News Karnataka Kannada
Sunday, May 12 2024
ಮಂಗಳೂರು

ಪುತ್ತೂರು: ಅಯ್ಯೋ ವಿಧಿಯೇ, ಮನೆ ಗೃಹಪ್ರವೇಶವಾಗಿ ಎರಡನೇ ದಿನವೇ ಯಜಮಾನ ಆತ್ಮಹತ್ಯೆ

ಪ್ರೀತಿಸಿದವರೊಂದಿಗೆ ವಿವಾಹವಾಗದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಢ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ನಡೆದಿದೆ.
Photo Credit : Pixabay

ಪುತ್ತೂರು: ಗೃಹಪ್ರವೇಶದ ಎರಡೇ ದಿನದಲ್ಲಿ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮೇ 29ರಂದು ಸಂಭವಿಸಿದೆ.

ಬೀರ್ನಹಿತ್ಲು ನಿವಾಸಿ ವಿಜಯ ಕುಮಾರ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಹಿಂದುಗಡೆಯ ಶೆಡ್‌ನ‌ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇ 27ರಂದು ಮನೆಯ ಗೃಹಪ್ರವೇಶ ನಡೆದಿತ್ತು. ಮೇ 28ರಂದು ಅಮಲು ಪದಾರ್ಥ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಹಾಯವಾಣಿಗೆ ಕರೆ ಮಾಡಿ:

ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು