News Karnataka Kannada
Sunday, May 05 2024
ಮಂಗಳೂರು

ಪುತ್ತೂರು: ಪ್ರತೀ ಗ್ರಾಮದಲ್ಲಿ ಜಾಗ ಗುರುತಿಸಿ ಬಡವರಿಗೆ ಹಂಚಿಕೆ- ಶಾಸಕ ಅಶೋಕ್ ರೈ

Land in every village will be identified and allotted to the poor: MLA Ashok Rai
Photo Credit : News Kannada

ಪುತ್ತೂರು: ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ನಮಗೊಂದು ಮೂರು ಸೆಂಟ್ಸ್ ಜಾಗ ಕೊಡಿ ಎಂದು ಅನೇಕ ಅರ್ಜಿಗಳು ಗ್ರಾಮೀಣ ಭಾಗದಿಂದ ಬಂದಿದ್ದು ಪ್ರತೀ ಗ್ರಾಮದಲ್ಲಿ ಎರಡರಿಂದ ಮೂರು ಎಕ್ರೆ ಜಾಗ ಗುರುತಿಸಿ ಅದನ್ನು ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡುವಲ್ಲಿ ಕ್ರಮಕೈಗೊಳ್ಳಲಿದ್ದೇನೆ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಿದ್ದು ಈಗಾಗಲೇ ಜಾಗ ಹುಡಕುವಂತೆ ಕಂದಾಯ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಕೆಯ್ಯೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಎ ಕೆ ಜಯರಾಮ ರೈ ಅವರ ನಿವಾಸದಲ್ಲಿ ಜೂ. ೧೨ ರಂದು ನಡೆದ ಕೆಯ್ಯೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಿದೆ. ಅಭಿವೃದ್ದಿ ಕೆಲಸ ನಾನು ಮಾಡುತ್ತೇನೆ ಅದನ್ನು ಪ್ರಚಾರ ಮಾಡುವ ಮತ್ತು ಇದು ಕಾಂಗ್ರೆಸ್ ಸರಕಾರ ಮಾಡಿದ ಕೆಲಸ ಎಂಬುದನ್ನು ಗ್ರಾಮದ ಮನೆಮನೆಗೂ ತಲುಪಿಸುವ ಕೆಲಸವನ್ನು ಎಲ್ಲಾ ಕಾರ್ಯಕರ್ತರು ಮಾಡಬೇಕು. ಬಾಕಿ ಇರುವ ೯೪ ಸಿ, ಅಕ್ರಮಸಕ್ರಮ ಕಡತಗಳನ್ನು ಶೀಘ್ರ ವಿಲೇವಾರಿ ಮಾಡಲಿದ್ದು ಗ್ರಾಮಗಳಲ್ಲಿ ಅರ್ಜಿಗಳು ಬಾಕಿ ಇರುವ ಫಲಾನುಭವಿಗಳು ಸ್ಥಳೀಯ ವಲಯ ಮತ್ತು ಬೂತ್ ಅಧ್ಯಕ್ಷರನ್ನು ಸಂಪರ್ಕಿಸಿ ಅವರಲ್ಲಿ ಮಾಹಿತಿ ನೀಡಬೇಕು. ಪಕ್ಷ ಬೇದವಿಲ್ಲದೆ ಎಲ್ಲರ ಅರ್ಜಿಗಳನ್ನು ನಯಾ ಪೈಸೆ ಲಂಚವಿಲ್ಲದೆ ಮಾಡಿಕೊಡುತ್ತೇನೆ ಎಂದು ಹೇಳಿದ ಅವರು ವಲಯ ಮತ್ತು ಬೂತ್ ಅಧ್ಯಕ್ಷರ ಮೂಲಕವೇ ಫಲಾನುಭವಿಗಳು ಕಡತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆಯನ್ನು ನೀಡಿದರು.

ಮುಂದಿನ ದಿನಗಳಲ್ಲಿ ಪ್ರತೀ ಬೂತ್ , ವಲಯ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಯಲಿದೆ. ಅಭಿವೃದ್ದಿ ಕೆಲಸಗಳು ಏನಾಗಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ವಲಯಾಧ್ಯಕ್ಷರುಗಳು ಮಾಡಬೇಕು.ಕಟ್ಟಕಡೇಯ ಕಾರ್ಯಕರ್ತನಿಗೂ ಸರಕಾರದ ಸೌಲಭ್ಯ ಸಿಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ನಾನು ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಜನರ ಶಾಸಕ. ಬೇರೆ ಪಕ್ಷದ ಕಾರ್ಯಕರ್ತರು ಅರ್ಜಿಯನ್ನು ನೀಡಿದರೂ ಅದನ್ನು ಸ್ವೀಕರಿಸಬೇಕು ಅಭಿವೃದ್ದಿಯಲ್ಲಿ ರಾಜಕೀಯ ಮಾಡಬಾರದು. ಅಭಿವೃದ್ದಿ ಮತ್ತು ಜನರ ಸೇವೆ ಮಾಡುವ ಮೂಲಕ ನಾವು ಪಕ್ಷವನ್ನು ಗಟ್ಟಿಗೊಳಿಸಬೇಕು. ಮುಂದಿನ ೨೫ ವರ್ಷಗಳ ಕಾಲ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಇರುವಲ್ಲಿ ನಾವು ಈಗಲೇ ತಯಾರಿ ಮಾಡಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನೀಡಿದರು.

ಬೂತ್ , ವಲಯ ಅಧ್ಯಕ್ಷರಿಗೆ ಶಕ್ತಿ ಬಂದಿದೆ: ಹೇಮನಾಥ ಶೆಟ್ಟಿ

ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾದ ಮೇಲೆ ಇಲಾಖೆಗಳಲ್ಲಿ ಅಭೂತಪೂರ್ವ ಬದಲಾವಣೆ ಆರಂಭವಾಗಿದೆ. ಲಂಚವಿಲ್ಲದೆ ಅಧಿಕಾರಿಗಳು ಕೆಲಸ ಮಾಡಲು ಆರಂಭಿಸಿದ್ದಾರೆ ಇದು ಒಳ್ಳೆಯ ಬೆಳವಣಿಗೆಯಾಗಿದೆ. ಬೂತ್ ಮತ್ತು ವಲಯ ಅಧ್ಯಕ್ಷರಿಗೆ ಶಾಸಕರು ಶಕ್ತಿ ತುಂಬುವ ಕೆಲಸವನ್ನು ಶಾಸಕರು ಮಾಡುತ್ತಿದ್ದು ಇದರಿಂದ ಪಕ್ಷದ ಕಾರ್ಯಕರ್ತರಿಗೆ ಹುಮ್ಮಸ್ಸು ಬಂದಿದೆ. ಇದೇ ಕಾರ್ಯ ಎಂದೆಂದೂ ಮುಂದುವರೆಯಬೇಕಿದೆ ಎಂದು ಹೇಳಿದರು. ಅಭಿವೃದ್ದಿ ವಿಚಾರದಲ್ಲಿ ಒಲವು ಮತ್ತು ಪಕ್ಷಾತೀತವಾಗಿ ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯುವ ಶಕ್ತಿ ಶಾಸಕರಲ್ಲಿದೆ ಎಂದು ಹೇಳಿದರು.

ಏನೂ ಇರಲಿಲ್ಲ ಈಗ ಶಕ್ತಿ ಬಂದಿದೆ: ಎಂ ಬಿ

ಮೊನ್ನೆಯ ತನಕ ನಮಗೆ ಯಾವುದೇ ಶಕ್ತಿ ಇರಲಿಲ್ಲ, ಅಶೋಕ್ ರೈ ಕಾಂಗ್ರೆಸ್ ಶಾಸಕರಾಗಿ ಅಯ್ಕೆಯಾದ ಬಳಿಕ ನಮಗೆ ಶಕ್ತಿ ಬಂದಿದೆ. ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎಲ್ಲೆಲ್ಲೂ ಗೌರವ ಸಿಗುತ್ತಿದೆ. ನಮ್ಮದೇ ಸರಕಾರ ರಾಜ್ಯದಲ್ಲಿದೆ. ಕಾರ್ಯಕರ್ತರು ಧೈರ್ಯವಾಗಿ ಇಂದು ಮಾತನಾಡುವ ವಾತಾವರಣ ನಿರ್ಮಾಣವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಹೇಳಿದರು. ಮುಂದಿನ ದಿನಗಳಲ್ಲಿ ಅಭಿವೃದ್ದಿಯ ಜೊತೆಗೆ ಪಕ್ಷವನ್ನು ಕಟ್ಟುವ ಕೆಲಸವನ್ನು ಎಲ್ಲರೂ ಜೊತೆಯಾಗಿ ಮಾಡಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಅಮಲರಾಮಚಂದ್ರ, ಫಾರೂಕ್ ಬಾಯಬ್ಬೆ, ದಾಮೋದರ ಪೂಜರಿ, ಕಾಂಗ್ರೆಸ್ ಮುಖಂಡರುಗಳಾದ ಸಂತೋಷ್ ರೈ ಇಳಂತಜೆ, ಮೌರಿಶ್ ಮಸ್ಕರೇನಸ್, ಬಟ್ಯಪ್ಪ ರೈ ದೇರ್ಲ, ಗ್ರಾಪಂ ಸದಸ್ಯ ಹನೀಫ್ ಕೆ ಎಂ, ಅಬ್ದುಲ್ ಖಾದರ್ ಮೇರ್ಲ, ವಿಶ್ವನಾಥ ಪೂಜಾರಿ, ಜಗನ್ನಾಥ ಶೆಟ್ಟಿ ನೆಲ್ಲಿಕಟ್ಟೆ, ಗ್ರಾಪಂ ಸದಸ್ಯರಿಗಳಾದ ಜಯಂತ ಪುಜಾರಿ, ಸೇಸಪ್ಪ, ಅಮಿತಾ, ಸೇದು ನಾಯರ್, ಬೋಳೋಡಿ ಚಂದ್ರಹಾಸ ರೈ, ಶೀನಪ್ಪ ರೈ, ಆದರ್ಶ ರೈ ಕೆಯ್ಯೂರು, ಪುರಂದರ್ ರೈ ನಿಶ್ಮಿತಾ, ಮೆಲ್ವಿನ್ ಮೊಂತೆರೋ ಕುಂಬ್ರ, ಲ್ಯಾನ್ಸಿ ಮಸ್ಕರೇನಸ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು. ವಲಯ ಕಾಂಗ್ರೆಸ್ ಅಧ್ಯಕ್ಷ ಎಕೆ ಜಯರಾಮ ರೈ ಸ್ವಾಗತಿಸಿ ವಂದಿಸಿದರು. ದಾಮೋದರ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು