News Karnataka Kannada
Thursday, May 02 2024
ಮಂಗಳೂರು

ಸಿನರ್ಜಿಯಾ 2023: ಸಹ್ಯಾದ್ರಿ ಕಾಲೇಜಿನಲ್ಲಿ ಡಿ. 7 ರಿಂದ 9 ರವರೆಗೆ ತಾಂತ್ರಿಕ ಆವಿಷ್ಕಾರ ಸಂಭ್ರಮ

Mng
Photo Credit : News Kannada

ಮಂಗಳೂರು: ಮಂಗಳೂರಿನ ಅಡ್ಯಾರಿನಲ್ಲಿರುವ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜೈಂಟ್ ಕಾಲೇಜಿನಲ್ಲಿ ಇದೇ ಬರುವ ಡಿಸೆಂಬರ್ 7 ರಿಂದ 9 ರವರೆಗೆ ಮೂರು ದಿನಗಳ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಆವಿಷ್ಕಾರಕ್ಕೆ ಸಂಬಂಧಿಸಿದ ಸಿನರ್ಜಿಯಾ 2023 ಅನ್ನು ಆಯೋಜಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಉಪನ್ಯಾಸಕರಾದ ಪ್ರಶಾಂತ್‌ ರಾವ್‌, ವಿಷ್ಣು ಪ್ರಸಾದ್‌ ತಿಳಿಸಿದ್ದಾರೆ.

“ವೇರ್ ಇನ್ನೋವೇಶನ್ ಚೇಂಜಸ್‌ದ ಪ್ಯೂಚರ್” ಎಂಬ ಟ್ಯಾಗ್‌ ಲೈನ್‌ನೊಂದಿಗೆ, ಸಿನರ್ಜಿಯಾವು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು, ಸಹವರ್ತಿಗಳೊಂದಿಗೆ ಮತ್ತು ಕೈಗಾರಿಕಾ ಮುಖಂಡರೊಂದಿಗೆ ಸಂಪರ್ಕ ಹೊಂದಲು, ಸಾಮಾಜಿಕ ಮತ್ತು ಕೈಗಾರಿಕಾ ಸವಾಲುಗಳನ್ನು ಪರಿಹರಿಸುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಲು ಒಂದು ವೇದಿಕೆಯಾಗಿದೆ. ಯುವ ಜನಾಂಗದಲ್ಲಿ ಜ್ಞಾನದ ಜೊತೆಗೆ ಅನುಭವ ನೀಡುವಲ್ಲಿ ಸಿನರ್ಜಿಯಾ ಪ್ರಮುಖ ಪಾತ್ರವಹಿಸುತ್ತದೆ ಮತ್ತು ತಂತ್ರಜ್ಞಾನ, ಆವಿಷ್ಕಾರದ ಕ್ಷೇತ್ರದಲ್ಲಿ ಮುಂದಿನ ಪೀಳಿಗೆಯ ನಿರ್ಮಾಣಕ್ಕೆ ಉತ್ತೇಜಿಸುತ್ತದೆ.

ಸಿನರ್ಜಿಯಾವು SSTH, ಏರೋಫಿಲಿಯಾ ಮತ್ತು ಕೋಡ್‌ಪ್ಲೇಜ್ ಎಂಬ ಮೂರು ವಿಭಿನ್ನ ಪರಿಕಲ್ಪನೆಗಳ ಸಮ್ಮಿಲನವಾಗಿದೆ, ಈ ಮೂರೂ ಪರಿಕಲ್ಪನೆಗಳು ಕಲಿಕೆ ಮತ್ತು ಉತ್ಸಾಹದ ವಿಶಿಷ್ಟ ಅನುಭವವನ್ನು ನೀಡುತ್ತವೆ.

ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH) ಪ್ರಾಯೋಗಿಕ ಕಲಿಕೆಗೆ ಉತ್ತೇಜನ ನೀಡುತ್ತದೆ. ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜ್‌ನ ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ಕೃಷಿ, ಆರೋಗ್ಯ, ಮೀನುಗಾರಿಕೆ, ನವೀಕರಿಸಬಹುದಾದ ಶಕ್ತಿ, ತ್ಯಾಜ್ಯ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಸೂಕ್ತ ರೀತಿಯಲ್ಲಿ ಬಳಸಲು ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಯೋಜನೆಗಳಿಗೆ ಪ್ರೋತ್ಸಾಹಿಸುವ ವೇದಿಕೆಯಾಗಿದೆ.

SSTH ನ ಟ್ರ್ಯಾಂಡ್ ಫಿನಾಲೆಯು ವಿದ್ಯಾರ್ಥಿಗಳ ಸೃಜನಶೀಲ ಯೋಜನೆಗಳ ಅತ್ಯಾಕರ್ಷಕ ಪ್ರದರ್ಶನವನ್ನು ಹೊಂದಿರುತ್ತದೆ. ಪ್ರಮುಖ ಉದ್ಯಮ ವೃತ್ತಿಪರರು ಈ ಕಾರ್ಯಕ್ರಮಕ್ಕೆ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.

ಅಂತಿಮ ದಿನ ಸಮಾರೋಪ ಸಮಾರಂಭವನ್ನು ಒಳಗೊಂಡಿದ್ದು, ಎಲ್ಲಾ ಸ್ಪರ್ಧೆಗಳ ವಿಜೇತರನ್ನು ಘೋಷಿಸುವ ಮೂಲಕ, ಸಿನರ್ಜಿಯಾ’23 ಮುಕ್ತಾಯಗೊಳ್ಳುತ್ತದೆ.
ಮೂರು ದಿನಗಳುದ್ದಕ್ಕೂ, ಸಿನರ್ಜಿಯಾವು ಆಹಾರ ಮೇಳ ಮತ್ತು ಪ್ರತಿಭಾ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ.

ಸಿನರ್ಜಿಯಾ’23 ಕಾರ್ಯಕ್ರಮಕ್ಕೆ ಸಹ್ಯಾದ್ರಿ ಕಾಲೇಜು 200 ಕ್ಕೂ ಹೆಚ್ಚು ಸಂಸ್ಥೆಗಳಿಂದ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತಿದೆ ಮತ್ತು ವಿವಿಧ ಶ್ರೇಣಿಯ ಚಟುವಟಿಕೆಗಳು ಮತ್ತು ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ 6000ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ತಲುಪಲಿದೆ. ಸಿನರ್ಜಿಯಾವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕಾರ, ಆವಿಷ್ಕಾರ ಮತ್ತು ಭವಿಷ್ಯವನ್ನು ರೂಪಿಸಲು ಬರುವ ಯುವ ಮನಸ್ಸುಗಳಿಗೆ ಒಂದು ವೇದಿಕೆಯನ್ನು ಒದಗಿಸುತ್ತದೆ. ಅಂತೆಯೇ ಇದು ತಾಂತ್ರಿಕ ಪ್ರಗತಿ ಮತ್ತು ಸೃಜನಾತ್ಮಕ ಚಿಂತನೆಯ ಸಂಸ್ಕೃತಿಯನ್ನು ಪೋಷಿಸುತ್ತದೆ.

ವಿದ್ಯಾರ್ಥಿಗಳನ್ನು ಕೈಗಾರಿಕಾ ವೃತ್ತಿಪರರು ಮತ್ತು ಇಂಜಿನಿಯರ್‌ಗಳೊಂದಿಗೆ ಸಂಪರ್ಕಿಸಲಾಗುತ್ತದೆ; ಮುಂದೆ ಅವರು ಸಹ್ಯಾದ್ರಿ ಕಾಲೇಜ್‌ನ ಲಾಂಚ್‌ ಪ್ಯಾಡ್‌ಗಳು ಮತ್ತು ಇನ್‌ಕ್ಯುಬೇಟರ್‌ಗಳಿಗೆ ಭೇಟಿ ನೀಡುತ್ತಾರೆ ಮತ್ತು ಈ ಮೂಲಕ ಎಂಜಿನಿಯರಿಂಗ್‌ ಬಗ್ಗೆ ತಿಳುವಳಿಕೆಯನ್ನು ಪಡೆಯುತ್ತಾರೆ. ಈ ಅನುಭವವು ವಿದ್ಯಾರ್ಥಿಗಳಿಗೆ ಗ್ರಾಂಡ್ ಫಿನಾಲೆಗಾಗಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಅವರಿಗೆ ಸಹಾಯ ಮಾಡುತ್ತದೆ.

ಎರಡನೇ ದಿನವು ಸಿನರ್ಜಿಯಾ’23 ರ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ, ನಂತರ ದೇಶದ ಪ್ರಖ್ಯಾತ ಪ್ಲೇಯರ್ಡ್ಗಳಿಂದ ವೈಮಾನಿಕ ಪ್ರದರ್ಶನ ನಡೆಯುತ್ತದೆ.

ಏರೋಮಾಡೆಲಿಂಗ್ ಸ್ಪರ್ಧೆ, ಬಾಟ್ ಈವೆಂಟ್‌ಗಳು ಮತ್ತು 20-ಗಂಟೆಗಳ ಹ್ಯಾಕಥಾನ್‌ನಂತಹ ಈವೆಂಟ್‌ಗಳ ಪ್ರಾರಂಭದೊಂದಿಗೆ “ಬಿ ವಿತ್ ಇಂಜಿನಿಯರಿಂಗ್” ಕಾರ್ಯಕ್ರಮ ಮುಂದುವರಿಯುತ್ತದೆ ಸಂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ.

ಏರೋಫಿಲಿಯಾ ಮುಖ್ಯವಾಗಿ ಏರೋಮಾಡೆಲಿಂಗ್‌ನ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬೋಟ್ (BOT) ಬಿಲ್ಡಿಂಗ್, ಡೋನ್ ರೇಸಿಂಗ್‌ನಂತಹ ವೈವಿಧ್ಯಮಯ ಸ್ಪರ್ದೆಗಳನ್ನೂ ಸಹ ಒಳಗೊಂಡಿದೆ. ಈ ತರಹದ ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಿಗೆ ವೈಮಾನಿಕ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದಲ್ಲದೆ, ರೊಬೊಟಿಕ್ಸ್‌ನಲ್ಲಿನ ಸದ್ಯದ ಪ್ರಗತಿಯನ್ನು ಎತ್ತಿ ತೋರಿಸುತ್ತದೆ.

ಕೋಡ್‌ಪ್ಲೇಜ್ 20-ಗಂಟೆಗಳ ಹ್ಯಾಕಥಾನ್ ಆಗಿದ್ದು, ಇದರಲ್ಲಿ ಭಾಗವಹಿಸುವವರು ತಮ್ಮ ಕೋಡಿಂಗ್ ಕೌಶಲ್ಯಗಳನ್ನು, ವಿವಿಧ ಕೈಗಾರಿಕೆಗಳಿಂದ ಪಡೆದ ಸಮಸ್ಯೆಗಳನ್ನು ಪರಿಹರಿಸಲು ಬಳಸುತ್ತಾರೆ. ಇದು ವಿದ್ಯಾರ್ಥಿಗಳ ಸೃಜನಶೀಲತೆಯ ಪ್ರದರ್ಶನಕ್ಕೆ ಒಂದು ಉತ್ತಮ ವೇದಿಕೆಯಾಗಿದೆ.

ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್‌ನ “ಬಿ ವಿತ್ ಇಂಜಿನಿಯರಿಂಗ್” ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡು, ಟಾಪ್ 100 ತಂಡಗಳನ್ನು ಸಹ್ಯಾದ್ರಿಯ ಕ್ಯಾಂಪಸ್‌ಗೆ ಆಹ್ವಾನಿಸಲಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು