News Karnataka Kannada
Sunday, May 05 2024
ಮಂಗಳೂರು

ನಾರಾವಿ: ಮಹಿಳೆಯ ಕೈಕಾಲು ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

Naravi
Photo Credit : By Author

ಬೆಳ್ತಂಗಡಿ: ಒಂಟಿ ಮಹಿಳೆಯ ಮನೆಗೆ ನ. ೧೨ರ ಸಂಜೆ ಎಂಟ್ರಿಕೊಟ್ಟ ನಾಲ್ವರು ಮುಸುಕುದಾರಿಗಳು ಮಹಿಳೆಯ ಕೈಕಾಲು ಕಟ್ಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ನಾರಾವಿ ಸಮೀಪದ ಅರಸಿಕಟ್ಟೆಯ ಪ್ರಭಾವತಿ ನಾಯ್ಕ (೬೭) ಮನೆಯಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಪ್ರಭಾವತಿ ನಾಯ್ಕರ ಮನೆಗೆ ಏಕಾಏಕಿ ಎಂಟ್ರಿಕೊಟ್ಟ ಮುಸುಕುದಾರಿಗಳು ಅವರ ಬಾಯಿಗೆ ಬಟ್ಟೆ ತುರುಕಿಸಿ ಹಗ್ಗದಿಂದ ಕೈಕಾಲನ್ನು ಕಟ್ಟಿ ಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಿವಿಯಲ್ಲಿದ್ದ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದು ಬಳಿಕ ಮನೆಯೊಳಗಿದ್ದ ೩ ಚಿನ್ನದ ಬಳೆಗಳು, ೩ ಚಿನ್ನದ ಉಂಗುರಗಳು, ಚಿನ್ನದ ಚೈನ್ ಹಾಗೂ ಒಂದು ಮೊಬೈಲ್‌ನ್ನು ದೋಚಿ ಎಂಕ್ಲು ಬತ್ತಿನಾ ಕೆಲಸ ಆಂಡ್ ಎಂದು ತುಳುವಿನಲ್ಲಿ ಹೇಳುತ್ತಲೇ ದರೋಡೆಕೋರರು ಪರಾರಿಯಾಗಿದ್ದಾರೆ.

ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು ರೂ. ೪,೬೦,೦೦೦ ಆಗಬಹುದೆಂದು ಅಂದಾಜಿಸಲಾಗಿದೆ. ವೇಣೂರು ಠಾಣೆಯ ಪೊಲೀಸ್ ಉಪನಿರೀಕ್ಷಕಿ ಸೌಮ್ಯ ಜೆ. ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು