ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬೆಕ್ಕು ಕಣ್ಣಿನ ಅಪರೂಪದ ಹಾವೊಂದು ಪತ್ತೆಯಾಗಿದೆ. ನಗರದ ಬಲ್ನಾಡಿನ ರವಿಕೃಷ್ಣ ಕಲ್ಲಜೆ ಎನ್ನುವವರ ಮನೆಯಲ್ಲಿ ಈ ವಿಷಕಾರಿಯಲ್ಲದ ಪಾರೆಸ್ಟಿಕ್ ಕ್ಯಾಟ್ ಸ್ನೇಕ್ ಪತ್ತೆಯಾಗಿದೆ.
ಇದು ಬೆಕ್ಕಿನ ಕಣ್ಣಿನಂತೆ ಹೊಳೆವು ಹೊಂದಿರುವ ಕಾರಣ ಇದನ್ನು ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತದೆ. ರಾತ್ರಿ ಸಂಚಾರಿ ಹಾವಾಗಿರುವ ಇದು ಸಣ್ಣ ಹಕ್ಕಿ. ಒತಿಕ್ಯಾತ, ಹಕ್ಕಿಗಳ ಮೊಟ್ಟೆಯನ್ನು ಬೇಟೆಯಾಡಿ ತಿನ್ನುವ ಹಾವಾಗಿದೆ.
ಹಳದಿ ಬಣ್ಣದಲ್ಲಿ ಕಂದು ಬಣ್ಣದ ಪಟ್ಟಿ ಹೊಂದಿರುವ ಈ ಹಾವನ್ನು ಕಂಡ ತಕ್ಷಣ ಮನೆಯರು ಉಗರತಜ್ಞ ತೇಜಸ್ ಬನ್ನೂರು ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಉರಗ ತಜ್ಞ ತೇಜಸ್ ಆಗಮಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.