News Karnataka Kannada
Saturday, May 18 2024
ಮಂಗಳೂರು

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದಲ್ಲಿ ತುಳು ನಾಟಕ ಪರ್ಬ 2022

Tulu Drama Purba 2022
Photo Credit : By Author

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದಲ್ಲಿ ನಡೆಯುವಂತಹ ತುಳು ನಾಟಕ ಪರ್ಬ 2022 ಉದ್ಘಾಟಿಸಿ ಮಹಾನಗರ ಪಾಲಿಕೆಯ ಆಯುಕ್ತರು ಶ್ರೀಯುತ ಅಕ್ಷಯ್ ಶ್ರೀಧರ್ ಮಾತನಾಡಿದರು.

ತುಳು ಭಾಷೆಯನ್ನು ಉಳಿಸುವ ಬೆಳೆಸುವ ಮತ್ತು ಕಲಾವಿದರಿಗೆ ಆಶ್ರಯವನ್ನು ನೀಡುವಂತಹ ಹಲವಾರು ಕಾರ್ಯಕ್ರಮಗಳನ್ನು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು ಸಮಸ್ತ ತುಳುವರು ಇಂತಹ ಕಾರ್ಯಕ್ರಮಗಳೊಂದಿಗೆ ಕಲೆಯನ್ನು ಮತ್ತು ಭಾಷೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಆ ಮೂಲಕ ತುಳು ಸಾಹಿತ್ಯ ಅಕಾಡೆಮಿಯೊಂದಿಗೆ ಕೈಜೋಡಿಸಬೇಕು ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾಟಕ ಪರ್ಬ 2022 ಕ್ಕೆ ಸಂಪೂರ್ಣ ರೀತಿಯಲ್ಲಿ ಸಹಕರಿಸಲಾಗುವುದು ಎಂದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶವನ್ನು ಒದಗಿಸಿ ಕೊಡಬೇಕು ಆ ಮುಖೇನವಾಗಿ ಕಲೆಯೊಂದಿಗೆ ಕಲಾವಿದನ ಪ್ರತಿಭೆಯನ್ನು ತೋರಿಸುವ
ವೇದಿಕೆಯನ್ನು ನಿರ್ಮಿಸಬೇಕು ಎನ್ನುವ ಕಾರಣಕ್ಕಾಗಿ ಮಹಾನಗರ ಪಾಲಿಕೆಯ ಸಂಪೂರ್ಣ ಸಹಕಾರದೊಂದಿಗೆ
ತುಳು ನಾಟಕ ಪರ್ಬ 2022 ನ್ನು ಆಯೋಜಿಸಲಾಗಿದೆ.

7 ದಿನಗಳಲ್ಲಿ ಸುಮಾರು 8 ತಂಡಗಳ ಬೇರೆಬೇರೆ ನಾಟಕಗಳ ಪ್ರದರ್ಶನ ಅದರೊಂದಿಗೆ ಕಲೆಗಾಗಿ, ರಂಗಭೂಮಿಗಾಗಿ ತಮ್ಮನ್ನು ಅರ್ಪಿಸಿ ಕೊಂಡಂತಹ ಕಲಾ ಮಾತೆಯ ಮಡಿಲು ಸೇರಿದ ಕಲಾವಿದರ ಹೆಸರನ್ನು ವೇದಿಕೆಗೆ ಇರಿಸಿ ಆ ಮೂಲಕ ಅವರನ್ನು
ಸ್ಮರಿಸಿಕೊಳ್ಳಲಾಗುತ್ತದೆ. 7 ದಿನಗಳಲ್ಲಿ ಸುಮಾರು 23ಮಂದಿ ರಂಗಭೂಮಿಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಸುನೀತಾ ಎಕ್ಕೂರು ಹಾಗೂ ವಾಸುದೇವ ಲಾಯಿಲಾ, ರಘುರಾಮ ಶೆಟ್ಟಿ ಬೆಳ್ತಂಗಡಿ ರವರನ್ನು ಸಂಮಾನಿಸಲಾಯಿತು.

ನಮ್ಮ ಟೀವಿಯ ನಿರ್ದೇಶಕರು ಡಾ| ಶಿವಶರಣ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ, ಸೀತಾರಾಮ ಹೆಗ್ಡೆ, ಸದಾಶಿವ ಕುಕ್ಯಾನ, ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀಮತಿ ಶಕೀಲಾ ಕಾವ, ಗಣೇಶ್ ಕುಲಾಲ್ ಕೋಡಿಕಲ್, ಅಕಾಡೆಮಿ ರಿಜಿಸ್ಟಾರ್ ಶ್ರೀಮತಿ ಕವಿತಾ, ಅಕಾಡೆಮಿ ಸದಸ್ಯರಾದ ಶ್ರೀ ನರೇಂದ್ರ ಕೆರೆಕಾಡು, ಪಿ.ಎಂ ರವಿ, ನಾಗೇಶ್ ಕುಲಾಲ್, ಮೊದಲಾದವರು ಉಪಸ್ಥಿತರಿದ್ದರು.

ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‌ಸಾರ್ ಸ್ವಾಗತಿಸಿದರು, ಕಡಬ ದಿನೇಶ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ನಂತರ ನವರಸ ಕಲಾವಿದೆರ್, ಓಂ ಶಕ್ತಿ ಗೆಳೆಯರ ಬಳಗ ಲಾಯಿಲ, ಬೆಳ್ತಂಗಡಿ ತಂಡದಿಂದ “ತುಂಗಭದ್ರಾ” ನಾಟಕ ಪ್ರದರ್ಶನಗೊಂಡಿತು.

ಕಲೆಯ ಮೂಲಕ ಭಾಷೆಯು ಉಳಿಯುತ್ತದೆ ಕಲಾವಿದ ಬೆಳೆಯುತ್ತಾನೆ ತುಳು ಭಾಷೆಯನ್ನ ಉಳಿಸಿ ಬೆಳೆಸುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ನಾಟಕ ಪರ್ಬ 2022 ಹಮ್ಮಿಕೊಂಡಿರುವುದು ಶ್ಲಾಘನೀಯ – ಮಹಾನಗರ ಪಾಲಿಕೆಯ ಆಯುಕ್ತರು
ಶ್ರೀಯುತ ಅಕ್ಷಯ್ ಶ್ರೀಧರ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು