News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ಪ್ರಾರಂಭ

manipal-comprehensive-liver-clinic
Photo Credit : News Kannada

ಮಂಗಳೂರು: ಕರಾವಳಿ ಕರ್ನಾಟಕದ ಮುಂಚೂಣಿಯ ಆರೋಗ್ಯ ಸೇವೆ ಪೂರೈಕೆದಾರರಾದ ಕೆಎಂಸಿ ಆಸ್ಪತ್ರೆ, ದೀರ್ಘಕಾಲದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಮಗ್ರ ಅಗತ್ಯಗಳನ್ನು ಪೂರೈಸಲು ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ (ಎಂಸಿಎಲ್ಸಿ) ಅನ್ನು ಪ್ರಾರಂಭಿಸಿದೆ.

ಲಿವರ್ ಮಾನವ ದೇಹದಲ್ಲಿನ ಅತಿದೊಡ್ಡ ಅಂಗವಾಗಿದೆ, ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ ಮತ್ತು ದೀರ್ಘಕಾಲದ ಲಿವರ್ ಕಾಯಿಲೆಯಿಂದ ಕಾಲ ಕಳೆದಂತೆ ಹಂತಹಂತವಾಗಿ ಲಿವರ್ ಕಾರ್ಯಗಳು ಕೆಡುವುದಕ್ಕೆ ದಾರಿಯಾಗಬಹುದು. ಕನ್ಸಲೆಂಟ್ ಗ್ಯಾಸ್ಫೋಎಂಟರಾಲಜಿಸ್ಟ್ (ಪಚನಾಂಗರೋಗಶಾಸ್ತ್ರ ಸಲಹಾತಜ್ಞರು) ಡಾ. ಅನುರಾಗ್ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “1,000 ರೂ. +ಜಿಎಸ್ಟಿಗಳಷ್ಟು ಕಡಿಮೆ ಶುಲ್ಕ ಪಾವತಿಸುವ ಮೂಲಕ ಕ್ಲಿನಿಕ್ ಅಡಿಯಲ್ಲಿ ನೋಂದಾಯಿಸಲಾದ ರೋಗಿಗಳು ಹೊರರೋಗಿ(ಒಪಿ) ಸಲಹಾಸೇವೆ, ಹೊರರೋಗಿ(ಒಪಿ) ವೈದ್ಯಕೀಯ ಕಾರ್ಯವಿಧಾನಗಳು, ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರದ ತನಿಖೆಗಳು, ವಿಶೇಷ ವಾರ್ಡ್ಗಳು ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ರೋಗಿಗಳ ದಾಖಲಾತಿಗಳಲ್ಲಿ ರಿಯಾಯಿತಿಗಳು ಒಳಗೊಂಡಿರುವ ಬಹು ಲಾಭ ಒದಗಿಸುವ ಎಂಸಿಎಲ್ಸಿ ಕಾರ್ಡ್ ಸ್ವೀಕರಿಸುತ್ತಾರೆ” ಎಂದರು.

ಕೆಎಂಸಿ ಇಡೀ ಜಿಲ್ಲೆಯಲ್ಲಿ ಪಿಒಇಎಂ, ಇಎನ್‌ಡಿ ಮತ್ತು ಲಿವರ್ ಕಸಿ ಸೌಲಭ್ಯಗಳನ್ನು ಪೂರೈಸುವ ಏಕೈಕ ಆಸ್ಪತ್ರೆಯಾಗಿದೆ. ವಿಭಾಗವು ಅಂತರರಾಷ್ಟ್ರೀಯ ವೈದ್ಯಕೀಯ ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ನ್ಯಾಷನಲ್ ಬೋರ್ಡ್ (ರಾಷ್ಟ್ರೀಯ ಮಂಡಳಿ), ನವದೆಹಲಿಯಿಂದ ಮಾನ್ಯತೆ ಪಡೆದ ಕರಾವಳಿ ಕರ್ನಾಟಕದ ಏಕೈಕ ಗ್ಯಾಸ್ಫೋಎಂಟರಾಲಜಿ ವಿಭಾಗವಾಗಿದೆ. ಕ್ಲಿನಿಕ್ ಆರಂಭ ಕುರಿತು ಮುಖ್ಯ ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ. ರಾಜೀವ್ ಲೋಚನ್ ಪ್ರತಿಕ್ರಿಯಿಸಿ, “ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನೆರೆಹೊರೆಯ ವಲಯದಲ್ಲಿನ ದೀರ್ಘಕಾಲದ ಲಿವರ್ ಕಾಯಿಲೆಗಳು ಮತ್ತು ನಿರ್ಣಾಯಕ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಾಥಮಿಕ ಉದ್ದೇಶದಿಂದ ಮಣಿಪಾಲ್ ಸಮಗ್ರ ಲಿವರ್ ಕ್ಲಿನಿಕ್ ಅನ್ನು ಸ್ಥಾಪಿಸಲಾಗಿದೆ’ ಎಂದರು.

ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಫೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಬಿ ವಿ ತಂತ್ರಿ ಅವರು ಮಾತನಾಡಿ, “ಈ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ಪರಿಚಯಿಸುವುದರೊಂದಿಗೆ, ವಿವಿಧ ಲಿವರ್ ಕಾಯಿಲೆಗಳ ರೋಗಿಗಳಿಗೆ ನಮ್ಮ ಸೇವೆಗಳನ್ನು ಮತ್ತಷ್ಟು ಹೆಚ್ಚಿಸುವ ಗುರಿ ನಮ್ಮದು. ಇದು ನಮ್ಮ ಸಮುದಾಯದ ಆರೋಗ್ಯದ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು