News Karnataka Kannada
Wednesday, May 01 2024
ಮಂಗಳೂರು

ಪುತ್ತೂರಿನಿಂದ ಮೋದಿ ರೋಡ್ ಶೋ ಗೆ 5 ಸಾವಿರಕ್ಕೂ ಅಧಿಕ ಮಂದಿ ಭಾಗಿ

Sanjv
Photo Credit :

ಪುತ್ತೂರು: ಮಂಗಳೂರಿನಲ್ಲಿ ಇಂದು ನಡೆಯಲಿರುವ ಪ್ರಧಾನಿ ಮೋದಿ ರೋಡ್ ಶೋ ಗೆ ಪುತ್ತೂರಿನಿಂದ 5 ಸಾವಿರಕ್ಕೂ ಮಿಕ್ಕಿದ ಮೋದಿ ಅಭಿಮಾನಿಗಳು ಭಾಗಿಯಾಗಲಿದ್ದಾರೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಪುತ್ತೂರು ವಿಧಾನಸಭೆಯ ಎಲ್ಲಾ ಬೂತ್ ಗಳಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸ್ವ ಇಚ್ಛೆಯಿಂದ ತಮ್ಮ ತಮ್ಮ ವಾಹನದಲ್ಲಿ ಮಂಗಳೂರಿಗೆ ತೆರಳಲಿದ್ದಾರೆ. ಅಲ್ಲದೆ ತಾವೇ ಹಣ ಹೊಂದಿಸಿ ಬಸ್ ಮಾಡಿ ಮಂಗಳೂರಿಗೆ ಕಾರ್ಯಕರ್ತರು ತೆರಳಲಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ 4 ಲಕ್ಷಕ್ಕೂ ಮಿಕ್ಕಿದ ಮತಗಳಲ್ಲಿ ಗೆಲ್ಲಿಸುವ ಕಾರ್ಯಕ್ರಮದ ಮುನ್ನುಡಿಯಾಗಲಿದ್ದು, ಕೇಂದ್ರದಲ್ಲಿ ಬಿಜೆಪಿ 400 ಕ್ಕೂ ಮಿಕ್ಕಿ ಸ್ಥಾನ ಗೆಲ್ಲಲಿದ್ದು,ಆ ಸ್ಥಾನಗಳಲ್ಲಿ ದಕ್ಷಿಣಕನ್ನಡ ಸ್ಥಾನವೂ ಒಂದಾಗಲಿದೆ ಎಂದರು.

ಕಾಂಗ್ರೆಸ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸೋಲಿನ ಹತಾಶೆಯಲ್ಲಿದ್ದು, ಈವರೆಗೆ ಕಾಂಗ್ರೆಸ್ ಗೆ ಜಿಲ್ಲೆಯಲ್ಲಿ ಒಂದು ಜಿಲ್ಲಾ ಮಟ್ಟದ ಸಮಾವೇಶ ಮಾಡಲು ಸಾಧ್ಯವಾಗಿಲ್ಲ. ಪುತ್ತೂರಿನಲ್ಲಿ ಎಪ್ರಿಲ್ 16 ರಂದು ಮುಖ್ಯಮಂತ್ರಿ ಸಿದ್ಧಾರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೋಡ್ ಶೋ ನಡೆಸಲಿದ್ದಾರೆ‌ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು