News Karnataka Kannada
Thursday, May 02 2024
ಮಂಗಳೂರು

ಅಖಾಡದಲ್ಲಿರುವ ರಿಯಾಝ್ ಫರಂಗಿಪೇಟೆಯಿಂದಷ್ಟೇ ಉಳ್ಳಾಲ ನಂ.1- ರಿಯಾಝ್ ಕಡಂಬು

Ullal No.1 - Riyaz Kadambu only from Farangipet in the akhara
Photo Credit : News Kannada

ಉಳ್ಳಾಲ: ಶಾಸಕ ಖಾದರ್ ಅವರು ತುದಿ ಬೆರಳಲ್ಲಿ ಆಡಿಸುತ್ತಿರುವ ಉಳ್ಳಾಲ ನಗರಸಭೆಯ ಗೋಡೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದ್ದು,ಉಳ್ಳಾಲವನ್ನ ನಂ.1 ಮಾಡಲು ರಿಯಾಝ್ ಪರಂಗಿ ಪೇಟೆಯನ್ನ ಅಖಾಡಕ್ಕೆ ಇಳಿಸಿದ್ದೇವೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ‌ ರಿಯಾಝ್ ಕಡಂಬು ಸವಾಲೆಸೆದಿದ್ದಾರೆ.

ಉಳ್ಳಾಲ ನಗರಸಭೆಯ ಭ್ರಷ್ಟಾಚಾರದ ವಿರುದ್ಧ ಮತ್ತು ಮೂಲಭೂತ ಸೌಕರ್ಯ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿ ವತಿಯಿಂದ ಉಳ್ಳಾಲ ನಗರಸಭೆ ಮುಂಭಾಗದಲ್ಲಿ ಗುರುವಾರದಂದು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಆಡಳಿತವುಳ್ಳ ಉಳ್ಳಾಲ ನಗರಸಭೆಯು ಜನರಿಗೆ ಬೇಕಾದ ಮೂಲಭೂತ ಸವಲತ್ತುಗಳನ್ನ ಒದಗಿಸಿಲ್ಲ.ಮಾತ್ರವಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸಲೂ ಸಂಪೂರ್ಣ ವಿಫಲವಾಗಿದೆ.ಬಹುಮಹಡಿ ಕಟ್ಟಡಗಳು,ಬಾಡಿಗೆ ಅಂಗಡಿಗಳ ಆದಾಯದಲ್ಲಿ ನಗರಸಭೆ ಭ್ರಷ್ಟಾಚಾರ ನಡೆಸುತ್ತಲೇ ಬಂದಿದೆ.ಆದರೆ ಬಡ ಜನರ ಬೇಡಿಕೆಯ ಒಂದು ದಾರಿ ದೀಪ ಕಲ್ಪಿಸಲು ನಗರಸಭೆಗೆ ಸಾಧ್ಯವಾಗಿಲ್ಲ.ಎಸ್ ಡಿಪಿಐ ಮನಸು ಮಾಡಿದರೆ ನಿಮ್ಮನ್ನ ಅಧಿಕಾರದಿಂದ ಕಿತ್ತೆಸಯಲು ಸಾಧ್ಯವಿದೆ.ಉಳ್ಳಾಲ ವಿದಾನಸಭಾ ಕ್ಷೇತ್ರದ ಸ್ಥಳೀಯಾಡಳಿತಗಳಿಗೆ ನಡೆದ ಚುನಾವಣೆಗಳ ಫಲಿತಾಂಶಗಳಲ್ಲಿ ನಮ್ಮ ಪಕ್ಷ ಗಳಿಸಿದ ಸ್ಥಾನಗಳನ್ನ ಗಮನಿಸಿ.

ಕ್ಷೇತ್ರದ ಶಾಸಕ ಖಾದರ್ ಅವರು ಎಸ್ ಡಿಪಿಐ ಮತ್ತು ಜೆಡಿಎಸ್ ನಗರಸಭಾ ಸದಸ್ಯರನ್ನ ಕಡೆಗಣಿಸಿ ಕೇವಲ ತನ್ನ ಪಕ್ಷದ ಸದಸ್ಯರಿಗೆ ಅನುದಾನ ನೀಡಿ ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ .ಹೀಗೆ ಮುಂದುವರಿದರೆ ಶಾಸಕರ ಮನೆ ಮುಂದೆ ಎಸ್ ಡಿಪಿಐ ಉಗ್ರ ಪ್ರತಿಭಟನೆ‌ ನಡೆಸೋದಾಗಿ ಎಚ್ಚರಿಕೆ ನೀಡಿದರು.ಅಲ್ಲದೆ ಈ‌ ಬಾರಿ ಎಸ್ ಡಿಪಿಐ ಪಕ್ಷವು ರಿಯಾಝ್ ಪರಂಗಿ ಪೇಟೆಯವರನ್ನ ಉಳ್ಳಾಲದಲ್ಲಿ ವಿದಾನಸಭಾ ಕ್ಷೇತ್ರ ಅಭ್ಯರ್ಥಿಯನ್ನಾಗಿ ಅಖಾಡಕ್ಕಿಳಿಸಿದ್ದು ಅವರು ಉಳ್ಳಾಲವನ್ನ ನಂ.1 ಮಾಡೇ ಮಾಡುತ್ತಾರೆ ಎಂದರು.

ಎಸ್ ಡಿಪಿಐ ಉಳ್ಳಾಲ ನಗರಸಮಿತಿ ಅಧ್ಯಕ್ಷ ಎ.ಆರ್ ಅಬ್ಬಾಸ್,ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ, ಕ್ಷೇತ್ರ ಸಮಿತಿ ಸದಸ್ಯ ಶೋಯೆಬ್ ಉಳ್ಳಾಲ್,ಮುಸ್ಲಿಂ ಒಕ್ಕೂಟ ಅಧ್ಯಕ್ಷ ಇಸ್ಮಾಯಿಲ್ ,ನಗರಸಭೆ ಸದಸ್ಯರಾದ ಝರೀನಾ ಬಾನು,ಖಮರುನ್ನೀಸ ನಿಝಾಮ್,ರಮೀಝ್ ,ಅಝ್ಗರ್, ಶೈನಾಝ್ ಅಕ್ರಮ್, ರುಖ್ಯ ಇಕ್ಬಾಲ್ ಮೊದಲಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು