News Karnataka Kannada
Monday, April 29 2024
ಮಂಗಳೂರು

ಕುಡಿಯುವ ನೀರಿಗಾಗಿ ಶಿರ್ಲಾಲು ಪಂಚಾಯತ್ ಎದುರು ನೀರಿನ ಕೊಡ ಇಟ್ಟು ಪ್ರತಿಭಟನೆ

Protest in front of Shirlalu panchayat for drinking water
Photo Credit : News Kannada

ಬೆಳ್ತಂಗಡಿ; ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕದ ಜನತೆಗೆ ಕುಡಿಯಲು ನೀರಿಲ್ಲ ಎಂದು ಆಕ್ರೋಶಗೊಂಡ ಸ್ಥಳೀಯರು ಪಂಚಾಯತ್ ಬಳಿ ನೀರಿನ‌ ಕೊಡ, ಬಕೇಟ್ ಗಳ ಜೊತೆಗೆ ಬಂದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕದ ಜನತೆಗೆ ನಾಲ್ಕೈದು ದಿವಸಗಳಿಂದ ಸರಿಯಾದ ರೀತಿಯಲ್ಲಿ ನೀರಿಲ್ಲದ ಕಾರಣ ಇಂದು ಆಕ್ರೋಶಗೊಂಡ ಸ್ಥಳೀಯರು ಪಂಚಾಯತ್ ತೆರಳಿ ಈ ಪ್ರತಿಭಟನೆ ನಡೆಸಿದರು.

ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನಮಗೆ ಸರಿಯಾದ ರೀತಿಯಲ್ಲಿ ನೀರು ಇಲ್ಲ ಎಂದು ಅಕ್ರೋಶ ಹೊರ ಹಾಕಿದರು.

ಸ್ಥಳೀಯರಾದ ಆನಂದ ಪೂಜಾರಿ, ತಿಮ್ಮಪ್ಪ ಶೆಟ್ಟಿ, ಸಿದ್ದೀಕ್ ಬಂತಡ್ಕ, ಹರೀಶ, ಸುರೇಶ, ಲಕ್ಷ್ಮಿ , ಅಶ್ರಫ್, ಮೊಹಮ್ಮದ್, ಕೊರಗಪ್ಪ ಮೊದಲಾದರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು‌. ಬಂತಡ್ಕದ ಮಹಿಎಯರೂ ಹೆಚ್ಚಿನ‌ಸಂಖ್ಯೆಯಲ್ಲಿ‌ ಜಮಾಯಿಸಿದ್ದರು. ಈ ವೇಳೆ ಮಾತನಾಡಿದ ಪಿಡಿಒ ಹಾಗೂ ಸ್ಥಳೀಯ ಜನಪ್ರತಿನಿಧಿಗಳು, ಸೂಕ್ತ ಅನುದಾನದ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು