News Karnataka Kannada
Sunday, May 19 2024
ಮಂಗಳೂರು

ಮಂಗಳೂರಿನಲ್ಲಿ ಮೂರು ದಿನಗಳ ಬೈಬಲ್ ಪ್ರದರ್ಶನ

Three-day Bible exhibition in Mangaluru
Photo Credit : By Author

ಮಂಗಳೂರು: ಬೈಬಲ್ ಆಲಿಸಿ, ಬೈಬಲ್ ಓದಿ, ಬೈಬಲ್  ಅಧ್ಯಯನ ಮಾಡಿ, ಬೈಬಲ್‌ನಲ್ಲಿ ಪ್ರಾರ್ಥಿಸಿ ಮತ್ತು ಬೈಬಲ್‌ನ್ನೇ ಜೀವಿಸಿ.’ ಸುಮಾರು 40 ವರ್ಷಗಳ ಹಿಂದೆ ಮಂಗಳೂರು ಬಂದರಿಗೆ ಬಂದ ಲೋಗೋಸ್ ಶಿಪ್‌ನಲ್ಲಿ ಸೆಟ್ ಮಾಡಿದ ಬೈಬಲ್ ಲೈಬ್ರರಿಯಲ್ಲಿ ಕೇಳಿದ ಈ ಸುಂದರವಾದ ಪದಗಳು ನನಗೆ  ನೆನಪಿಗೆ ಬರುತ್ತವೆ. ಈ ಮಾತುಗಳು ಖಂಡಿತವಾಗಿಯೂ ನಮ್ಮ ಜೀವನವನ್ನು ಸಮೃದ್ಧಗೊಳಿಸುತ್ತದೆ,” ಎಂದು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಗುರು ಮತ್ತು ಇಂಗ್ಲಿಷ್ ಹೊಸ ಒಡಂಬಡಿಕೆಯನ್ನು ಕೊಂಕಣಿ ಭಾಷೆಗೆ ಭಾಷಾಂತರಿಸಿದ ವಂದನೀಯ ಡಾ. ವಿಲಿಯಂ ಬರ್ಬೋಜಾ ಹೇಳಿದರು.

ಅವರು ಗುರುವಾರ, ಜನವರಿ 26, 2023 ರಂದು ಮಂಗಳೂರಿನ ಜೆಪ್ಪುವಿನ ಸಂತ ಅಂತೋನಿ ಆಶ್ರಮದಲ್ಲಿ ನಡೆದ ಮೂರು ದಿನಗಳ ಬೈಬಲ್  ಪ್ರದರ್ಶನದ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಮಂಗಳೂರು ಧರ್ಮಕ್ಷೇತ್ರದ ಬೈಬಲ್, ಸುವಾರ್ತ ಪ್ರಸಾರ, ಸಾಮಾಜಿಕ ಸಂಪರ್ಕ ಮತ್ತು ಕಿರುಕ್ರೈಸ್ತ ಸಮುದಾಯದ ಆಯೋಗಗಳ ಸಹಯೋಗದಲ್ಲಿ ಸಂತ ಅಂತೋನಿ ಆಶ್ರಮ, ಸಂತ ಜೋಸೆಫ್ ಸೆಮಿನರಿ, ಕಾಸ್ಸಿಯಾ, ಜೆಪ್ಪು ಮತ್ತು ವೆಲೆನ್ಸಿಯಾ ಚರ್ಚ್ ಗಳು ಜಂಟಿಯಾಗಿ ನಗರದ ಜೆಪ್ಪು, ಸಂತ ಅಂತೋನಿ ಆಶ್ರಮದಲ್ಲಿ ಜನವರಿ 26 ರಿಂದ 28ರ ಸಂಜೆಯವರೆಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಸಂತ ಅಂತೋನಿ ದತ್ತಿ ಸಂಸ್ಥೆಗಳ ಸಂಚಾಲಕ ಹಾಗೂ ವಸ್ತುಪ್ರದರ್ಶನದ ಸಂಚಾಲಕ ವಂದನೀಯ ಜೆ.ಬಿ.ಕ್ರಾಸ್ತಾ, ಜೆಪ್ಪುವಿನ ಸೇಂಟ್ ಜೋಸೆಫ್ ಸೆಮಿನರಿಯ ರೆಕ್ಟರ್ ವಂದನೀಯ ಡಾ.ರೊನಾಲ್ಡ್ ಸೆರಾವೊ, ಸಣ್ಣಕ್ರೈಸ್ತ ಸಮುದಾಯದ ಸಂಚಾಲಕ ವAದನೀಯ ಜೋಕಿಮ್ ಫೆರ್ನಾಂಡಿಸ್, ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ವಂದನೀಯ ಅನಿಲ್ ಫೆರ್ನಾಂಡಿಸ್, ಧರ್ಮಕ್ಷೆತ್ರದ ಸುವಾರ್ತ ಪ್ರಸಾರ ಆಯೋಗದ ಕಾರ್ಯದರ್ಶಿ ಮತ್ತು ಕಾರ್ಯಕ್ರಮದ ಸಂಯೋಜಕ ವಂದನೀಯ ರೂಪೇಶ್ ತಾವ್ರೊ, ಫೋರ್ ವಿಂಡ್ಸ್ ಜಾಹಿತರಾತು ಸಂಸ್ಥೆಯ ನಿರ್ದೇಶಕ ಏಲಿಯಾಸ್ ಫೆರ್ನಾಂಡಿಸ್, ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕ ವಂದನೀಯ ಲ್ಯಾರಿ ಪಿಂಟೊ, ಮತ್ತು ಆರ್ಸುಲಾಯ್ನ್ ಸಿ| ಡೋರೀನ್ ಹಾಗೂ ಅನೇಕ ಧಾರ್ಮಿಕ ಸಹೋದರಿಯರು, ಯುವಜನರು ಮತ್ತು ಸಂತ ಅಂತೋನಿ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

ಬೈಬಲ್ ಗ್ರಂಥವನ್ನು ವಿಶೇಷ ಗೌರವದೊಂದಿಗೆ ಪ್ರಾರ್ಥನಾ ಮಂದಿರದಿಂದ ಪ್ರದರ್ಶನ ಸಭಾಂಗಣದವರೆಗೆ ಮೆರವಣಿಗೆಯಲ್ಲಿ ತರಲಾಯಿತು. ವಂದನೀಯ ಡಾ. ರೊನಾಲ್ಡ್ ಸೆರಾವೊ, ವಂದನೀಯ ಡಾ. ವಿಲಿಯಂ ಬರ್ಬೋಜಾ ಮತ್ತು ವಂದನೀಯ ಜೆ.ಬಿ ಕ್ರಾಸ್ತಾ ಅವರು ಬೈಬಲ್‌ಗೆ ಹಾರಾರ್ಪಣೆಗೈದು, ಧೂಪ ಹಾಕಿ ಗೌರವಿಸಿದರು ಮತ್ತು ಪ್ರದರ್ಶನದ ಆವರಣವನ್ನು ಪವಿತ್ರಜಲದಿಂದ ಆಶೀರ್ವದಿಸಿದರು. ಈ ಸಂದರ್ಭ ಪ್ರಾರ್ಥನೆಯ ಮೂಲಕ ಬೈಬಲ್‌ನ ಒಂದು ಭಾಗವನ್ನು ಓದಲಾಯಿತು.

ಸಹಾಯಕ ನಿರ್ದೇಶಕರಾದ ವಂದನೀಯ ಲ್ಯಾರಿ ಪಿಂಟೋ ಮಾತನಾಡಿ, “ಕಥೊಲಿಕ ಕ್ರೈಸ್ತರ ಪೂಜಾವಿಧಿಯ ಕ್ಯಾಲೆಂಡರ್‌ನ ಮೂರನೇ ಭಾನುವಾರ – ಈ ವರ್ಷ ಜನವರಿ 22 ರಂದು ಸಾರ್ವತ್ರಿಕವಾಗಿ ಆಚರಿಸಲಾದ ‘ಬೈಬಲ್ ಭಾನುವಾರ’ದ ಪ್ರಯುಕ್ತ ಹಾಗೂ ಸಂತ ಆಂತೋನಿ ಆಶ್ರಮದ 125 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ” ಎಂದರು.

ವಂದನೀಯ ಜೆ. ಬಿ. ಕ್ರಾಸ್ತರವರು ಮುಖ್ಯ ಆತ್ತಿಥಿಗಳನ್ನು ಸ್ವ್ವಾಗತಿಸಿದರು. ಈ ಸಂಧರ್ಭ ಬೈಬಲನ್ನು ಕೊಂಕಣಿಗೆ ಭಾಷಾಂತರಿಸಲು ಜೀವನಪೂರ್ತಿ ಶ್ರಮಿಸಿದ ವಂದನಿಯ ಡಾ. ವಿಲಿಯಂ ಬರ್ಬೊಜಾರವನ್ನು ಅಭಿನಂದಿಸಿ ಗೌರವಿಸಿದರು.

ಈ ಪ್ರದರ್ಶನವು ಪವಿತ್ರಗ್ರಂಥದ ಸಾರ್ವಜನಿಕ ಓದುವಿಕೆ, ಬೈಬಲ್ ಕಲೆ, ಚಿತ್ರಕಲೆ, ವಿಡಿಯೋ ಪ್ರಸ್ತುತಿ, ರಸಪ್ರಶ್ನೆ, ಹಾಡುಗಳು, ಸ್ಕಿಟ್‌ಗಳು ಮತ್ತು ನೃತ್ಯಗಳನ್ನುಒಳಗೊಂಡಿದೆ ಹಾಗೂ ಬೈಬಲ್‌ಗಳು ಮತ್ತು ಇತರ ಧಾರ್ಮಿಕವಸ್ತುಗಳು ಮಾರಾಟಕ್ಕೆ ಲಬ್ಯವಿದೆ. ಕೆನರಾ ಸಂಪರ್ಕ ಕೇಂದ್ರದ ವತಿಯಿಂದ 30 ನಿಮಿಷಗಳ ಬೈಬಲ್ ಸಾಂದರ್ಬಿಕ ಕಿರುಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ವಂದನೀಯ ರೂಪೇಶ್ ಹೇಳಿದರು.

ಸ್ವಯಂಸೇವಕರಲ್ಲಿ ಒಬ್ಬರಾದ  ಟ್ರೆಸ್ಸಿ ಡಿಸೋಜಾ, “ದೇವರ ವಾಕ್ಯವನ್ನು ಓದುವ, ಅದನ್ನು ಪ್ರೀತಿಸುವ ಮತ್ತು ಅದರಂತೆ ಬದುಕುವವರ ಸೇವೆಯಲ್ಲಿರಲು ಸಂತೋಷವಾಗಿದೆ. ಬೈಬಲ್‌ಗಳು ಪ್ರತಿಯೊಬ್ಬರ ಕೈ, ಹೃದಯ ಮತ್ತು ಮನೆಯನ್ನು ತಲುಪಲಿ ಎಂದು ನಾನು ಪ್ರಾರ್ಥಿಸುತ್ತೇನೆೆ!

ಪ್ರದರ್ಶನವು ಎಲ್ಲಾ ಮೂರು ದಿನಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿದಿನ ಸಂಜೆ 4.30ರಿAದ 7ರವರೆಗೆ ಬೈಬಲ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಇದೇ ಜನವರಿ 28ರ ಶನಿವಾರ ಸಂಜೆ 6 ಗಂಟೆಗೆ ಸಮಾರೋಪ ಕಾರ್ಯಕ್ರಮವನ್ನು ಆಯೋಜಿಸಿದೆ, ಎಂದು ಸಂಘಟಕರು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು