News Karnataka Kannada
Saturday, May 04 2024
ಮಂಗಳೂರು

ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ತಯಾರಾಗಿದೆ ಮಾಸ್ಟರ್ ವುಡ್ ಸ್ಟೌವ್

Master Wood Stove is made at Jovin Wood & Engineering Workshop in Venoor
Photo Credit : By Author

ವೇಣೂರು: ಕಟ್ಟಿಗೆಯ ಅಭಾವ ಮತ್ತು ಏರುತ್ತಿರುವ ಗ್ಯಾಸ್ ಬೆಲೆಯಿಂದ ಮುಕ್ತಿ ಪಡೆಯಲು ಮಾಸ್ಟರ್ ವುಡ್ ಸ್ಟೌವ್ ಸಹಕಾರಿಯಾಗಲಿದೆ. ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ನಲ್ಲಿ ಈ ಮಾಸ್ಟರ್ ವುಡ್ ಸ್ಟೌವ್ ತಯಾರಾಗಿದೆ.

ಗ್ಯಾಸ್ ಸ್ಟೌವ್ ನಂತೆ ವಿನ್ಯಾಸ ಹೊಂದಿದ್ದು, ಒಂದು ಗಂಟೆ ಚಾರ್ಜ್ ಮಾಡಿದರೆ 24ಗಂಟೆ ಉರಿಯಬಲ್ಲ ಸಾಮರ್ಥ್ಯವನ್ನು ಈ ಮಾಸ್ಟರ್ ವುಡ್ ಸ್ಟೌವ್ ಹೊಂದಿದೆ. ಇದ್ದಿಲು ಹಾಕಿಯೂ ಈ ಸ್ಟೌವ್ ಬಳಕೆ ಮಾಡಬಹುದು. ಗ್ಯಾಸ್ ಒಲೆಗಿಂತ ಶೇ.80ರಷ್ಟು ಉಳಿತಾಯ ಮಾಡಬಹುದು. ಕೇವಲ ಒಂದು ಕೆ.ಜಿ ಕಟ್ಟಿಗೆಯಿಂದ ದಿನವಿಡೀ ಉರಿಯಬಲ್ಲ ಸಮರ್ಥ್ಯವನ್ನು ಹೊಂದಿದೆ ಜೊತೆಗೆ ಸಾಮಾನ್ಯ ಒಲೆಗಿಂತ ಹೊಗೆ ಕಡಿಮೆ ಇರುತ್ತದೆ.

ಅತ್ಯುತ್ತಮ ಗುಣಮಟ್ಟದ ಈ ಸ್ಟೌವ್ ಗ್ಯಾಸ್ ಸ್ಟೌವ್ ನಂತೆ ಬೆಂಕಿಯನ್ನು ನಮಗೆ ಬೇಕಾದ ಹಾಗೆ ಹೆಚ್ಚು, ಕಡಿಮೆ ಮಾಡುವ ವ್ಯವಸ್ಥೆಯನ್ನು ಕೂಡ ಒದಗಿಸಿ ಕೊಟ್ಟಿದೆ.

ಈ ಮಾಸ್ಟರ್ ವುಡ್ ಸ್ಟೌವನ್ನು ವೇಣೂರಿನ ಜಾನ್ ಡಿ’ಸೋಜಾ ಆವರು ತಯಾರಿಸಿದ್ದು, ಈ ಹಿಂದೆ ಮಂಗಗಳನ್ನು ಓಡಿಸುವಂತಹ ಮಾಸ್ಟರ್ ಗನ್ ಅನ್ನು ಇವರೇ ತಯಾರಿಸಿದ್ದರು. ಇವರು ವೇಣೂರಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿ ಗಲ್ಫ್ನಲ್ಲಿ ಕೆಲವರ್ಷಗಳ ಕಾಲ ಕೆಲಸ ಮಾಡಿ ಈಗ ಸುಮಾರು 22ವರ್ಷದಿಂದ ಸ್ವಂತವಾಗಿ ವರ್ಕ್ಶಾಪ್ ಮಾಡಿಕೊಂಡು ವೇಣೂರಲ್ಲೇ ವಾಸವಾಗಿದ್ದಾರೆ.

ನ್ಯೂಸ್ ಕನ್ನಡದ ಜೊತೆ ಮಾತನಾಡಿದ ‘ಜಾನ್ ಡಿ’ಸೋಜಾ’ ಮಾಸ್ಟರ್ ವುಡ್ ಸ್ಟವ್‌ವನ್ನು ವೇಣೂರಲ್ಲಿ ಇವರು ತಮ್ಮ ವರ್ಕ್ಸ್‌ಶಾಪ್‌ನಲ್ಲಿ ತಯಾರಿಸಿದ್ದು, ಜನರಿಗೆ ಇದರಿಂದ ತುಂಬಾನೆ ಉಪಯೋಗವಾಗಲಿದೆ ಎಂದರು. ಮಾರ್ಕೆಟ್ ನಲ್ಲಿ ಈ ಸ್ಟೌವ್ ಇನ್ನು ಲಭ್ಯವಾಗಿಲ್ಲ. ಇನ್ನು ಮುಂದೆ ಮಾರ್ಕೆಟ್ನಲ್ಲಿ ಸಿಗುವಂತೆ ಮಾಡುವ ಯೋಜನೆ ಇದೆ. ಈ ವರಗೆ ಸುಮಾರು 50 ಮಾಸ್ಟರ್ ವುಡ್ ಸ್ಟವ್‌ಗಳು ಸ್ಥಳೀಯ ಪ್ರದೇಶದಲ್ಲೇ ಮಾರಾಟವಾಗಿದೆ. ಈ ಮಾಸ್ಟರ್ ವುಡ್ ಸ್ಟವ್ ಸುಮಾರು 12ಕೆ.ಜಿ ಭಾರವಿದ್ದು. 4000 ರುಪಾಯಿ ಬೆಲೆ ಇದೆ.

ಈ ಮಾಸ್ಟರ್ ವುಡ್ ಸ್ಟೌವ್ ಖರೀದಿಸಲು ಬಯಸುವವರು ‘ಜಾನ್ ಡಿ’ಸೋಜಾ’ ಅವರ ವೇಣೂರಿನ ಜೋವಿನ್ ವುಡ್& ಇಂಜಿನಿಯರಿಂಗ್ ವರ್ಕ್ಸ್‌ಶಾಪ್‌ಗೆ ಹೋದರೆ ಅಲ್ಲೇ ಈ ಸ್ಟೌವ್ ಬಳಕೆ ಮಾಡುವ ಸಂಪೂರ್ಣ ಮಾಹಿತಿಯನ್ನು ಕೊಡುವ ಜೊತೆಗೆ ಡೆಮೋ ಮಾಡಿ ತೋರಿಸುತ್ತಾರೆ. 9972267471 ಈ ದೂರವಾಣಿ ಮೂಲಕ ‘ಜಾನ್ ಡಿ’ಸೋಜಾ’ ಅವರನ್ನು ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು