ಮಂಗಳೂರು: ಯೇನೆಪೊಯ ಡೀಮ್ಡ್ ವಿವಿ, ಸಹಭಾಗಿತ್ವದಲ್ಲಿ ಝುಲೇಕಾ ಯೇನೆಪೊಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಆಶ್ರಯದಲ್ಲಿ ಕ್ಯಾನ್ಸರ್ ಅರಿವಿಗಾಗಿ ಯೆನ್ರನ್ ನಡಿಗೆ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 30ರಂದು ಬೆಳಗ್ಗೆ 5.30ಕ್ಕೆ ಫಿಜಾ ನೆಕ್ಸಸ್ ಮಾಲ್ ಆವರಣದಿಂದ ರನ್ ಆರಂಭಗೊಳ್ಳಲಿದೆ. 5 ಮತ್ತು 3 ಕಿಲೋಮೀಟರ್ಗಳ ನಡಿಗೆಯನ್ನು ಒಳಗೊಂಡಿದೆ.
ನ್ಯೂಸ್ ಕರ್ನಾಟಕ, ನ್ಯೂಸ್ಕನ್ನಡ ಮಾಧ್ಯಮ ಸಂಸ್ಥೆ ಕಾರ್ಯಕ್ರಮಕ್ಕೆ ಮಾಧ್ಯಮ ಸಹಯೋಗ ಒದಗಿಸಿದೆ. ಫಿಜಾ ನೆಕ್ಸಸ್ ಸಂಸ್ಥೆ ಸಹಯೋಗವಿದೆ.