News Karnataka Kannada
Saturday, May 04 2024
ಮಂಗಳೂರು

ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘಕ್ಕೆ1,05,20,996.06 ರೂ. ನಿವ್ವಳ ಲಾಭ

Rs.1,05,20,996.06 to Sri Lakshmanananda Multipurpose Co-operative Society. Net Profit
Photo Credit : News Kannada

ಮಂಗಳೂರು: ಶ್ರೀ ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ (ನಿ) ಮಂಗಳೂರು. ಇದರ26ನೇ ವಾರ್ಷಿಕ ಮಹಾಸಭೆಯು ಸೆ. .17- ರಂದು ಮೋರ್ಗನ್ಸ್ಗೇಟ್, ಜೆಪ್ಪು ರಾಮಕ್ಷತ್ರಿಯ ಮಂದಿರದಲ್ಲಿ ಸಂಘದಅಧ್ಯಕ್ಷರಾದ ಜೆ.ಕೃಷ್ಣ ಪಾಲೇಮಾರ್‌ ಅಧ್ಯಕ್ಷತೆಯಲ್ಲಿ ಜರಗಿತು.

ಸಂಘದ ಉಪಾಧ್ಯಕ್ಷರಾದ .ಕೆ. ದಿನೇಶ್‌ರಾವ್‌ ಸದಸ್ಯರನ್ನು ಸಭೆಗೆ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ .ಶಿವಪ್ರಸಾದ್ ಪಿ.ಎ ಇವರು ಕಳೆದ ವರ್ಷದ ಮಹಾಸಭೆಯ ನಡವಳಿಕೆ, 2022-2023ನೇ ಸಾಲಿನ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ ಹಾಗೂ ಸಮಜಾಯಿಶಿಕಾ ವರದಿ, ಅಂದಾಜು ಬಜೆಟಿಗಿಂತ ಹೆಚ್ಚಾದ ಬಾಬ್ತುಗಳು ಹಾಗೂ 2022-2023 ನೇ ಸಾಲಿನ ಅಂದಾಜುಆಯವ್ಯಯ ಪಟ್ಟಿಯನ್ನು ಮತ್ತು ನಿವ್ವಳ ಲಾಭ ವಿಂಗಡಣೆ ಮಂಡಿಸಿ ಸಭೆಯಅನುಮೋದನೆಯನ್ನು ಪಡೆದರು.

ನಿರ್ದೇಶಕರುಗಳಾದ ಸರ್ವಶ್ರೀಗಳಾದ ರಾಮಚಂದ್ರಕೆ.ಎಸ್, .ಜೆ .ಕೆ ರಾವ್, .ಪಿ ಬಾಬು, .ರಂಜನ್ ಕೆ ಎಸ್, ಡಾ.ಜೆರವೀಂದ್ರ, ಡಾ.ಪ್ರಭಾಕರ್ ಹೆಚ್, ಪಿ ಬಾಬು,  ವಾರಿಜ,ಡಾ ಮಂಜುಳಾ ಎ ರಾವ್ ಉಪಸ್ಥಿತರಿದ್ದರು.

ಅಧ್ಯಕ್ಷರಾದ ಜೆ ಕೃಷ್ಣ ಪಾಲೇಮಾರ್‌ರವರು ಸಂಘವು 2022-2023 ನೇ ಸಾಲಿನಲ್ಲಿ3,235 ಸದಸ್ಯರನ್ನು ಹೊಂದಿದ್ದುರೂ. 92,50,58,968-00 ದುಡಿಮೆ ಬಂಡವಾಳದಿಂದ ರೂ.416,98,90,105-00 ವ್ಯವಹಾರ ನೆಡೆಸಿ 105.2 ಲಕ್ಷ ನಿವ್ವಳ ಲಾಭಗಳಿಸಿರುವುದನ್ನು ಸಭೆಗೆ ತಿಳಿಸಿದರು.

ಮತ್ತು2022-2023 ನೇ ಸಾಲಿಗೆ ಶೇ.16 ಡಿವಿಡೆಂಟ್ ಘೋಷಿಸಿದರು. ಹಾಗೂ ಸಂಘವು 26 ವರ್ಷಗಳಲ್ಲಿ ಉತ್ತಮ ಪ್ರಗತಿಹೊಂದಿದ್ದು ಶೇ. 97.97 ಸಾಲ ವಸೂಲಾತಿಯಾಗಿದ್ದು ಸಂಘದಲ್ಲಿಉಚಿತಆರ್.ಟಿ.ಜಿ.ಎಸ್,ಇ-ಸ್ಟಾಪಿಂಗ್ ಸೌಲಭ್ಯವನ್ನು ನೀಡುತ್ತಿದ್ದು, ಸದಸ್ಯರಿಗಾಗಿಉಚಿತಕಣಿನ ಶಸ್ತ್ರಚಿಕ್ಸಿತೆ, ಕನ್ನಡಕ ವಿತರಣೆ ಮಾಡುತ್ತಿದ್ದು ಹಾಗೂ ಸಂಘದಅಭಿವೃದ್ದಿಗೆ ಸಹಕರಿಸಿದ ಎಲ್ಲಾಸದಸ್ಯರಿಗೆ ಅಭಿನಂದಿಸುತ್ತಾ ಪ್ರಸುತ್ತವರ್ಷದಲ್ಲಿ ಸುಮಾರು 8 ಕೋಟಿ ಮೌಲ್ಯದ ಸಂಘದ ನೂತನ ಆಡಳಿತ ಕಛೇರಿಯನ್ನುತೆರೆದು ಕಾರ್ಯ ನಿರ್ವಹಿಸುತ್ತಿದ್ದು ಇನ್ನು 5 ಹೊಸ ಶಾಖೆಗಳನ್ನು ತೆರೆಯಲು ಕಾರ್ಯಪ್ರವರ್ತರಾಗಿದ್ದು ಮುಂದೆಯೂಇದೇರೀತಿ ಸಹಕಾರ ನೀಡುವಂತೆ ವಿನಂತಿಸಿಕೊಂಡರು.

ಕುಮಾರಿ ಪೃಥ್ವಿ ಪ್ರಾರ್ಥನೆಯೊಂದಿಗೆಕಾರ್ಯಕ್ರಮ ಪ್ರಾರಂಭಗೊಂಡು ಕೊನೆಯಲ್ಲಿ ನಿರ್ದೇಶಕರಾದ. ರವೀಂದ್ರ ಕೆ ರವರು ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು