ಮೂಡುಬಿದಿರೆ : ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ಇಂಜೆಕ್ಷನ್ ತೆಗೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ಶುಕ್ರವಾರ ದಾಳಿ ನಡೆಸಿ ಗಾಯಗೊಳಿಸಿದೆ.
ಚಿಕಿತ್ಸೆಗಾಗಿ ಪೋಷಕರ ಜೊತೆ ಮಗುವನ್ನು ಕುರ್ಚಿಯಲ್ಲಿ ಕುಳಿತುಗೊಂಡಿರುವಾಗ ಆಸ್ಪತ್ರೆಯ ಆವರಣದ ಒಳಗಡೆ ಓಡಾಡುತ್ತಿದ್ದ ನಾಯಿಯೊಂದು ಮಗುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಮಗುವಿನ ಕೆನ್ನೆ ಹಾಗೂ ಮುಖದ ಇತರ ಕಡೆ ನಾಯಿ ಕಚ್ಚಿ ಗಾಯಗಳಾಗಿವೆ. ಶುಕ್ರವಾರದಂದು ಮೂಡುಬಿದಿರೆ ಪೇಟೆಯಲ್ಲಿ ಮಗು ಸಹಿತ ಮೂವರ ಮೇಲೆ ನಾಯಿ ದಾಳಿ ನಡೆಸಿದೆ.