News Karnataka Kannada
Sunday, April 28 2024
ಸಂಪಾದಕರ ಆಯ್ಕೆ

ಬಿಜೆಪಿಗೆ ವರವಾಗುವುದೇ ತ್ರಿಮೂರ್ತಿಗಳ ತಿರುಗಾಟ

BJP releases list of 170-180 candidates today, puttur, Sullia, Byndoor MLAs not given tickets
Photo Credit : Wikimedia

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಾಗುತ್ತಿದ್ದಂತೆ ಪ್ರಧಾನಿ, ಗೃಹಸಚಿವ ಸೇರಿದಂತೆ ಬಿಜೆಪಿ ರಾಷ್ಟ್ರನಾಯಕರ ರಾಜ್ಯ ಭೇಟಿ ಹೆಚ್ಚುತ್ತಿದೆ. ಆ ಮೂಲಕ ದಕ್ಷಿಣ ಭಾರದತದಲ್ಲಿ ಅಧಿಕಾರದಲ್ಲಿರುವ ಏಕೈಕ ರಾಜ್ಯದಲ್ಲಿ ತಮ್ಮ ನೆಲೆಯನ್ನು ಗಟ್ಟಿಗೊಳಿಸಿಬೇಕು ಎಂಬುದು ಬಿಜೆಪಿ ಉನ್ನತ ನಾಯಕರ ಚಿಂತನೆ. ಮೊನ್ನೆ ಮೊನ್ನೆಗೃಹಸಚಿವ ಅಮಿತ್‌ ಶಾ ಪುತ್ತೂರಿನಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವದ ನೆಪದಲ್ಲಿ ಮಾಡಿದ ಭಾಷಣವೂ ಕೂಡ ಪಕ್ಷ ಹಿಡಿತ, ಮತಬ್ಯಾಂಕ್‌ ಭದ್ರಪಡಿಸುವ ಸಲುವಾಗಿಯೇ ಇತ್ತು ಎಂಬುದು ಸುಳ್ಳಲ್ಲ. ಏರ್‌ ಶೋ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯೂ ಕೂಡ ದೇಶ, ಪಕ್ಷದ ಸಾಧನೆಗಳನ್ನು ಹೇಳಿಕೊಂಡಿದ್ದೂ ಆಯಿತು.

ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ ನಡ್ಡಾ ಹಲವು ಸಭೆ ಸಮಾರಂಭ ರೋಡ್‌ ಶೋ, ಕಾರ್ಯಕರ್ತರ ಸಭೆ ನಡೆಸಿದ್ದೂ ಆಗಿದೆ. ಫೆ. 27ಕ್ಕೆ ಶಿವಮೊಗ್ಗ ಏರ್‌ ಪೋರ್ಟ್‌ ಉದ್ಘಾಟನೆ ನಡೆಯಲಿದ್ದು ಮತ್ತೊಮ್ಮೆ ಪ್ರಧಾನಿಯವರು ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿ ತ್ರಿಮೂರ್ತಿಗಳ ಕರ್ನಾಟಕ ಯಾತ್ರೆ ವಿಧಾನ ಸಭೆ ಚುನಾವಣೆಯನ್ನೇ ಕೇಂದ್ರೀಕರಿಸಿದೆ ಎಂಬುದು ಬಹಿರಂಗವಾಗಿದೆ.

ನೆರೆ ಬಂದಾಗ ಕಣ್ಣೆತ್ತಿಯೂ ನೋಡದವರು ಮತಕ್ಕಾಗಿ ಬಂದಿದ್ದಾರೆ: ನಡ್ಡಾ, ಶಾ, ನರೇಂದ್ರ ಮೋದಿ ತ್ರಿಮೂರ್ತಿಗಳು ಚುನಾವಣೆ ಕೇಂದ್ರೀಕರಿಸಿ ರಾಜ್ಯ ಸುತ್ತಾಟ ಆರಂಭಿಸಿರುವುದು ವಿಪಕ್ಷ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ಈ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರು ನೆರೆ, ಪ್ರವಾಹ ಬಂದು ಜನರು ಅನ್ನ, ಸೂರಿಗಾಗಿ ಪರದಾಡುತ್ತಿದ್ದಾಗ ಇತ್ತ ಇಣುಕಿಯೂ ನೋಡದ ಪ್ರಧಾನಿ, ಗೃಹಸಚಿವರು ಈಗ ಚುನಾವಣೆಯತ್ತ ದೃಷ್ಟಿಹರಿಸಿ ಆಗಾಗ್ಗೆ ಜನರ ಕಣ್ಣೀರೊರೆಸುವ ನಾಟಕವಾಡುತ್ತಿದ್ದಾರೆ ಎಂದು ಅಣಕಿಸಿದ್ದೂ ಆಗಿದೆ.

ರಾಜ್ಯ ನಾಯಕರಿಗೆ ಶಕ್ತಿ ಇಲ್ಲವೇ: ರಾಜ್ಯದಲ್ಲಿ ಪಕ್ಷ ಸಂಘಟಿಸುವ ಶಕ್ತಿ ಬಿಜೆಪಿ ನಾಯಕರಿಲ್ಲವೇ ಎಂಬ ಪ್ರಶ್ನೆಗೆ ಹಲವು ಬಿಜೆಪಿ ವಯಸ್ಸಿನ ಮಿತಿಯ ನೆಪಹೇಳಿ ಯಡಿಯೂರಪ್ಪ ಸೇರಿದಂತೆ ಹಲವು ನಾಯಕರನ್ನು ನೇಪಥ್ಯಕ್ಕೆ ಸರಿಸಿ ಹಲವು ಕಾಲವಾಗಿದೆ. ಪ್ರಸ್ತುತ ಅವರಿಗೆ ಸ್ವಪಕ್ಷೀಯರಿಗಿಂತ ಸಿದ್ದರಾಮಯ್ಯ, ಡಿಕೆಶಿಯಂತಹ ಪ್ರತಿಪಕ್ಷ ನಾಯಕರೇ ಆತ್ಮೀಯರಾಗಿದ್ದಾರೆ. ಮೊನ್ನೆ ಅಧಿವೇಶನದಲ್ಲಿ ಸಿದ್ದರಾಮಯ್ಯ ಅವರನ್ನು ಹೊಗಳಿರುವುದು ಇದಕ್ಕೆ ಸಾಕ್ಷಿ ಒದಗಿಸುವಂತಿದೆ. ಉಳಿದಂತೆ ಕೆ.ಎಸ್‌. ಈಶ್ವರಪ್ಪ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ಬಳಿಕ ರಾಜಕೀಯ ಅಜ್ಞಾತವಾಸದಲ್ಲಿದ್ದಾರೆ. ಇನ್ನು ಸಂಸದ, ಬಿಜೆಪಿ ರಾಜ್ಯಧ್ಯಾಕ್ಷ ನಳೀನ್‌ ಕುಮಾರ್‌ ಕಟೀಲ್‌ ಸೇರಿದಂತೆ ಹಲವು ನಾಯಕರ ವಿರುದ್ಧ ಸ್ವಕ್ಷೇತ್ರದಲ್ಲಿಯೇ ಮಡುಗಟ್ಟಿದ ಆಕ್ರೋಶವಿದೆ. ಹೀಗಾಗಿ ರಾಜ್ಯ ಬಿಜೆಪಿ ಘಟಕ ತ್ರಿಮೂರ್ತಿಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು