News Karnataka Kannada
Sunday, April 28 2024
ಮಂಗಳೂರು

ಪುಣ್ಯಕೋಟಿನಗರ: ಗೋ ಸೇವಾ ಮಾಸಾಚರಣೆ ವಿಜ್ರಂಭಿಸಿದ ಶೋಭಾಯಾತ್ರೆ

Govu
Photo Credit : News Kannada

ಪುಣ್ಯಕೋಟಿನಗರ: ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಮನೆಯಲ್ಲಿ ಎಷ್ಟು ಗೋವುಗಳಿವೋ ಅದಕ್ಕೆ ಅನುಸಾರವಾಗಿ ವ್ಯಕ್ತಿಯ ಶ್ರಿಮಂತಿಕೆಯನ್ನು ಗುರುತಿಸುತ್ತಿದ್ದರು. ಆದರೆ ಈಗ ಕಾರು ಬಂಗಲೆಯ ಮೂಲಕ ಶ್ರೀಮಂತಿಕೆಯನ್ನು ಗುರುತಿಸುವಂತಾಗಿದೆ. ಗೋವಿಗೆ ನಮ್ಮ ಮನೆಯಲ್ಲಿ ನಮ್ಮ ಮನದಲ್ಲೂ ಜಾಗ ಕೊಡಬೇಕು. ಪುಣ್ಯಕೋಟಿನಗರದಲ್ಲಿ ನಡೆಯುವ ಗೋಸೇವೆ ಮಾದರಿಯಾಗಿದೆ. ಇದು ಗೋವೆಗೆ ಉತ್ತೇಜನ, ಜಾಗೃತಿ ಮೂಡಿಸಲು ಪ್ರೇರಣೆ‌ ನೀಡಿದಂತಾಗಿದೆ ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಅವರು ಕೈರಂಗಳದ ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಜ.14 ರಿಂದ ಪೆ. 13 ರ ವರಗೆ ಒಂದು ತಿಂಗಳ ಕಾಲ ವಿವಿಧ ಧಾರ್ಮಿಕ ಮತ್ತಿ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿರುವ ಗೋಸೇವಾ ಮಾಸಾಚರಣೆ ಉದ್ಘಾಟನೆ ಕಾರ್ಯಕ್ರಮದಲ್ಕಿ ಆಶೀರ್ವಚನ ನೀಡಿದರು.

ಎಲ್ಲಾ ರೀತಿಯ ರಕ್ಷಣೆಯಲ್ಲಿ ಗೋವಿನ ಸಂರಕ್ಷಣೆಯೇ ಎಲ್ಲದಕ್ಕೂ ಅಡಿಪಾಯ.‌ ಗೋವಿಗೆ ಪ್ರಾಚೀನ ಪರಂಪರೆ ಅತ್ಯಂತ ಮಹತ್ವ ನೀಡಿತ್ತು. ಗೋಮಾತೆಯ ದರ್ಶನ, ಸೇವೆಯಿಂದ ನಮಗೆ ಪುಣ್ಯಪ್ರಾಪ್ತಿಯಾಗುತ್ತದೆ.‌ ಗೋವನ್ನು ನಿರ್ಲಕ್ಷಿಸುವುದು ಅಪಾಯಕಾರಿ ಎಂದರು.

ಮುಂಬೈ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು, ಕನ್ಯಾನ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೋವಿಗೆ ಸನಾತನ ಧರ್ಮದಲ್ಲಿ ಅತ್ಯಂತ ಮಹತ್ವತೆ ಇದೆ. ಇಂದು ಕಾಲ ಬದಲಾಗುತ್ತಿದ್ದು ಎಲ್ಲಿಯೂ ಗೋವಿನ ಮಾಸಾಚರಣೆ ನಡೆಯುತ್ತಿಲ್ಲ. ಬದಲಾಗಿ ಮಾಂಸಾಚರಣೆಯೇ ನಡೆಯುತ್ತಿದೆ. ಗೋವು ಎಂದರೆ ಮುಗ್ಧ ಹಾಗೂ ಪಾವಿತ್ರ್ಯವುಳ್ಳ ದೇವತೆ. ಗೋವಿನ ರಕ್ಷಣೆ ನಮ್ಮೆಲ್ಲರ ಜವಬ್ಧಾರಿ. ಕೈರಂಗಳ ಪುಣ್ಯಕೋಟಿನಗರದಲ್ಲಿ‌ ನಡೆಯುತ್ತಿರುವ ಗೋವಿನ ಮಾಸಾಚರಣೆಯಂತಹ ಈ ಕಾರ್ಯಕ್ರಮದ ಮೂಲಕ ಗೋವಿನ ಸಂರಕ್ಷಣೆಗಾಗಿ ಪಣತೊಡೋಣ‌ ಎಂದು ಹೇಳಿದರು.

ಭಾರತ ದೇಶ ಹಿಂದೂ ದೇಶವಾಗಿದ್ದುಕೊಂಡು ಗೋವಿನ ಪೂಜೆ ಮಾಡುತ್ತೇವೆ. ಬ್ರಿಟನ್ ನಲ್ಲಿ ಭಾರತದ ಮೂಲದ ವ್ಯಕ್ಯಿಯೇ ಪ್ರಧಾನಿಯಾಗಿದ್ದಾರೆ. ಅವರು ಅಲ್ಲಿ ಗೋ ಪೂಜೆಯ ನಡೆಸಿ ಮಾದರಿಯಾಗಿದ್ದಾರೆ. ರಾಜಾರಾಂ ಭಟ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಪುಣ್ಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಹಾಗೂ ಪ್ರತೀ ವರ್ಷ ಇಂತಹ ಕಾರ್ಯಕ್ರಮ ನಡೆಯುವಂತಾಗಲಿ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹಿಂದೂ ಜಾಗರಣ ವೇದಿಕೆಯ ನರಸಿಂಹ ಮಾಣಿ , ದ.ಕ.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾದ ಸಂತೋಷ್ ಕುಮಾರ್ ಬೋಳಿಯಾರ್, ಜಯ ಕಂಬಳ ಪದವು, ಉದ್ಯಮಿ ರಾಧಾಕೃಷ್ಣ ಉಮಿಯ, ಬಿಜೆಪಿ ಮುಖಂಡರಾದ ಸೀತಾರಾಮ ಬಂಗೇರ, ಚಂದ್ರಶೇಖರ ಉಳ್ಳಾಲ್, ಸುರೇಶ್ ದೇರಾಜೆ, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ್ ದೇರಾಜೆ, ಮಾಜಿ ತಾಲೂಕು ಪಂಚಾಯತಿ ಸದಸ್ಯ ನವೀನ್ ಪಾದಲ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.

ಸಂಚಾಲಕ ಟಿ.ಜಿ ರಾಜಾರಾಮ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯಕ್ರಮಲ್ಲಿ ಶ್ರೀನಿವಾಸ್ ಭಟ್ ಸೇರಾಜೆ, ಅರವಿಂದ ಭಟ್ ಕೊಲ್ಲರಮಜಲು , ನಿರ್ಮಲ್ ಭಟ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಮಜಿ ಶ್ರೀ ಮಹಮ್ಮಾಯಿ ಸೇವಾ ಸಮಿತಿಯಿಂದ ಭಜನೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಆರ್ಯಭಟ ಪ್ರಶಸ್ತಿ ಪುರಸ್ಕøತ ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಸಂಗಿತ ಗಾನ ಸಂಭ್ರಮ ನಡೆಯಿತು.

ಶೋಭಾಯಾತ್ರೆ

ಕೈರಂಗಳದ ಪುಣ್ಯಕೋಟಿನಗರದಲ್ಲಿರುವ ಅಮೃತಧಾರಾ ಗೋಶಾಲೆಯಲ್ಲಿ ಒಂದು ತಿಂಗಳ ಕಾಲ ನಡೆಯಲಿರುವ ಗೋಸೇವಾ ಮಾಸಾಚರಣೆಯ ಕಾರ್ಯಕ್ರಮವು ಶನಿವಾರದಿಂದ ಆರಂಭಗೊಂಡಿದ್ದು, ಕಾರ್ಯಕ್ರಮದ ಉದ್ಗಾಟನೆಯ ಮುನ್ನ ಮುಡಿಪುವಿನಿಂದ‌ ಹೂಹಾಕುವಕಲ್ಲು ಮಾರ್ಗವಾಗಿ ಪುಣ್ಯಕೋಟಿನಗರಕ್ಕೆವರೆಗೆ ನಡೆದ ಭವ್ಯವಾದ ಶೋಭಾಯಾತ್ರೆಯು ವಿವಿಧ ಸಾಂಸ್ಕೃತಿಕ ವೈಭವದೊಂದಿಗೆ ವಿಜ್ರಂಭಣೆಯಿಂದ‌ ನಡೆಯಿತು.

ಮೆರವಣಿಗೆಯಲ್ಲಿ ಭಜನಾ ತಂಡಗಳು, ಕಲ್ಲಡ್ಕದ ಗೊಂಬೆ, ಚಿತ್ರದುರ್ಗದ ಬ್ರಾಸ್ ಬ್ಯಾಂಡ್, ಘಟೋತ್ಗಚ ವೇಷ, ಟ್ಯಾಬ್ಲೋ, ಮಂಗಳವಾದ್ಯ, ಹುಲಿವೇಷ, ಸಿಂಗಾರಿ ಮೇಳ,ತಾಲೀಮು ಪ್ರದರ್ಶನ ಹಾಗೂ ವಿವಿಧ ವೈವಿಧ್ಯಗಳೊಂದಿಗೆ ನಡೆಯಿತು. ವಿಶೇಷವಾಗಿ ನಾಲ್ಕು ಟ್ರಕ್ ಗಳ ಮೂಲಕ ಸಾಗಿ ನೂರಾರು ರಾಧಾ ಕೃಷ್ಣ ವೇಷಧಾರಿ ಮಕ್ಕಳು, ಕುಣಿತ ಭಜನೆಯೊಂದಿಗೆ ನಡೆದ ಸಾವಿರಾರು ಮಂದಿಯ ಪಾಲ್ಗೊಲ್ಲುವಿಕೆಯ ಮೂಲಕ ನಡೆದ ಶೋಭಾಯಾತ್ರೆಯು ಮುಡಿಪುವಿನಲ್ಲಿ ಇತಿಹಾಸ ಸೃಷ್ಟಿಸಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು