News Karnataka Kannada
Monday, April 29 2024
ಮಂಗಳೂರು

ಉಜಿರೆ: ಕಾಂಗ್ರೆಸ್‌ ಮುಖಂಡನ ಕಾರಿಗೆ ಕಲ್ಲೆಸೆದು ಹಾನಿ

ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ನಾಲ್ಕನೇ ಪಟ್ಟಿ ಘೋಷಣೆಯಾಗಿದೆ. ಒಟ್ಟು 46 ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
Photo Credit : Facebook

ಉಜಿರೆ: ಕಾಂಗ್ರೆಸ್ ಮುಖಂಡ ಸಂಚರಿಸುತ್ತಿದ್ದ ಕಾರಿನ ಮೇಲೆ ಭಾನುವಾರ ರಾತ್ರಿ (ಎ.30) ದುಷ್ಕರ್ಮಿಗಳು ಕಲ್ಲೆಸೆದು ಹಾನಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರವೀಣ್ ಫರ್ನಾಂಡೀಸ್ ಸಂಚರಿಸುತ್ತಿದ್ದ ಕಾರಿಗೆ ಅನುಗ್ರಹ ಶಾಲೆಯ ಬಳಿ ಕಲ್ಲು ತೂರಾಟ ನಡೆಸಿದ್ದಾರೆ. ಬೆಳ್ತಂಗಡಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಆಪ್ತರಾಗಿ ಗುರುತಿಸಿಕೊಂಡಿದ್ದ ಪ್ರವೀಣ್ ಚುನಾವಣಾ ಪ್ರಚಾರಕ್ಕೆ ಜತೆಯಲ್ಲಿ ಹೋಗುತ್ತಿದ್ದರು. ಇದೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಇತ್ತೀಚೆಗೆ ಪ್ರವೀಣ್ ಬಗ್ಗೆ ಅವಹೇಳನ ಮಾಡಿ ಪೋಸ್ಟ್ ಮಾಡಿದ್ದರು. ಪ್ರವೀಣ್ ಫರ್ನಾಂಡೀಸ್ ಮೇಲೆ ಹಲವು ಬಾರಿ ದಾಳಿಯಾಗಿತ್ತು. ಬಳಿಕ ಸರ್ಕಾರದಿಂದ ಪಿಸ್ತೂಲ್ ಪಡೆದುಕೊಂಡಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಪಿಸ್ತೂಲ್ ಸ್ಥಳೀಯ ಠಾಣೆಗೆ ಒಪ್ಪಿಸಿದ್ದಾರೆ. ಇದೇ ಸಂದರ್ಭವನ್ನು ಕಿಡಿಗೇಡಿಗಳು ಸುದುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಪ್ರವೀಣ್ ಫರ್ನಾಂಡೀಸ್ ದೂರು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು