News Karnataka Kannada
Thursday, May 09 2024
ಮಂಗಳೂರು

ಉಡುಪಿ: ಗಮನ ಸೆಳೆದ ಯೋಗ ಸಾಧಕಿ ತನುಶ್ರೀ ಶೀರ್ಷಾಸನ ಭಂಗಿ

Tanushree Pitrodi
Photo Credit : News Kannada

ಉಡುಪಿ: ಉಡುಪಿಯ ಯೋಗ ಸಾಧಕಿ ಎಂಟು ದಾಖಲೆಗಳನ್ನು ಪೂರೈಸಿರುವ ತನುಶ್ರೀ ಪಿತ್ರೋಡಿಯವರು ಶೀರ್ಷಾಸನ ಭಂಗಿಯ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ತಲೆಯ ಮೇಲೆ ನಿಲ್ಲುವ ಶೀರ್ಷಾಸನವನ್ನೇ ಟೆನ್ ಟು ವನ್ ಎಂಬ ಕ್ರಿಯೇಟಿವ್ ಐಡಿಯಾ ಮಾಡಿದ್ದಾರೆ ತನುಶ್ರೀ ಪಿತ್ರೋಡಿ. ಯೋಗ ಪಟುವಿನ ಪೋಷಕರಾದ ಸಂಧ್ಯಾ ಉದಯ್ ಕುಮಾರ್ ಪಿತ್ರೋಡಿ ಈ ಉಪಾಯ ಕೊಟ್ಟಿದ್ದಾರೆ. ಗಡಿಯಾರದ ಮುಳ್ಳಿನ ಮಾದರಿಯ ಕ್ರಿಯೇಟಿವ್ ಯೋಗಾಸನ ಎಲ್ಲರ ಗಮನ ಸೆಳೆದಿದೆ.

ಈಗಾಗಲೇ ಈ ಖ್ಯಾತ ಯೋಗ ತಾರೆ ತನುಶ್ರೀ ಪಿತ್ರೋಡಿ ಅವರು 43.18 ನಿಮಿಷಗಳಲ್ಲಿ 245 ಯೋಗಾಸನಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಏಳನೇ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಉದ್ಯಾವರ ನಿವಾಸಿಗಳಾದ ಪಿತ್ರೋಡಿ ಉದಯ್ ಕುಮಾರ್ ಮತ್ತು ಸಂಧಾ ದಂಪತಿಯ ಪುತ್ರಿ ತನುಶ್ರೀ ಉಡುಪಿಯ ಸೇಂಟ್ ಸಿಸಿಲಿಯಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾರೆ. ಅವರು ರಾಮಕೃಷ್ಣ ಕೊಡಂಜ, ಯೋಗ ಗುರು ನರೇಂದ್ರ ಕಾಮತ್, ಕಾರ್ಕಳ ಮತ್ತು ಡಾ ಶೋಭಿತಾ ಶೆಟ್ಟಿ ಅವರಿಂದ ಯೋಗ ಮಾರ್ಗದರ್ಶನ ಪಡೆಯುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು