ಮಂಗಳೂರು: ರಾಜ್ಯದೆಲ್ಲೆಡೆ ಇಂದು ನಾಗರ ಪಂಚಮಿಯ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ಕರಾವಳಿ ನಾಗ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದ್ದು, ವಿಶ್ವ ಪ್ರಸಿದ್ಧ ನಾಗಕ್ಷೇತ್ರಗಳು ಇಲ್ಲಿವೆ. ಕುಡುಪು, ಸುಬ್ರಹ್ಮಣ್ಯ, ಬೆಳ್ತಂಗಡಿಯ ಬಳ್ಳಮಂಜ, ಸೇರಿದಂತೆ ಹಲವು ನಾಗಕ್ಷೇತ್ರಗಳಿಗೆ ಅಸಂಖ್ಯಾತ ಭಕ್ತರು ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸ\ಹಿತ ಸುಬ್ರಹ್ಮಣ್ಯ ದೇವರು ಹಾಗೂ ನಾಗನ ಸನ್ನಿಧಿಗಳಲ್ಲಿ ನಾಗರಪಂಚಮಿಯ ವಿಶೇಷ ದಿನ ಭಕ್ತರು ಅತ್ಯಂತ ಶ್ರದ್ಧೆಯಿಂದ ಕ್ಷೇತ್ರಕ್ಕೆ ಆಗಮಿಸಿ ನಾಗಾರಾಧನೆ ನಿಮಿತ್ತ ಹಾಲನ್ನು ಅರ್ಪಿಸುವ ಕಾರ್ಯ ಮಾಡುತ್ತಾರೆ. ಇಲ್ಲಿ ಸುಮಾರು 300ಕ್ಕೂ ಅಧಿಕ ನಾಗನವಿಗ್ರಹಗಳಿವೆ. ಶ್ರೀ ಅನಂತಪದ್ಮನಾಭ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ನಾಗಬನದಲ್ಲಿ ಬೆಳಗ್ಗೆ 6.30ರಿಂದ ನಾಗತಂಬಿಲ ಸೇವೆ ನಡೆಯುತ್ತಿದೆ.
ಕರಾವಳಿಯಲ್ಲಿ ಶ್ರದ್ಧಾಭಕ್ತಿಯ ನಾಗರಪಂಚಮಿ ಆಚರಣೆ
Photo Credit :
News Kannada
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.