News Karnataka Kannada
Tuesday, May 07 2024
ಮಹಾರಾಷ್ಟ್ರ

ಎಫ್.ಸಿ.ಸಿ.ಐ ವಿಚಾರಗೋಷ್ಠಿಯಲ್ಲಿ ಯಶೋಗಾಥೆ ಹಂಚಿಕೊಂಡ ನ್ಯೂಸ್ ಕರ್ನಾಟಕ

Ficci
Photo Credit : News Kannada

ಪುಣೆ: ಪ್ರಮುಖ ಸುದ್ದಿಸಂಸ್ಥೆಯಾದ ನ್ಯೂಸ್‌ ಕರ್ನಾಟಕ ʼಇಂಡಿಕ್ ಇಂಟರ್ನೆಟ್‌ನೊಂದಿಗೆ ಪ್ರಕಾಶಕರನ್ನು ಸಶಕ್ತಗೊಳಿಸುವುದು ಮತ್ತು ಭಾರತವನ್ನು ಸಶಕ್ತಗೊಳಿಸುವುದುʼ ಎಂಬ ವಿಷಯದ ಬಗ್ಗೆ ನಡೆದ ಎಫ್.ಸಿ.ಸಿ.ಐ ವಿಚಾರಗೋಷ್ಠಿಯಲ್ಲಿ ತನ್ನ ಯಶೋಗಾಥೆಯನ್ನು ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ನ್ಯೂಸ್‌ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರಾದ ಬ್ರಿಜೇಶ್‌ ಗೋಖಲೆ, GNI ಇಂಡಿಯನ್ ಲ್ಯಾಂಗ್ವೇಜಸ್‌ ಪ್ರೋಗ್ರಾಮ್‌ ಪ್ರಕಾಶನ ಉದ್ಯಮದಲ್ಲಿ ಡಿಜಿಟಲ್ ರೂಪಾಂತರಕ್ಕೆ ವೇಗ ನೀಡಿರುವ ಬಗೆಯನ್ನು ವಿವರಿಸಿದರು.

90 ನಿಮಿಷಗಳ ಕಾರ್ಯಾಗಾರದಲ್ಲಿ ಭಾರತದಲ್ಲಿ ಕಂಡುಬರುವ ಭಾಷಾ ವೈವಿಧ್ಯತೆಯ ನಡುವಿನ ಅಂತರವನ್ನು ಮುಚ್ಚುವುದಕ್ಕೆ ಒತ್ತು ನೀಡಿದ್ದು, ಪ್ರಕಾಶಕರು ಹಾಗು ಬರಹಗಾರರಿಗೆ ಅಗತ್ಯವಿರುವ ಸಾಧನಗಳನ್ನು ಒದಗಿಸುವ ಮೂಲಕ ಸಾಮಾಜಿಕ ಹಾಗು ಆರ್ಥಿಕ ಸಾಮರ್ಥ್ಯಗಳನ್ನು ಬಳಸಿಕೊಳ್ಳುವತ್ತ ಗಮನ ಹರಿಸಲಾಯಿತು. ಪ್ರಕಾಶಕರಿಗೆ ಮಾಹಿತಿ ಹಾಗು ಸಾಧನಗಳನ್ನು ಒದಗಿಸುವ ಮೂಲಕ ಭಾರತದ ಡಿಜಿಟಲ್‌ ಸೇರ್ಪಡುವಿಕೆಗೆ ಬಲ ತುಂಬುವುದು ಕಾರ್ಯಾಗಾರದ ಉದ್ದೇಶವಾಗಿತ್ತು.

ಕಾರ್ಯಾಗಾರದ ಮುಖ್ಯ ಉದ್ದೇಶಗಳು:

ಡಿಜಿಟಲ್ ಸಾಮರ್ಥ್ಯದ ಬಳಕೆ: ಅಂತರ್ಜಾಲದಲ್ಲಿ ಪರಿಣಾಮಕಾರಿಯಾಗಿ ಸುದ್ದಿ ಪಸರಿಸಲು ಸಹಕಾರಿಯಾಗುವ ಸಾಧನ ಹಾಗು ಜ್ಞಾನವನ್ನು ಪ್ರಕಾಶಕರಿಗೆ ನೀಡುವುದು.

ಭಾರತೀಯ ಭಾಷೆಗಳ ಪ್ರಚಾರ: ಅಧಿಕ ಪ್ರೇಕ್ಷಕರ ತೊಡಗುವಿಕೆಗಾಗಿ ಇಂಡಿಕ್‌ ಭಾಷಾಬಳಕೆ ಸಾಧ್ಯತೆಗಳ ಅನ್ವೇಷಣೆ.

ಸ್ಥಳೀಯ ವಿಷಯಗಳಿಗೆ ಪ್ರೋತ್ಸಾಹ: ಸ್ಥಳೀಯ ಸುದ್ದಿಗಳ ಪ್ರಚಾರವನ್ನು ವಿಸ್ತರಿಸುವ ತಂತ್ರಗಳ ಕಲಿಯುವಿಕೆ.

ಡಿಜಿಟಲ್‌ ಸಾಕ್ಷರತೆಗೆ ಕೊಡುಗೆ: ವಿವಿಧ ಅಧಿವೇಶನಗಳ ಮೂಲಕ ಡಿಜಿಟಲ್ ಸಾಕ್ಷರತೆಯ ಪ್ರಗತಿಗೆ ಕೊಡುಗೆ ನೀಡುವುದು.

ಕಾರ್ಯಾಗಾರದಲ್ಲಿ ಕ್ಷೇತ್ರ ಹಾಗು ವಿಷಯ ಪರಿಣಿತರೊಂದಿಗಿನ ಚರ್ಚೆಗಳು, ಪ್ರಾಯೋಗಿಕ ಒಳನೋಟಕ್ಕಾಗಿ ನೈಜ ಪ್ರಕರಣಗಳ ಅಧ್ಯಯನ, ಕಲಿತದ್ದನ್ನು ಕಾರ್ಯರೂಪಕ್ಕೆ ತರಲು ಸಹಕಾರಿಯಾದ ಚಟುವಟಿಕೆಗಳು ಇತ್ಯಾದಿ ನಡೆದವು.

ಮಲ್ಟಿಲಿಂಗ್ವಲ್‌ ಇಂಟರ್ನೆಟ್‌ ಆಂಡ್‌ ಯೂನಿವರ್ಸಲ್‌ ಅಕ್ಸಪ್ಟೆನ್ಸ್‌ ಕಮಿಟಿಯ ಕೋ-ಚೇರ್‌ ಸಂದೀಪ್‌ ನುಲ್ಕರ್‌ ಅವರ ಆರಂಭಿಕ ಮಾತುಗಳ ಮೂಲಕ ಕಾರ್ಯಕ್ರಮದ ಶುಭಾರಂಭವಾಯಿತು. ಗೂಗಲ್‌ ಇಂಡಿಯಾದ ಪ್ರೋಗ್ರಾಮ್‌ ಮ್ಯಾನೇಜರ್‌ ಶ್ವೇತಾ ಎಲಿಯಾಸ್‌ ಪ್ರಕಾಶಕರ ಯಶಸ್ಸಿಗೆ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಆಧುನೀಕರಿಸಲು ಒತ್ತು ನೀಡುವ ಬಗ್ಗೆ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಗೂಗಲ್‌ ಇಂಡಿಯಾದ ನ್ಯೂಸ್‌ ಪಾರ್ಟನರ್‌ ಮ್ಯಾನೇಜರ್‌ ಅಭಿಷೇಕ್‌ ಮಾಥುರ್‌ ಅಧಿವೇಶನದ ಮಾಡರೇಟರ್‌ ಆಗಿದ್ದರು.

ಮೀಡಿಯೋಲಜಿ ಸಾಫ್ಟ್‌ವೇರ್‌ನ ನಿರ್ದೇಶಕ ಹಾಗು ಸಿಇಒ ಮನೀಷ್‌ ಧಿಂಗ್ರ, ನ್ಯೂಸ್‌7ತಮಿಳ್‌ನ ಡಿಜಿಟಲ್‌ ಮುಖ್ಯಸ್ತೆ ಸುಗಿತಾ ಸಾರಂಗರಾಜ್‌, ಗುಜರಾತ್‌ ಸಮಾಚಾರದ ಡಿಜಿಟಲ್‌ ವಿಭಾಗದ ಮುಖ್ಯಸ್ಥ ಬಿನೋತಿ ಶಾ ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಂಡರು.

FICCI ನಿರ್ದೇಶಕಿ ಸರಿಕಾ ಗುಲ್ಯಾನಿ ಕಾರ್ಯಾಗಾರದಲ್ಲಿ ಭಾಗಿಯಾದವರಿಗೆ ಧನ್ಯವಾದ ತಿಳಿಸುವ ಮೂಲಕ ವಂದನಾರ್ಪಣೆ ನೆರವೇರಿಸಿದರು.

ಈ ಕಾರ್ಯಾಗಾರವು ಜ್ಞಾನ ಹಂಚಿಕೆ, ಸಹಭಾಗಿತ್ವಕ್ಕೆ ಪ್ರೋತ್ಸಹ, ಪ್ರಕಾಶನ ಉದ್ಯಮದ ಡಿಜಿಟಲೀಕರಣಗಳ ಮೂಲಕ ಡಿಜಿಟಲ್‌ ಒಳಗೊಳ್ಳುವಿಕೆ ಹಾಗು ಆವಿಷ್ಕಾರದ ಕಡೆಗಿನ ಭಾರತದ ಪಯಣಕ್ಕೆ ವೇದಿಕೆಯಾಯಿತು.

ಇನ್ನು ಈ ವಿಶೇಷ ವಿಚಾರಗೋಷ್ಠಿಯು ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ, ವ್ಯಾಪಾರ ವ್ಯವಹಾರಗಳಿಗೆ ಹೊಸ ಮಾರುಕಟ್ಟೆಯನ್ನು ಪ್ರವೇಶಿಸಲು, ತನ್ನ ಕಾರ್ಯತಂತ್ರದ ಪಾಲುದಾರಿಕೆಗಳನ್ನು ರೂಪಿಸಲು ಮತ್ತು ಉತ್ತಮವಾಗಿ ಮಾತುಕತೆ ನಡೆಸುವುದನ್ನು ಅನುವು ಮಾಡಿಕೊಡಲು ಬಹುಭಾಷಾ ಅಂತರ್ಜಾಲ, ಒಂದು ನಿರ್ಣಾಯಕ ಸಾಮಾಜಿಕ-ಆರ್ಥಿಕ ಸಾಧನವಾಗಿ ಕಂಡುಬರುತ್ತದೆ.

ಈ ವಿಚಾರಗೋಷ್ಠಿಯು ಜಾಗತಿಕ ಸಹಯೋಗ, ಪರಸ್ಪರ ಜ್ಞಾನ ಹಂಚಿಕೆ ಮತ್ತು ವಿವಿದ ವಿಷಯಗಳಲ್ಲಿ ಪರಿಣತಿಯನ್ನು ಪಡೆಯುವ ಹಾದಿಯನ್ನೂ ಸುಗಮಗೊಳಿಸುತ್ತದೆ. ಈ ಮೂಲಕ ದೇಶದ ಒಟ್ಟಾರೆ ತಾಂತ್ರಿಕ ಪ್ರಗತಿಯನ್ನು ವೇಗಗೊಳಿಸುತ್ತದೆ ಮತ್ತು ಆರ್ಥಿಕ ಅಭಿವೃದ್ಧಿಗೂ ಸಹಕರಿಸುತ್ತದೆ. ಸ್ಥಳೀಯ ಭಾಷೆಗಳಲ್ಲೇ ಕೈಗೆಟಕುವ ದರದಲ್ಲಿ ವಿವಿಧ ವಿಷಯವನ್ನು ಒದಗಿಸುವ ಮೂಲಕ, ಇದು ಸ್ಥಳೀಯ ಭಾಷೆಯ ಸಾಕ್ಷರತೆಯನ್ನೂ ಹೆಚ್ಚಿಸುತ್ತದೆ. ಇದಲ್ಲದೆ, ಇಂಟರ್ನೆಟ್ ಸಂಪರ್ಕದ ಸಾಮಾಜಿಕ, ಆರ್ಥಿಕ ಮತ್ತು ನಾಗರಿಕ ಪ್ರಯೋಜನಗಳನ್ನು ಪ್ರದರ್ಶಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಸಂಕುಚಿತಗೊಳಿಸಬಹುದು. ಅದೇ ರೀತಿಯಲ್ಲಿ, ಈ ವಿಚಾರಗೋಷ್ಠಿಯಲ್ಲಿ ಪ್ರಕಾಶನ ಉದ್ಯಮದಲ್ಲಿ ಡಿಜಿಟಲೀಕರಣವನ್ನು ಹೆಚ್ಚಿಸುವಲ್ಲಿ ಬಹುಭಾಷಾ ಇಂಟರ್ನೆಟ್ ಮತ್ತು GNI ಭಾರತೀಯ ಭಾಷಾ ಕಾರ್ಯಕ್ರಮದ ಧನಾತ್ಮಕ ಪರಿಣಾಮಗಳ ಬಗ್ಗೆಯೂ ಬೆಳಕು ಚೆಲ್ಲಲಾಗುತ್ತದೆ.

News Karnataka Shares Success Story at FICCI Session

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು