News Karnataka Kannada
Wednesday, April 17 2024
Cricket
ಮಂಗಳೂರು

ಕೊಲೆ ಪ್ರಕರಣ: ಅಂಗಡಿ ಮಾಲೀಕನಿಂದ ದಿನನಿತ್ಯ ಚಿತ್ರಹಿಂಸೆ, ಪೊಲೀಸ್‌ ವಿಚಾರಣೆಯಲ್ಲಿ ಬಯಲು

Mulihitlu murder case: Shop owner assaulted on a daily basis, revealed during police interrogation
Photo Credit : News Kannada

ಮಂಗಳೂರು: ನಗರದ ಮುಳಿಹಿತ್ಲು ಜಂಕ್ಷನ್‌ನಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದು, ಕೊಲೆ ಆರೋಪಿ ಅಂಗಡಿ ಮಾಲೀಕ ತೌಸಿಫ್ ಹುಸೇನ್ ಎಂಬಾತ ಕೊಲೆಯಾದ ಗಜ್ವಾನ್ ಅಲಿಯಾಸ್ ಜಗ್ಗುವಿನ ತಲೆಗೆ ಮರದ ಕಟ್ಟಿಗೆಯಿಂದ ಹೊಡೆದು ಬಳಿಕ ಮೈಮೇಲೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ.

ಗಜ್ವಾನ್ ಕಳೆದ ಮೂರು ವರ್ಷಗಳಿಂದ ತೌಸಿಫ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ತೌಸಿಫ್‌ ಗಜ್ವಾನ್‌ ಗೆ ಅಂಗಡಿಯ ಪಕ್ಕದ ಶೆಡ್‌ನಲ್ಲಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದ. ತೌಸಿಫ್ ಆಗಾಗ ಗಜ್ವಾನ್ ಮೇಲೆ ಹಲ್ಲೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ. ಶನಿವಾರವೂ ಗಜ್ವಾನ್ ಮೇಲೆ ಮರದ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾನೆ. ಗಜ್ವಾನ್ ಪ್ರಜ್ಞೆ ತಪ್ಪಿದ ಕಾರಣ ಆರೋಪಿ ತೌಸಿಫ್ ಆತನನ್ನು ಸಮೀಪದ ಶೆಡ್‌ಗೆ ಸ್ಥಳಾಂತರಿಸಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾನೆ.

ನಂತರ ಆರೋಪಿ ತೌಸಿಫ್ ಗಜ್ವಾನ್‌ನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು, ವಿದ್ಯುತ್ ಶಾಕ್‌ನಿಂದ ಗಜ್ವಾನ್ ಸುಟ್ಟು ಹೋಗಿದ್ದಾನೆ ಎಂದು ಹೇಳಿದ್ದಾನೆ. ಆಸ್ಪತ್ರೆ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಹಲ್ಲೆ ನಡೆಸಿ ಪೆಟ್ರೋಲ್‌ ಸುರಿದ ಬೆಂಕಿ ಹಚ್ಚಿರುವುದಾಗಿ ತೌಸಿಫ್ ತಪ್ಪೊಪ್ಪಿಕೊಂಡಿದ್ದಾನೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಈ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರವೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು.

ಮೂರು ವರ್ಷಗಳಿಂದ ತೌಸಿಫ್‌ನೊಂದಿಗಿದ್ದ: ಆರೋಪಿ ತೌಸಿಫ್ ಅಂಗಡಿಯಲ್ಲಿ ಗಜ್ವಾನ್ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಗಜ್ವಾನ್ ಗೆ ಸರಿಯಾಗಿ ಮಾತನಾಡಲಾಗುತ್ತಿರಲಿಲ್ಲ. ತಾನು ರಾಜಸ್ಥಾನ ಮೂಲದವನು ಎಂದು ಗಜ್ವಾನ್‌ ತೌಸಿಫ್‌ ಗೆ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಈತನನ್ನು ಗಜ್ವಾನ್ ಅಲಿಯಾಸ್ ಜಗ್ಗು ಎಂದು ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಹೆಸರು ಕೂಡ ತಿಳಿದಿಲ್ಲ. ಆತನ ವಿಳಾಸ ಮತ್ತು ಸಂಬಂಧಿಕರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು