ಮಂಗಳೂರು : ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಈಜುಕೊಳ ಉದ್ಘಾಟಿಸಲೆಂದು ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಸಚಿವ ಸಂಪುಟದಲ್ಲಿ ಡಿಕೆಶಿ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅಡ್ವೊಕೇಟ್ ಜನರಲ್ ಗೆ ಕಳೆದ ಬಾರಿ ಯಡಿಯೂರಪ್ಪ ಮೌಖಿಕ ಆದೇಶ ಕೊಟ್ಟಿದ್ರು. ಮೌಖಿಕ ಆದೇಶ ಕೊಡೋದು ತಪ್ಪು ಅನ್ನೋದು ಆಗಿನ ಎಜಿ ಮತ್ತು ಈಗಿನ ಎಜಿ ಶಶಿಕಿರಣ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದರು. ಆ ಪ್ರಕಾರ ಈಗ ಕೊಟ್ಟ ಅನುಮತಿ ವಾಪಾಸ್ ಪಡೆಯಲಾಗಿದೆ. ಸುಪ್ರೀಂ ಅಥವಾ ಹೈಕೋರ್ಟ್ ಹೋಗೋದು ಸಿಬಿಐ ಬಿಟ್ಟಿದ್ದು. ಆಗಿನ ಸರ್ಕಾರ ಮಾಡಿರೋದು ತಪ್ಪು ಅಂತ ಎಜಿ ವರದಿ ಕೊಟ್ಟಿದ್ದಾರೆ.ಹೀಗಾಗಿ ಕ್ಯಾಬಿನೆಟ್ ಗೂ ಅದು ತಪ್ಪು ಅಂತ ಅನಿಸಿ ವಾಪಾಸ್ ತೆಗೊಂಡಿದೆ ಎಂದು ಹೇಳಿದರು.
ಬಿಜೆಪಿಯವರು ಪ್ರಾಮಾಣಿಕರಾಗಿದ್ರೆ ಎಜಿ ಕೇಳಿ ಕೊಡಬೇಕಿತ್ತು. ಎಜಿ ಅಭಿಪ್ರಾಯ ಕೊಡೋ ಮೊದಲೇ ಆಗಿನ ಸಿಎಂ ಸಿಬಿಐ ಕೊಟ್ಟಿದ್ದು ತಪ್ಪಲ್ವಾ? ಎಂದು ಪ್ರಶ್ನಿಸಿದರು.ನಮ್ಮ ಪ್ರಾಮಾಣಿಕತೆ ಪ್ರಶ್ನೆ ಮಾಡೋ ಇವರು ಎಜಿ ಸಲಹೆ ಕೇಳಬೇಕಿತ್ತು. ಈಗಿನ ಎಜಿ ಅದು ತಪ್ಪು ಅಂದ ಕಾರಣಕ್ಕೆ ಕ್ಯಾಬಿನೆಟ್ ನಿರ್ಧಾರ ತೆಗೊಂಡಿದೆ ಎಂದರು.
ಕಾಂಗ್ರೆಸ್ ಗೆ ಯಾರು ಬರ್ತಾರೆ, ಹೋಗ್ತಾರೆ ಅಂತ ನನಗೆ ಗೊತ್ತಿಲ್ಲ. ವಿಜಯೇಂದ್ರ ಅಥವಾ ಯಾವುದೇ ವ್ಯಕ್ತಿಯಿಂದ ಪಕ್ಷದಲ್ಲಿ ಬದಲಾವಣೆ ಆಗಲ್ಲ. ಕಾಂಗ್ರೆಸ್ ಪಕ್ಷಕ್ಕೆ ಬರೋರ ಸಂಖ್ಯೆ ಹೆಚ್ಚಾಗಲಿ, ಸರ್ಕಾರ ಸರಿಯಿದೆ. ಸೋಮಣ್ಣ ವಿಚಾರದಲ್ಲಿ ಮಾತುಕತೆ ಆಗ್ತಿದೆ, ಏನಾಗಿದೆ ಗೊತ್ತಿಲ್ಲ ಎಂದರು.
ಜಾತಿ ಗಣತಿ ಅನ್ನೋದು ಅವರ ಜಾತಿ ಎತ್ತಿ ತೋರಿಸೋ ಉದ್ದೇಶ ಅಲ್ಲ. ಅವರ ಜಾತಿಯ ಆರ್ಥಿಕ ಸ್ಥಿತಿಗತಿ ತಿಳಿಯೋ ಉದ್ದೇಶ. ಅವರನ್ನು ಮೇಲೆ ಎತ್ತೋದೇ ಸರ್ಕಾರದ ಪ್ರಮುಖ ಉದ್ದೇಶ. ಸಮಾಜದಲ್ಲಿ ಮೇಲೆ ಎತ್ತೋ ಉದ್ದೇಶ ಜಾತಿ ಗಣತಿಯದ್ದು. ಸಿಎಂ, ಡಿಸಿಎಂ ಮಧ್ಯೆ ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಜಾತಿ ಗಣತಿ ವರದಿ ತೆಗೊಂಡು ಸಾಧಕ ಬಾಧಕ ನೋಡಿ ಸರ್ಕಾರ ಅನುಮೋದನೆ ಮಾಡಲಿದೆ ಎಂದರು.