News Karnataka Kannada
Sunday, April 28 2024
ಮಂಗಳೂರು

ಪುತ್ತೂರು: ಅಮಿತ್ ಶಾ ಭೇಟಿ ಅಭಿಮಾನಿಗಳಿಗೆ ಖುಷಿ, ವಿರೋಧಿಗಳಿಗೆ ನಡುಕ – ಸಂಜೀವ ಮಠಂದೂರು

Amit Shah's visit is a delight for fans, opponents shivering: Sanjeeva Mathandur
Photo Credit : News Kannada

ಪುತ್ತೂರು: ರಾಜ್ಯಕ್ಕೆ ಸಂದೇಶ ನೀಡಲು, ಅಮಾಯಕರ ಹತ್ಯೆಗೈದ ಮತಾಂಧರಿಗೆ ಸಂದೇಶ ನೀಡಲು, ಮುಂದಿನ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೆವೆ ಎನ್ನುವ ಸಂದೇಶ ನೀಡುವ ಕಾರ್ಯಕ್ರಮ ಫೆ. ೧೧ರಂದು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಕೇಂದ್ರ ಗೃಹ ಸಚಿವ, ಸಹಕಾರಿ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ದರ್ಬೆ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅಮಿತ್ ಶಾ ಅವರು ಪುತ್ತೂರಿಗೆ ಮೊದಲ ಬಾರಿಗೆ ಬರುತ್ತಿದ್ದಾರೆ. ಇದಕ್ಕಾಗಿ ಅದ್ದೂರಿ ಸ್ವಾಗತ ಕೋರಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಅಮಿತ್ ಶಾ ಆಗಮನದಿಂದ ಅಭಿಮಾನಿಗಳಿಗೆ ಖುಷಿ, ವಿರೋಧಿಗಳಿಗೆ ನಡುಕ ಹುಟ್ಟಿಕೊಂಡಿದೆ. ಅದೇನೆ ಇದ್ದರೂ, ಅಮಿತ್ ಶಾ ಅವರಿಗೆ ಬಹಳ ಅದ್ದೂರಿಯಾಗಿ ಸ್ವಾಗತ ನೀಡಲಿದ್ದೇವೆ. ಅಡಕೆಗೆ ಹಳದಿ ರೋಗ, ಎಲೆಚುಕ್ಕಿ ರೋಗದಿಂದ ರೈತರಿಗೆ ಹಾನಿಯಾಗಿದೆ ಇದನ್ನು ಸಹಕಾರಿ ಸಚಿವರ ಗಮನಕ್ಕೆ ತಂದು, ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು. ಮುಂದೆ ನೆಮ್ಮದಿಯ ದಿನಗಳನ್ನು ರೈತರು ಕಾಣಬಹುದು ಎಂದರು.

ಪ್ರವೀಣ್ ನೆಟ್ಟಾರು ಹತ್ಯೆಯ ಮೂಲಕ ದ.ಕ. ಜಿಲ್ಲೆಯಲ್ಲಿ ಮತೀಯ ಘಟನೆಗಳಿಗೆ ಮತೀಯ ಸಂಘಟನೆಗಳು ಎಡೆ ನೀಡಿತು. ಇದನ್ನು ಮಟ್ಟ ಹಾಕಲು ಎನ್ಐಎಗೆ ಅಧಿಕಾರ ನೀಡಿ, ಮತೀಯರಿಗೆ ಸಿಂಹಸ್ವಪ್ನರಾಗದವರು ಅಮಿತ್ ಶಾ. ಈ ಮೂಲಕ ಜನರ ಸ್ನೇಹ ಸಂಪಾದಿಸಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮವನ್ನು ಐತಿಹಾಸಿಕ ಕಾರ್ಯಕ್ರಮವಾಗಿ ಮಾಡುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಪಿ.ಜಿ. ಜಗನ್ನಿವಾಸ್ ರಾವ್, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಬೂಡಿಯಾರ್ ರಾಧಾಕೃಷ್ಣ ಆಳ್ವ, ಸಹಜ್ ರೈ ಬಳಜ್ಜ, ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಪುರುಷೋತ್ತಮ್ ಮುಂಗ್ಲಿಮನೆ, ಆರ್.ಸಿ. ನಾರಾಯಣ್, ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು