News Karnataka Kannada
Tuesday, April 30 2024
ಮಂಗಳೂರು

ಸುಳ್ಯ: ಜನರನ್ನು ಓದಿನೆಡೆಗೆ ಕರೆ ತರುವುದು ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲು ಎಂದ ಚಂಬಲ್ತಿಮಾರ್

Bringing people back to studies is the biggest challenge before media, says Chambaltimar
Photo Credit : News Kannada

ಸುಳ್ಯ:ಕೊರೋನಾ ಕಾಲದಲ್ಲಿ ಅಡಿಮೇಲಾಗಿದ್ದ ಪತ್ರಿಕೋದ್ಯಮವು ಭರವಸೆ ಮೂಡಿಸಿ ಮತ್ತೆ ಚಿಗುರಿ ಕೊಳ್ಳುತಿದೆ. ಜನರನ್ನು ಓದಿನೆಡೆಗೆ ಮತ್ತೆ ಕರೆ ಬೇಕಾಗಿರುವುದು ಪತ್ರಿಕೋದ್ಯಮದ‌ ಮುಂದಿರುವ ದೊಡ್ಡ ಸವಾಲು ಎಂದು ಹಿರಿಯ ಪತ್ರಕರ್ತ,ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಹೇಳಿದ್ದಾರೆ.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.20 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ‘ಪ್ರಚಲಿತ ಪತ್ರಿಕೋದ್ಯಮ’ದ ಕುರಿತು ಉಪನ್ಯಾಸ ನೀಡಿದರು. ಕಾಲಘಟ್ಟಕ್ಕೆ ಅನುಸಾರವಾಗಿ ಮಾಧ್ಯಮಗಳು ಯೋಚನೆ ಮಾಡಿ ಪರಿಷ್ಕರಣೆಕೊಳ್ಳಬೇಕು‌. ಜನರ ಧ್ವನಿಯಾಗಿ ಓದುಗರನ್ನು ತನ್ನೆಡೆಗೆ ಸೆಳೆಯುವ ಹಾಗೆ ರೂಪುಗೊಳ್ಳಬೇಕು ಎಂದರು. ಮುದ್ರಣ ಮಾಧ್ಯಮಕ್ಕೆ ಎಂದೂ ಸಾವಿಲ್ಲ. ಆದರೆ ಮುದ್ರಣ‌‌ ಮಾಧ್ಯಮಗಳು ಕಾಲಕ್ಕನುಸಾರವಾಗಿ ಬದಲಾವಣೆ ಆಗಬೇಕಾಗಿದೆ.

ಪತ್ರಕರ್ತರು ಕೂಡ ಬದಲಾವಣೆಗೆ ಒಗ್ಗಿಕೊಂಡು ಅಪ್‌ಡೇಟ್ ಆಗಬೇಕು. ಜನರು ಮುದ್ರಣ ಮಾಧ್ಯಮಗಳ ಭಾಷೆ ಮತ್ತು ಸುದ್ದಿ ಸಂಸ್ಕೃತಿಯೆಡೆಗೆ ಮರಳಿ ಬರಲಿದ್ದಾರೆ. ಅದಕ್ಕಾಗಿ ಪತ್ರಕರ್ತರು ಉತ್ತಮ ಓದಿನ‌ ಮೂಲಕ ತಮ್ಮ ಬರವಣಿಗೆ ಮತ್ತು ಭಾಷೆಯನ್ನು ಬೆಳೆಸಿಕೊಂಡು ಆಕರ್ಷಕ ವೃತ್ತಿ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು‌.

ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈ ಸವಣೂರು ಉದ್ಘಾಟಿಸಿದರು.ಹಿರಿಯ ಪತ್ರಕರ್ತೆ ಚಂದ್ರಾವತಿ ಬಡ್ಡಡ್ಕ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಸುಳ್ಯ ತಾಲೂಕು ಸಂಘದ ಮಾಜಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್‌ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದಯಾನಂದ ಕೊರತ್ತೋಡಿ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು