News Karnataka Kannada
Saturday, April 27 2024
ಮಂಗಳೂರು

ಉಳ್ಳಾಲ: ಕೋಮುವಾದದ ಬೀಜ ಇಲ್ಲಿನ ಲ್ಯಾಬ್ ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದ ಸಿದ್ಧರಾಮಯ್ಯ

The seeds of communalism are being produced from a lab here, says Siddaramaiah
Photo Credit : News Kannada

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ, ಕೋಮುವಾದ ಇಲ್ಲಿಂದಲೇ ಆರಂಭವಾಗಿದೆ. ಕೋಮುವಾದದ ಬೀಜ ಇಲ್ಲಿನ ಲ್ಯಾಬ್ ನಿಂದಲೇ ಉತ್ಪತ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ಅವರು ಹರೇಕಳ ಕಡವಿನಬಳಿಯ ಯು.ಟಿ ಫರೀದ್ ವೇದಿಕೆಯಲ್ಲಿ ಜರಗಿದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಜನಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಅಧಿಕಾರಕ್ಕೆ ಬಂದ ನಂತರ ಭರವಸೆಗಳನ್ನು ಮರೆತು ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಮುಂದಾಗುತ್ತಾರೆ. ಬಹುತ್ಬದ ದೇಶ ಎಲ್ಲರೂ ಒಗ್ಗಟ್ಟಿನಲ್ಲಿರುವ ದೇಶ. ಈಗಿನ ಡಬಲ್ ಇಂಜಿನ್ ಸರಕಾರ ಎಲ್ಲವನ್ನೂ ಮುರಿದುಹಾಕಿದೆ. ಜನಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ನಂ. 1 ಆಗಲಿದೆ. ಎಲ್ಲರಿಗೂ ರಕ್ಷಣೆ ಸಿಗಬೇಕು, ಸಂವಿಧಾನ ದಲ್ಲಿ ಎಲ್ಲರೂ ಸಮಾನ ಎಂದು ಅಂಬೇಡ್ಕರ್ ಬರೆದುಕೊಟ್ಟಿದ್ದಾರೆ. ಯಾರು ಯಾವ ಧರ್ಮವನ್ನೂ ಅನುಸರಿಸಬಹುದು ಎಂದು ಹೇಳಲಾಗಿದೆ. ಆದರೆ ಸಮಾನ ಅವಕಾಶ, ಸಮಾನ ಹಕ್ಕು ಎಲ್ಲವನ್ನೂ ನಶಿಸಿಹಾಕಲಾಗುತ್ತಿದೆ.

ಬಿಜೆಪಿಯವರಿಗೆ ಅಸಮಾನತೆಯ ಸಮಾಜ ಬೇಕಿದೆ. ಜಾತಿ ವ್ಯವಸ್ಥೆಯನ್ನು ನಿರ್ಮಿಸಿ ಒಂದು ಜಾತಿಯವರನ್ನು ಇನ್ನೊಂದು ಜಾತಿಗೆ ಎತ್ತಿಕಟ್ಟಲು ಸಾಧ್ಯ. ಆರ್ಥಿಕತೆ, ಅಸಮಾನತೆಯಿದ್ದರೆ ದೌರ್ಜನ್ಯ ಮಾಡಲು ಸುಲಭವಾಗುತ್ತದೆ. ಸಂವಿಧಾನ ಬದಲಾವಣೆ ಮಾಡಲು ಹೇಳಿದಂತ ಅನಂತ್ ಕುಮಾರ್ ಹೆಗ್ಡೆ ಗ್ರಾ.ಪಂ ಸದಸ್ಯನಾಗಲೂ ನಾಲಾಯಕ್, ಮೋದಿ, ಷಾ ಅಂತಹವರನ್ನು ಬೆಂಬಲಿಸಿ ಸಂವಿಧಾನ ವಿರೋಧಿಗಳು ಎಂದು ತೋರಿಸಿಕೊಟ್ಟಿದ್ದಾರೆ‌.

ಪರೇಶ್ ಮೇಸ್ತಾ ಸಾವನ್ನು ಕಾಂಗ್ರೆಸ್ ನವರು ಕೊಲೆ ಮಾಡಿದ್ದಾರೆ ಅಂದರು. ತಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿಬಿಐಗೆ ವಹಿಸಿದ್ದೆ. ಕೊಲೆಯಲ್ಲ ಇದೊಂದು ಆಕಸ್ಮಿಕ ಸಾವು ಎಂದು ವರದಿ ನೀಡಿತು. ಇಂತಹ ಅನೇಕ ಕೊಲೆಗಳನ್ನು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ದ.ಕ ಜಿಲ್ಲೆಯಲ್ಲಿ ಆಗಿದೆ. ಈಗಿನ ಮುಖ್ಯಮಂತ್ರಿ ಏಳು ಕೋಟಿ ಕನ್ನಡಿಗರ ಮುಖ್ಯಮಂತ್ರಿ, ಆರ್ ಎಸ್ ಎಸ್ ಮುಖ್ಯಮಂತ್ರಿಯಲ್ಲ. ಅಲ್ಪಸಂಖ್ಯಾತರ ಕೊಲೆಯಾದ ಮನೆಗೇ ಹೋಗುವುದಿಲ್ಲ. ಸರಕಾರದ ಖಜಾನೆ ಜನರ ತೆರಿಗೆಯಿಂದ ಬರುವ ಆದಾಯವನ್ನು ಒಂದೇ ಕಡೆಗೆ ಪರಿಹಾರ ನೀಡಿ. ಆರ್ ಎಸ್ ಎಸ್ ನವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಇರದ ಆರ್ ಎಸ್ ಎಸ್ ನವರು ರಾಷ್ಟ್ರಭಕ್ತಿ ಬಗ್ಗೆ ಮಾತನಾಡಲು ನೈತಿಕತೆಯ ಇಲ್ಲದವರು.

ನಳಿನ್ ಕಟೀಲ್ ಓರ್ವ ವಿದೂಷಕನಾಗಿರುವಾತ, ಯಕ್ಷಗಾನದಲ್ಲಿ ಎಲ್ಲಾ ಬಿಜೆಪಿ ವಿಚಾರಗಳನ್ನು ಪ್ರಚಾರಪಡಿಸಲು ಹೇಳುತ್ತಾನೆ. ಆರಾಧಿಸುವ ಕಲೆ ಯಕ್ಷಗಾನದಲ್ಲಿ ಕೋಮುವಾದವನ್ನು ಬಿತ್ತುವಾತ. ನಿರುದ್ಯೋಗ, ಭ್ರಷ್ಟಾಚಾರದ ಬಗ್ಗೆ ಮಾತನಾಡುವುದಿಲ್ಲ. ಕಳ್ಳಸಾಗಾಣಿಕೆಯಲ್ಲೂ ಅಡಿಕೆ ಬರುತ್ತಿದೆ. ಅಡಿಕೆಯನ್ನು ನಾಶಗೊಳಿಸಲು ಹೊರಟಿದ್ದಾರೆ. ಒಂದು ವರ್ಷ ಐದು ತಿಂಗಳಾದರೂ ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಕೆಂಪಯ್ಯ ಬರೆದಿದ್ದರೂ ಈವರೆಗೆ ಸರಕಾರ ತನಿಖೆ ನಡೆಸಿಲ್ಲ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ,40% ಕಮೀಷನ್ ಕೊಟ್ಟಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಬಿಲ್ ಕೊಡದೇ ಆತ್ಮಹತ್ಯೆ ಮಾಡಿಕೊಂಡರು. ತುಮಕೂರಿನಲ್ಲಿ ಪ್ರಸಾದ್ ಗುತ್ತಿಗೆದಾರ ಆತ್ಮಹತ್ಯೆ. ಲಿಂಬಾವಳಿ ವಿದಸಾನಸಭಾ ಕ್ಷೇತ್ರದಲ್ಲಿ ಪ್ರದೀಪ್ ಆತ್ಮಹತ್ಯೆ, ಸಾವಿಗೆ ಲಿಂಬಾವಳಿ ಕಾರಣ ಎಂದು ಬರೆದು ಆತ್ಮಹತ್ಯೆ, ಶಿವಕುಮಾರ್ ಅನ್ನುವ ಗುತ್ತಿಗೆದಾರ ಬಿಲ್ ಪಾವತಿಯಾಗದಕ್ಕೆ ಪತ್ರ ಬರೆದು ದಯಾಮರಣ ಕೇಳುತ್ತಿದ್ದಾರೆ. ಇಂತಹ ಸರಕಾರ ಬೇಕಾ? ಠಾಣಾಧಿಕಾರಿ ಲಂಚಕೊಟ್ಟು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ಖುದ್ದು ಎಂಟಿಬಿ ನಾಗರಾಜ್ ಬಳಿಯಲ್ಲೇ ಮನೆಮಂದಿ ಹೇಳಿದರು. ಎತ್ತಿನಹೊಳೆ ಪಶ್ಚಿಮ ವಾಹಿನಿ ಯೋಜನೆಯಡಿ ಖಾದರ್ ದೊಡ್ಡ ಸಾಧನೆ ಮಾಡಿ ಹರೇಕಳ ಅಡ್ಯಾರ್ ಬ್ರಿಡ್ಜ್ ಕಂ ಬ್ಯಾರೇಜ್ ತಂದುಕೊಟ್ಟರು.

ವಿಧಾನಪರಿಷತ್ ಸದಸ್ಯರುಗಳಾದ ಬಿ.ಕೆ ಹರಿಪ್ರಸಾದ್ , ಹರೀಶ್ ಕುಮಾರ್ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್, ಮಾಜಿ ಸಚಿವರುಗಳಾದ ಬಿ.ರಮಾನಾಥ ರೈ, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಕೋಡಿಜಾಲ್ ಇಬ್ರಾಹಿಂ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕಣಚೂರು ಮೋನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರಶಾಂತ್ ಕಾಜವ, ಹಾಗೂ ಸದಾಶಿವ ಉಳ್ಳಾಲ್ , ಮೌರ್ಯ, ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರ್ಷರಾಜ್ ಮುದ್ಯ, ಇನಾಯತ್ ಆಲಿ, ಕೆಪಿಸಿಸಿ ಪ್ರ.ಕಾ ರಕ್ಷಿತ್ ಶಿವರಾಂ, ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಹರೇಕಳ ಗ್ರಾ.ಪಂ ಅಧ್ಯಕ್ಷ ಬದ್ರುದ್ದೀನ್, ಮಹಿಳಾ ಕಾಂಗ್ರೆಸ್ ನ ಶಾಲೆಟ್ ಪಿಂಟೋ, ರಾಕೇಶ್ ಮಲ್ಲಿ, ಅಶ್ವಿನ್ ಕುಮಾರ್ ರೈ,

ಯು.ಟಿ ಖಾದರ್ ಮಾತನಾಡಿ ಐತಿಹಾಸಿಕ ಯೋಜನೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಸಿದ್ದರಾಮಯ್ಯೆ ಒದಗಿಸಿಕೊಟ್ಟರು.
ಜಿಲ್ಲೆಗೆ ನೀರಿನ ಕೊರತೆಯಾಗದಂತೆ, ಬೋಟಿಂಗ್, ಪಾಕ್೯ ವ್ಯವಸ್ಥೆ . ಮುಂದಿನ ಬಹುದೊಡ್ಡ ಯೋಜನೆ ತುಂಬೆಯಿಂದ ಸೇತಯವೆ ನಿರ್ಮಾಣ. ಕ್ಷೇತ್ರದಲ್ಲಿ ಮೌಲಾನಾ ಆಝಾದ್ ಶಾಲೆ ಉಳ್ಳಾಲದಲ್ಲಿ ಮಾತ್ರವಿದೆ. ಸೌಹಾರ್ದತೆ, ಪ್ರೀತಿ, ವಿಶ್ವಾಸವನ್ನು ಕಾಪಾಡಿರುವುದರಿಂದ ಅಭಿವೃದ್ಧಿ ಯ ಉಳ್ಳಾಲ ನಿರ್ಮಾಣವಾಗಲು ಸಾಧ್ಯವಾಗಿದೆ. ಬಿಜೆಪಿಯ ಸಂವಿಧಾನದ ವಿರುದ್ಧ ಆಡಳಿತ ದಿಂದ ನೆಮ್ಮದಿಯಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅದು ಪ್ರಸ್ತುತ ಇಂದಿರಾ ಗಾಂಧಿ ಆಡಳಿತದ ವೈಭವವನ್ನು ಮತ್ತೆ ಎತ್ತಿ ತೋರಿಸಲು ಕಾಂಗ್ರೆಸ್ ಅನ್ನು ಗೆಲ್ಲಿಸಿರಿ. ಎಲ್ಲರೂ ಜಾಗರೂಕತೆಯಿಂದ ಇರಿ. ಚುನಾವಣೆ ಬರುವಾಗ ಅಪಪ್ರಚಾರಕ್ಕೆ ಕಿವಿಗೊಡದೆ ಎಲ್ಲರೂ ತಾಳ್ಮೆಯಿಂದ ಬಾಳಿರಿ. ಲವ್ ಜಿಹಾದ್ ವಿರುದ್ಧದ ಕಾನೂನು ದೇಶಾದ್ಯಂತ ಜಾರಿಗೊಳಿಸಿ ಸಂಸದರೇ. ಒಗ್ಗಟ್ಟನ್ನು ಕಾಪಾಡಿ , ಎಲ್ಲರನ್ನೂ ಒಗ್ಗಟ್ಟಾಗಿ ಸೇರಿಸುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ.

ಬಿ.ಕೆ ಹರಿಪ್ರಸಾದ್ ಮಾತನಾಡಿ , ರಾಷ್ಟ್ರಕ್ಕೆ ಪ್ರಾಣ ಕೊಟ್ಟಂತಹ ಸಿದ್ದಾಂತ, ಗಾಂಧಿ ಕೊಂದಂತಹ ಗೋಡ್ಸೆ ಸಂತಾನದ ಸುಳ್ಳು ಹೇಳುವ ಸಿದ್ದಾಂತ.
ರಾಜೀವ್ ಗಾಂಧಿ ತಂದಂತಹ ಟೆಲಿಕಮ್ಯುನಿಕೇಷನ್ ಕಾಯಿದೆಯಿಂದ ಮೊಬೈಲ್ ಕೈಯಲ್ಲಿದೆ. 27 ಸಾರ್ವಜನಿಕ ಸೊತ್ತುಗಳನ್ನು ಖಾಸಗಿಯವರಿಗೆ ನಿಡಲಾಯಿತು. ಮನೆಹಾಳು ಮಾಡುವಂತಹ ಕೆಲಸವನ್ನು ಖಾಕಿ ಚಡ್ಡಿ ಕರಿಟೋಪಿಯವರು ಮಾಡುತ್ತಿದ್ದಾರೆ. ಪ್ರವೀಣ್  ಕೊಲೆಯಲ್ಲಿ ಮಂಪರು ಪರೀಕ್ಷೆ ಮಾಡಿದಲ್ಲಿ ಸಂಸದರೇ ಸಿಕ್ಕಿ ಹಾಕಿಕೊಳ್ಳುವುದರಲ್ಲಿ ಸಂಶಯವಿಲ್ಲ. ಲವ್ ಜಿಹಾದ್, ಹಿಜಾಬ್, ಹಲಾಲ್ ಮಾಡಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಂತಹ ಉಡುಪಿ ಜಿಲ್ಲೆ, ಮಂಗಳೂರು ಜಿಲ್ಲೆ 18 ನೇ ಸ್ಥಾನಕ್ಕೆ ದೂಡಿದರು. ಪೆನ್ ಬದಲು ತಲವಾರು, ತ್ರಿಶೂಲ, ಚಾಕು, ಚೂರಿ ಕೊಡುತ್ತಾರೆ. ಮಕ್ಕಳ ಭವಿಷ್ಯ ಯೋಚನೆ ಮಾಡಿ. ಅಬ್ಬಕ್ಕನ ನೆಲ ರಣಹೇಡಿಗಳ ನೆಲವಲ್ಲ. ಅನ್ಯೋನ್ಯವಾಗಿ ಕ್ರಿಶ್ಚಿಯನ್, ಹಿಂದೂ, ಮುಸ್ಲಿಮ್ , ಜೈನರು ಬಾಳಿದ ಜಿಲ್ಲೆಯನ್ನು ಹಿಂದೆ ಬೀಳಲು ಬಿಡಬೇಡಿ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು