News Karnataka Kannada
Wednesday, May 01 2024
ಮಂಗಳೂರು

ಮಂಗಳೂರು: ಕರ್ಣಾಟಕ ಬ್ಯಾಂಕ್ ಮೂಲಕ ಕಸ್ಟಮ್ಸ್ ತೆರಿಗೆ ಪಾವತಿ ಅವಕಾಶ

Payment of Customs Tax through Karnataka Bank
Photo Credit : News Kannada

ಮಂಗಳೂರು: ದೇಶದ ಪ್ರತಿಷ್ಠಿತ ಬ್ಯಾಂಕುಗಳ ಪೈಕಿ ಒಂದಾದ ಕರ್ಣಾಟಕ ಬ್ಯಾಂಕ್ ಮೂಲಕ ಭಾರತೀಯ ಕಸ್ಟಮ್ಸ್ ತೆರಿಗೆ ಪಾವತಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಸಿಬಿಡಿಟಿ ಹಾಗೂ ಸಿಬಿಐಸಿ ಪರವಾಗಿ ಪ್ರತ್ಯಕ್ಷ ತೆರಿಗೆ ಹಾಗೂ ಪರೋಕ್ಷ ತೆರಿಗೆ ಪಾವತಿಗೆ ಸಿಜಿಎ (ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್) ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಶಿಫಾರಸ್ಸು ಮಾಡಿದೆ.

ಈಗಾಗಲೇ ಕರ್ಣಾಟಕ ಬ್ಯಾಂಕ್ ಗ್ರಾಹಕರು ವಾಣಿಜ್ಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಯ ರಾಷ್ಟ್ರೀಯ ಜಾಲತಾಣ (ಪೋರ್ಟಲ್) ಇಂಡಿಯನ್ ಕಸ್ಟಮ್ಸ್ ಎಲೆಕ್ಟ್ರಾನಿಕ್ ಗೇಟ್‌ವೇ (ಐಸಿಇಗೇಟ್) ಮೂಲಕ ಕರ್ಣಾಟಕ ಬ್ಯಾಂಕ್‌ನ್ನು ಆಯ್ಕೆ ಮಾಡಿ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡುತ್ತಿದ್ದಾರೆ.

ಐಸಿಇಗೇಟ್ ಪೋರ್ಟಲ್‌ನಲ್ಲಿ ಪರೋಕ್ಷ ತೆರಿಗೆ ಹಾಗೂ ಕಸ್ಟಮ್ಸ್ (ಸಿಬಿಐಸಿ)ನಲ್ಲಿ ವಾಣಿಜ್ಯ, ಸರಕು ಸಾಗಣೆ ಹಾಗೂ ಇತರ ವ್ಯವಹಾರಸ್ಥರಿಗೆ ಆನ್‌ಲೈನ್ ಮೂಲಕ ಪಾವತಿಗೆ ಅವಕಾಶ ಇದೆ. ಇದೀಗ ಸಿಬಿಐಸಿ ಹೊಸದಾಗಿ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್ (ಇಸಿಎಲ್) ಎಂಬ ಹೊಸ ವಿಧಾನವನ್ನು ಪರಿಚಯಿಸಿದ್ದು ತೆರಿಗೆ ಹಾಗೂ ತೆರಿಗೆಯಲ್ಲದ ರಸೀದಿಗಳನ್ನು ಸಿಬಿಐಸಿ ಪರವಾಗಿ ಬಹು ಆಯ್ಕೆಯಲ್ಲಿ ಮಾಡಬಹುದಾಗಿದೆ.

ಕರ್ಣಾಟಕ ಬ್ಯಾಂಕ್ ಕೂಡಾ ಈ ಅವಕಾಶವನ್ನು ಗ್ರಾಹಕರಿಗೆ ನೀಡಿದೆ. ಕರ್ಣಾಟಕ ಬ್ಯಾಂಕಿನ ಎಂಡಿ ಮತ್ತು ಸಿಇಓ   ಮಹಾಬಲೇಶ್ವರ ಎಂ.ಎಸ್. ಅವರು ಈ ಬಗ್ಗೆ ಮಾತನಾಡಿ, “ಕಳೆದ ವರ್ಷ ಡಿಸೆಂಬರ್ 22 ರಿಂದ ವಾಣಿಜ್ಯ ತೆರಿಗೆ ಹಾಗೂ ಕಸ್ಟಮ್ಸ್ ತೆರಿಗೆ ಸಂಗ್ರಹವನ್ನು ಕರ್ಣಾಟಕ ಬ್ಯಾಂಕ್ ಮೂಲಕ ಆನ್‌ಲೈನ್ ನಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಈಗ ಸಿಬಿಐಸಿ ಎಲೆಕ್ಟ್ರಾನಿಕ್ ಕ್ಯಾಶ್ ಲೆಡ್ಜರ್‌ನ್ನು ಪರಿಚಯಿಸಿದೆ.

ಎಪ್ರಿಲ್ 1 ರಿಂದ ಈ ಸೌಲಭ್ಯ ದೊರಕುತ್ತಿದ್ದು ಕರ್ಣಾಟಕ ಬ್ಯಾಂಕ್ ಕೂಡಾ ಈ ನೂತನ ಸೌಲಭ್ಯ ಒದಗಿಸಲು ಹಣಕಾಸು ಇಲಾಖೆಯ ಪ್ರಿನ್ಸಿಪಾಲ್ ಚೀಫ್ ಕಂಟ್ರೋಲರ್ ಆಫ್ ಅಕೌಂಟ್ಸ್  ಹಾಗೂ ಸಿಬಿಐಸಿ ಅವರಿಂದ ಅನುಮತಿ ಪಡೆದ ದೇಶದ ಕೆಲವೇ ಬ್ಯಾಂಕ್‌ಗಳ ಪೈಕಿ ಒಂದು. ನಮ್ಮ ಎಲ್ಲ ಗ್ರಾಹಕರು ಈ ಸೌಲಭ್ಯದ ಮೂಲಕ ಅವರ ಅನುಕೂಲಕ್ಕೆ ತಕ್ಕಂತೆ ಆನ್‌ಲೈನ್ ಮೂಲಕ ತೆರಿಗೆ ಪಾವತಿಸಬಹುದು. ಇದು ವ್ಯವಹಾರಕ್ಕೆ ಅನುಕೂಲ ವಾತಾವರಣ ಒದಗಿಸಿಕೊಡಲಿದೆ. ಅಷ್ಟಲ್ಲದೇ ಬ್ಯಾಂಕಿನ ವ್ಯವಹಾರದ ಮೇಲೆ ಧನಾತ್ಮಕ ಪರಿಣಾಮ ಉಂಟಾಗಲಿದ್ದು ಬ್ಯಾಂಕಿನ ಕಾಸಾ ಡೆಪಾಸಿಟ್‌ಗಳನ್ನು ವೃದ್ಧಿಸಲಿದೆ ಎಂಬ ವಿಶ್ವಾಸವಿದೆ.

ಇದು ನಮ್ಮ ಗ್ರಾಹಕರಿಗೆ ಬ್ಯಾಂಕಿನ ಕೆಬಿಎಲ್ ನೆಕ್ಸ್ಟ್ ಡಿಜಿಟಲ್ ಟ್ರಾನ್ಸ್ಫಾರ್ಮೇಶನ್ ಪ್ರಾಜೆಕ್ಟ್ನ ಮೂಲಕ ನೀಡಿದ ಇನ್ನೊಂದು ಡಿಜಿಟಲ್ ಉಪಕ್ರಮವಾಗಿದೆ” ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು