News Karnataka Kannada
Thursday, May 02 2024
ಮಂಗಳೂರು

ಕಡಲನಗರಿಯಲ್ಲಿ ಡಿ.17 ರಂದು “ಮಂಗಳೂರು ಸಾರಿ ನಡಿಗೆ, ರನ್” ಕಲರವ

"Mangalore Sari Walk, Run" to be held on Dec. 17 in Kadanagari
Photo Credit : News Kannada

ಮಂಗಳೂರು: ಇಲ್ಲಿನ ಮೆಡಿಮೇಡ್ ಸೊಲ್ಯೂಷನ್ಸ್ ಸಂಸ್ಥೆ ವತಿಯಿಂದ ಡಿಸೆಂಬರ್ 17 ರಂದು ಬೆಳಿಗ್ಗೆ 6.30 ಗಂಟೆಗೆ ಎಂಆರ್ ಪಿಎಲ್ 3ನೇ ಆವೃತ್ತಿಯ ಸಾರಿ ನಡಿಗೆ ಮತ್ತು ರನ್ -2023 ಮಂಗಳೂರು ಅನ್ನು ಆಯೋಜನೆ ಮಾಡಲಾಗಿದೆ ಎಂದು ಮೆಡಿಮೇಡ್ ಸೊಲ್ಯೂಷನ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ ಕರ್ನಾಟಕದ ಸಹಯೋಗದೊಂದಿಗೆ, ಎಂಆರ್ ಪಿಎಲ್ ಹಾಗೂ ಕೆಎಂಎಫ್ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (KMF) ಹಾಗೂ ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟ,  ಮಂಗಳೂರು ಹಾಗೂ ಲಯನ್ಸ್ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ಮತ್ತು ಸೇರಿದಂತೆ ವಿವಿಧ ಕ್ಲಬ್ ಗಳ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸುಮಾರು 3,500 ಕ್ಕೂ ಹೆಚ್ಚು ಮಂದಿ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಂಗಳೂರು ಎಂಆರ್ ಪಿಎಲ್ ಸಾರಿ ನಡಿಗೆ ಮತ್ತು ರನ್ -2023 ನಲ್ಲಿ ಮಹಿಳೆಯರು ಸಾಂಪ್ರಾಯಿಕ ಉಡುಗೆ ಸೀರೆಯನ್ನು ಧರಿಸಿಯೇ ರನ್ ಮಾಡಲಿದ್ದಾರೆ.

ಸೀರೆ ಮಹಿಳೆಯರ ಸಾಂಪ್ರದಾಯಿಕ ಭಾವನೆಗಳನ್ನು ಅರಳಿಸುವ ಧಿರಿಸು ಕೂಡ ಆಗಿದೆ. ಇದೇ ಕಾರಣಕ್ಕಾಗಿ ಕಳೆದು ಎರಡು ಆವೃತ್ತಿಗಳಲ್ಲಿ ಮಹಿಳಾ ಸ್ಪರ್ಧಿಗಳು ತುಂಬಾ ಖುಷಿಯಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈಗ ಮೂರನೇ ಆವೃತ್ತಿಯಲ್ಲಿ ಕೂಡ ಇದನ್ನೇ ಅಳವಡಿಸಲಾಗುತ್ತಿದೆ ಎಂದರು.

ಕಡಲ ನಗರಿ ಮಂಗಳೂರಿನಲ್ಲಿ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಹಾಗೂ ಸಾಂಪ್ರಾಯಿಕ ಉಡುಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮೆಡಿಮೇಡ್ ಸೊಲ್ಯೂಷನ್ಸ್ ಸಂಸ್ಥೆ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಮಹಿಳೆಯರಲ್ಲಿ ಫಿಟ್ನೆಸ್ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಇದರ ಉದ್ದೇಶ ಆಗಿದೆ. ‘ಎಂಆರ್ಪಿಎಲ್ ಸಾರಿ ನಡಿಗೆ ಮತ್ತು ರನ್ -2023’

ಸವಾಲು ಎದುರಿಸಲು ಫಿಟ್ನೆಸ್ಬೇಕು: ‘ಕುಟುಂಬ, ಸಮಾಜ ಮತ್ತು ಉದ್ಯೋಗದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುವ ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರಬೇಕಾದ ಅಗತ್ಯವಿದೆ. ಇದಕ್ಕೆ ಡ್ರೆಸ್ ತೊಡಕಾಗಬಾರದು. ಸ್ಯಾರಿ ತೊಟ್ಟಿಕೊಂಡು ಜಾಗ್ ಮಾಡಬಹುದು, ಓಡಬಹುದು ಎಂಬ ಸಂದೇಶ ಸಾರಲು ಹಾಗೂ ಫಿಟ್ನೆಸ್ನಿಂದ ದೂರ ಇರುವ ಮಹಿಳೆಯರನ್ನು ಓಟದತ್ತ ಆಕರ್ಷಿಸಿ ಫಿಟ್ನೆಸ್ ಮಹತ್ವವನ್ನು ತಿಳಿಸಲು ಸಾಂಕೇತಿಕವಾಗಿ ಈ ಓಟ ನಡೆಸಲಾಗುತ್ತಿದೆ’.

‘ಮೂರನೇ ಆವೃತ್ತಿಯಲ್ಲಿ 3 ಕಿಲೋಮೀಟರ್ ದೂರವನ್ನು ನಿಗದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಜೇತರಿಗೆ ಬಹುಮಾನ ಇದೆ:
ಪ್ರಥಮ 7500, ದ್ವಿತೀಯ 5000 ತೃತೀಯ 2500
ಸ್ಥಾನ ಪಡೆದ ವಿಜೇತರಿಗೆ ಬಹುಮಾನ, ರನ್ ಹಾಗೂ ಓಟದಲ್ಲಿ ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೂ ಪದಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ.
• ಅತಿ ಹೆಚ್ಚು ನೋಂದಣಿ ಮಾಡಿಸಿವ ಶಾಲಾ ಮತ್ತು ಕಾಲೇಜು ಮಹಿಳಾ ಶಿಕ್ಷಕಿ ಪ್ರಶಸ್ತಿ.
• ಅತಿ ಹೆಚ್ಚು ನೋಂದಣಿ ಮಾಡಿದ ಸರ್ಕಾರಿ ಕಚೇರಿ, ಬ್ಯಾಂಕ್ ಗಳು, ಕಂಪನಿಗಳು ಮತ್ತು ಆಸ್ಪತ್ರೆಗಳ ಮಹಿಳಾ ಉದ್ಯೋಗಿ ಪ್ರಶಸ್ತಿ.
• ಹೆಚ್ಚು ನೋಂದಣಿ ಮಾಡಿಸಿದ ಮಹಿಳಾ ಕ್ಲಬ್ಗಳ ಪ್ರಶಸ್ತಿ.
ವಿಶೇಷ ಪ್ರತಿಭೆ ಮೆರೆಯುವವರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆ.

ಅತ್ಯುತ್ತಮ ಧಿರಿಸಿನಲ್ಲಿ ಕಂಗೊಳಿಸುವ ಮಹಿಳೆಗೆ ಮತ್ತು ತಂಡಕ್ಕೆ, ಓಟ–ನಡಿಗೆಯ ಉದ್ದೇಶವನ್ನು ಬಿಂಬಿಸುವ ರೂಪಕ, ಉತ್ತಮ ಘೋಷವಾಕ್ಯ ಸಿದ್ಧಪಡಿಸುವವರಿಗೆ ಮತ್ತು ದೊಡ್ಡ ಸಂಖ್ಯೆಯಲ್ಲಿ ಬಂದ ತಂಡಕ್ಕೆ ಬಹುಮಾನ ಸಿಗಲಿದೆ ಎಂದರು ತಿಳಿಸಿದ್ದಾರೆ.

15 ರಿಂದ 80 ವರ್ಷದೊಳಗಿನ ಮಹಿಳೆಯರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಉಪಾಹಾರ ಕೂಡ ವಿತರಿಸಲಾಗುವುದು. ಸ್ಪರ್ಧೆ ಸಾಗಿ ಬರುವ ದಾರಿಯಲ್ಲಿ ನೀರು ಮತ್ತು ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ.
ನಡಿಗೆ ಅಥವಾ ಓಟದ ಕೊನೆಯಲ್ಲಿ ಉಚಿತ ಮಗ್ ನೀಡಲಾಗುತ್ತದೆ.

ಸಾರಿ ರನ್ ನಲ್ಲಿ ಭಾಗವಹಿಸುವ ಸ್ಪರ್ಧಿಗಳು 100 ಪ್ರವೇಶ ಶುಲ್ಕ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಈ ಮೊಬೈಲ್ 9019671163 ಸಂಪರ್ಕ ಮಾಡುವಂತೆ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು