News Karnataka Kannada
Friday, May 03 2024
ಮಂಗಳೂರು

ಬಳಂಜ ಅಟ್ಲಾಜೆ ಸ.ಕಿ ಪ್ರಾಥಮಿಕ ಶಾಲೆಯ ಬೆಳ್ಳಿ ಹಬ್ಬ ಸಮಾರಂಭ

Silver Jubilee Celebrations of Balanja Atlaje S.K. Primary School
Photo Credit : News Kannada

ಬೆಳ್ತಂಗಡಿ: ಒಂದು ಕಾಲದಲ್ಲಿ ಪಾಳು ಬಿದ್ದ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿ ಬ್ರಹ್ಮಕಶೋತ್ಸವ ಮಾಡುವ ಅನಿವಾರ್ಯತೆ ಇತ್ತು. ಇಂದು ಖಾಸಗಿ ಶಾಲೆಗಳ ಶಿಕ್ಷಣ ವ್ಯವಸ್ಥೆಯ ಗುಣಮಟ್ಟದಿಂದ ಪೋಷಕರ ಒಲವು ಖಾಸಗಿ ಶಿಕ್ಷಣದತ್ತ ಆಕರ್ಷಿತವಾಗಿದೆ. ಇದರಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕಾಗಿ ಸರಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗುವ ಜೊತೆ ಮೂಲ ಸೌಕರ್ಯ ಹೆಚ್ಚಾಗಬೇಕು.ಇದಕ್ಕೆ ಗ್ರಾಮಸ್ಥರು ನಮ್ಮೂರ ಶಾಲೆ ಬೆಳೆಸುವ ಸಂಕಲ್ಪ ಮಾಡಿದರೆ ಅದಕ್ಜೆ ಶಕ್ತಿಮೀರಿ ಕೈಜೋಡಿಸುವುದಾಗಿ ಶಾಸಕ ಹರೀಶ್ ಪೂಂಜಾ ಹೇಳಿದರು.

ಅವರು ಗುರುವಾರ ಬಳಂಜ ಅಟ್ಲಾಜೆ ಸ.ಕಿ ಪ್ರಾಥಮಿಕ ಶಾಲೆ ಇದರ ಬೆಳ್ಳಿ ಹಬ್ಬ ಮತ್ತು ಸರ್ವೋದಯ ಫ್ರೆಂಡ್ಸ್ ಅಟ್ಲಾಜೆ ಇದರ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶಾಲೆಗೆ ಕೊಡುಗೆ ನೀಡಿದ ವಿವಿದ ವಿದ್ಯಾಮಿಮಾನಿಗಳನ್ನು ಗೌರವಿಸಿ ಮಾತನಾಡಿ ಊರವರು ಸರಕಾರಿ ಶಾಲೆಯ ಅಭಿವೃದ್ದಿಗೆ ಕೈಜೋಡಿಸಿದರೆ ಸರಕಾರಿ ಶಾಲೆಯೊಂದು ರಾಷ್ಟಮಟ್ಟದಲ್ಲಿ ಹೇಗೆ ಗುರುತಿಸಲು ಕಾರಣವಾಗುತ್ತದೆ ಎಂದು ಬಂಟ್ವಾಳ ದಡ್ಡರಲಕಾಡು ಶಾಲೆಯ ನಿದರ್ಶನ ಕೊಡಬಹುದು.ಬೆರಳೆಣಿಕೆಯ ವಿದ್ಯಾರ್ಥಿಗಳಿದ್ದ ಶಾಲೆ ಇಂದು ಎರಡು ಸಾವಿರ ತನಕ ವಿದ್ಯಾರ್ಥಿಗಳಿದ್ದಾರೆ.ಅಲ್ಲದೆ ಖಾಸಗಿ ಶಾಲೆಗಿಂತ ದುಪ್ಪಟ್ಟು ಮೂಲಸೌಕರ್ಯ ಇದೆ. ತಾಲೂಕಿನ ಕೆಲವು ಶಾಲೆಗಳು ವಿದ್ಯಾರ್ಥಿಗಳ ಕೊರತೆ,ಮೂಲ ಸೌಕರ್ಯ ಕೊರತೆಯಿಂದ ಮುಚ್ಚು ಹಂತದಲ್ಲಿದೆ.ಇದಕ್ಕೆ ಊರವರು ದಡ್ಡಲಕಾಡು ಮಾದರಿಯಲ್ಲಿ ಅಭಿವೃದ್ದಿಗೆ ಸಂಕಲ್ಪ ಮಾಡಬೇಕು ಇದಕ್ಕೆ ಶಾಸಕನಾಗಿ ಊರವರ ಜೊತೆ ಕೈಜೋಡಿಸುತ್ತೇನೆ ಎಂದರು. ಸಂಘ ಸಂಸ್ಥೆಗಳು ಗ್ರಾಮದ ಅಭಿವೃದ್ದಿ ಹೇಗೆ ಆಗುತ್ತದೆ ಎಂಬುದಕ್ಕೆ ಬಳಂಜದ ಸಂಘ ಸಂಸ್ಥೆಗಳನ್ನು ನೋಡಬಹುದು ಅದರಲ್ಲು ಸರ್ವೋದಯ ಫ್ರೆಂಡ್ಸ್ ಕ್ಲಬ್ ಮಾಡುತ್ತಿರುವ ಸಮಾಜಸೇವೆ ರಾಜ್ಯಕ್ಕೆ ಮಾದರಿ ಎಂದರು.

ಬಳಂಜ ಮಾಜಿ ಮಂಡಲ ಪ್ರದಾನ ಜನ ಜನಜಾಗೃತಿ ವೇದಿಕೆಯ ಸ್ಥಾಪಕಾದ್ಯಕ್ಷ ಕೆ ವಸಂತ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮದ ಅಭಿವೃದ್ದಿಗೆ ಜನಪ್ರದಿನಿದಿಗಳ ಜೊತೆ ಗ್ರಾಮಸ್ಥರು ಕೈಜೋಡಿಸಿದಾಗ ಮಾತ್ರ ಅಭಿವೃದ್ದಿ ಕಾಣಬಹುದು. ಬಳಂಜ ಗ್ರಾಮದಲ್ಲಿ ಅನೇಕ ಮಂದಿ ಉದ್ಯಮಿಗಳು, ಸಾಧಕರು ಇದ್ದು ಇದರಿಂದ ರಾಜ್ಯವೇ ಬಳಂಜವನ್ನು ಗುರುತಿಸುವಂತಿದೆ. ಊರಿನ ಅಭಿವೃದ್ದಿಗೆ ಕೊಡುಗೆ ನೀಡಿದವರನ್ನು ಗುರುತಿಸುವ ಕಾರ್ಯ ಅಭಿನಂದನೀಯ ಎಂದರು.

ನಟ , ನಿರ್ದೇಶಕ ತಮ್ಮಣ್ಣ ಶೆಟ್ಟಿ ಮಾತನಾಡಿ ನಮ್ಮ ಮೂಲ ಸಂಸ್ಕೃತಿ ,ಸಂಸ್ಕಾರಗಳನ್ನು ತಿರುಚಿವುವವರೊಂದಿಗೆ ಕೈಜೋಡಿಸಿದರೆ ನಮ್ಮ ಸಂಸ್ಕ್ರತಿ ಸಂಸ್ಕಾರಗಳನ್ನು ನಾವೇ ನಾಶ ಮಾಡಿದಂತೆ.ಅದಕ್ಕಾಗಿ ಮೂಲ ಸಂಸ್ಥೆಗಳ ಬಗ್ಗೆ ತಿಳಿದು ಅದನ್ನು ಅನುಸರಿಸುವುದರ ಜೊತೆ ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ನೂತವಾಗಿ ನಿರ್ಮಾಣಗೊಂಡ ಗ್ಯಾಲರಿಯನ್ಬು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಬಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷೆ ರತ್ನ ಹೇವ, ಶಾಸಕ ಹರೀಶ್ ಪೂಂಜ ಸಾನ್ವಿ ಗ್ರೂಪ್ ಆಫ್ ಕಂಪೆನಿ ಮತ್ತು ಅನ್ನಪೂರ್ಣ ಹಾಸ್ಪಟಲಿಟಿ ಸಿ.ಇ.ಒ ಹರೀಶ್ ಶೆಟ್ಟಿ ಕಂರ್ಬಿತ್ತಿಲು ನಾಲ್ಕೂರು ಇವರನ್ನು ಸನ್ಮಾನಿಸಲಾಯಿತು.

ಬಳಂಜ ಗ್ರಾ.ಪಂ.ಅಧ್ಯಕ್ಷ ಹೇಮಂತ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಳಂಜ ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ನಾರಾಯಣ, ಗ್ರಾ.ಪಂ. ಸದಸ್ಯ, ಸರ್ವೋದಯ ಫ್ರೆಂಡ್ಸ್ ಇದರ ಅಧ್ಯಕ್ಷ ಯಶೋಧರ ಶೆಟ್ಟಿ, ಬಳಂಜ ಗ್ರಾ.ಪಂ ಸದಸ್ಯರಾದ ಸುಚಿತ್ರಾ, ಯಕ್ಷಿತಾ ದೇವಾಡಿಗ, ಮಂಗಳೂರು ಕೊಡಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಸಾನ್ವಿ ಗ್ರೂಪ್ ಆಫ್ ಕಂಪೆನಿ ಮತ್ತು ಅನ್ನಪೂರ್ಣ ಹಾಸ್ಪಟಲಿಟಿ ಸಿ.ಇ.ಒ ಹರೀಶ್ ಶೆಟ್ಟಿ ಕಂರ್ಬಿತ್ತಿಲು ನಾಲ್ಕೂರು, ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್, ಪೆರೋಡಿತ್ತಾಯಕಟ್ಟೆ ಕ್ಲಸ್ಟರ್ ನ ಸಿ ಆರ್ ಪಿ ಕಿರಣ್ ಕುಮಾರ್ ಕೆ.ಎಸ್., ಕಾರ್ಯದರ್ಶಿ ಚಿತ್ರನ್ ದೇವಾಡಿಗ, ಅಟ್ಲಾಜೆ .ಕಿ.ಪ್ರಾ. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಪ್ರಮೋದ್ ಎಸ್., ಕ್ರೀಡಾ ಕಾರ್ಯದರ್ಶಿ ಸುಭಾಷ್ ಹೆಚ್., ಸಹಶಿಕ್ಷಕಿ ಅನಸೂಯ ಕುಮಾರಿ ಕೆ., ಶಾಲಾಭಿವೃದ್ಧಿ ಸಮಿತಿ ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಮತ್ತು ಊರವರು ಉಪಸ್ಥಿತರಿದ್ದರು.
ನಂತರ ಶಾಲಾ ಮಕ್ಕಳಿಂದ ,ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಕಾಪು ರಂಗತರAಗ ಕಲಾವಿದರ ತಂಡದಿAದ ಅಧ್ಯಕ್ಷೆರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು