂಗಡಿ: ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಡಿಕ್ಕಿ- ಪಾದಚಾರಿ ಸಾವು

Uppinangady: Pedestrian killed after bike driven by student collides with bike
Photo Credit : News Kannada

ಉಪ್ಪಿನಂಗಡಿ: ಪುತ್ತೂರಿನ ಕಾಲೇಜೊಂದರ ವಿದ್ಯಾರ್ಥಿ ಚಲಾಯಿಸುತ್ತಿದ್ದ ಬೈಕ್ ಅಪಘಾತಗೊಂಡು ಪಾದಚಾರಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ಜೂ.22 ರಂದು ನಡೆದಿದೆ.

ಉಪ್ಪಿನಂಗಡಿ ಬೆಳ್ತಂಗಡಿ ರಸ್ತೆಯ ಎಚ್ಎಮ್ ಆಡಿಟೋರಿಯಂ ಸಮೀಪ ಅಪಘಾತ ಸಂಭವಿಸಿದೆ. ಪುತ್ತೂರಿನ ನೆಹರುನಗರ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಬೆಳ್ತಂಗಡಿಯ ಉಳಿ ಗ್ರಾಮದ ನಿತಿನ್ ಬೆಳಗ್ಗೆ ಕಾಲೇಜು ಬರುವಾಗ ಬೈಕ್ ಪಾದಚಾರಿ ಇಳಂತಿಲದ ಪೆರ್ನಾಂಡೀಸ್ (64 ವ.) ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಪೆರ್ನಾಂಡೀಸ್ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಣ್ಣ ಪುಟ್ಟ ಗಾಯಗೊಂಡ ನಿತಿನ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು