News Karnataka Kannada
Sunday, May 05 2024
ಮಂಗಳೂರು

ಎಕ್ಕೂರು ಕಂಟ್ರಿ ಕ್ಲಬ್‌ ಹಿಂಬದಿ ರಾಜಕಾಲುವೆ ತಡೆಗೋಡೆ ಕಾಮಗಾರಿಗೆ ಶಾಸಕ ಕಾಮತ್‌ ಶಿಲಾನ್ಯಾಸ

MLA Kamath lays foundation stone for construction of retaining retaining wall behind Ekkur Country Club
Photo Credit : News Kannada

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡ್‌ನ ಎಕ್ಕೂರು ಕಂಟ್ರಿ ಕ್ಲಬ್‌ ಹಿಂಬದಿಯ ಮತ್ತು ಕಲ್ಲಕಟ್ಟ ಸದಾಶಿವ ನಗರದಲ್ಲಿ ರಾಜಕಾಲುವೆಯ ಆಯ್ದ ಭಾಗಗಳಲ್ಲಿ ತಡೆಗೋಡೆ ನಿರ್ಮಾಣದ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್‌ ಮಂಗಳವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ಸಣ್ಣ ನೀರಾವರಿ ಇಲಾಖೆಯಿಂದ ನಗರದ ವಿವಿಧ ಕಡೆಗಳಲ್ಲಿ ರಾಜಕಾಲುವೆಗಳ ತಡೆಗೋಡೆ ಮತ್ತು ಚರಂಡಿಗಳ ನಿರ್ಮಾಣಕ್ಕೆಂದೇ 100 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ. ಈ ಮೊತ್ತವನ್ಈ ಕಾಮಗಾರಿಗಳನ್ನು ಮಾಡಿಸಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಜನತೆ ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕಾಳಜಿವಹಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಗದ್ದೆ, ಬೇಸಾಯ, ಕೃಷಿ ಕಾರ್ಯಗಳು ನಡೆಯುವ ಪ್ರದೇಶಗಳಿಗೆ ಮಾತ್ರ ಸಣ್ಣ ನೀರಾವರಿ ಇಲಾಖೆಯ ಅನುದಾನ ಲಭ್ಯವಿರುತ್ತದೆ. ಆದರೆ ಮಂಗಳೂರು ನಗರದ ಜನರ ಮಳೆಗಾಲದ ಪ್ರವಾಹದ ಸಮಸ್ಯೆ ನಿವಾರಣೆಗಾಗಿ ಸಣ್ಣ ನೀರಾವರಿ ಇಲಾಖೆಯಿಂದ ಈ ಅನುದಾನ ಕೊಡಿಸುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್‍‌ ಕಟೀಲು ಅವರು ಸಹಕಾರ ನೀಡಿದ್ದಾರೆ ಎಂದು ಶಾಸಕ ಕಾಮತ್‌ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಕಾರ್ಪೊರೇಟರ್‍‌ ವೀಣಾ ಮಂಗಳ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರಚಂದ್ರ ಶೆಟ್ಟಿ, ಮುಖಂಡರಾದ ಕಿರಣ್ ರೈ, ಯಶೋಧರ್ ಚೌಟ, ಭರತ್ ರಾಜ್‌ ಶೆಟ್ಟಿ, ರೇಖಾ ಶೆಟ್ಟಿ, ಪ್ರೀತಮ್ ತೇಜಸ್ವಿನಿ, ಸುಜಾತಾ ಕೊಟ್ಟಾರಿ, ಚೇತನ್, ಸ್ನೇಹ, ಸುಕೇಶ್‌ ಅಳಪೆ , ಸುಮತಿ, ರಾಘವೇಂದ್ರ ಶೆಟ್ಟಿ, ರಾಮ್ ಎಕ್ಕೂರು, ರವೀಂದ್ರ ರಾವ್, ಕುಮಾರಣ್ಣ, ರಾಜೇಶ್ ಎಕ್ಕೂರು, ರವಿ ಎಕ್ಕೂರು, ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು