News Karnataka Kannada
Friday, May 03 2024
ಮಂಗಳೂರು

ಮಂಗಳೂರು ದಕ್ಷಿಣದಲ್ಲೇ ಮಂಗಳಮುಖಿ ಮತದಾರರು ಅಧಿಕ

Mangaluru South has the highest number of transgender voters
Photo Credit : News Kannada

ಮಂಗಳೂರು: ದ.ಕ. ಜಿಲ್ಲೆಯ ಒಟ್ಟು ಮತದಾರರಲ್ಲಿ ಈ ಬಾರಿ 75 ಮಂದಿ ತೃತೀಯ ಲಿಂಗಿಗಳು (ಮಂಗಳ ಮುಖಿಯರು) ತಮ್ಮ
ಮತದಾನದ ಹಕ್ಕನ್ನು ಚಲಾಯಿಸಲು ಅರ್ಹತೆ ಪಡೆದಿದ್ದಾರೆ. ಮಂಗಳೂರು ನಗರ ದಕ್ಷಿಣದಲ್ಲೇ ಹೆಚ್ಚಿನ ಸಂಖ್ಯೆಯ ಮಂಗಳಮುಖೀ ಮತದಾರರಿದ್ದು, ಬೆಳ್ತಂಗಡಿಯಲ್ಲಿ ಈ ಸಂಖ್ಯೆ ಶೂನ್ಯವಾಗಿದೆ.

2023ರ ಮಾರ್ಚ್ 29ರ ಮತದಾರರ ಪಟ್ಟಿ ಯಲ್ಲಿ ಮಂಗಳೂರು ನಗರ ದಕ್ಷಿಣದಲ್ಲಿ, ೪೬ ಮಂಗಳಮುಖೀಯರಿದ್ದಾರೆ. ಬೆಳ್ತಂಗಡಿಯಲ್ಲಿ ಮಂಗಳಮುಖೀ ಮತದಾರರು ಶೂನ್ಯವಾಗಿದ್ದು, ಮೂಡುಬಿದಿರೆಯಲ್ಲಿ 5 ಮಂದಿ, ಮಂಗಳೂರು ನಗರ ಉತ್ತರದಲ್ಲಿ 11, ಮಂಗಳೂರು (ಉಳ್ಳಾಲ) 7, ಬಂಟ್ವಾಳದಲ್ಲಿ 1, ಪುತ್ತೂರು 3, ಸುಳ್ಯದಲ್ಲಿ 2 ಮಂದಿ ಮಂಗಳಮುಖೀಯರು ಮತದಾನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ದ.ಕ. ಜಿಲ್ಲೆಯಲ್ಲಿ 2018ರಲ್ಲಿ ಪ್ರಥಮ ಬಾರಿಗೆ ಮಂಗಳಮುಖೀಯರಿಗೆ ಮತದಾರರ ಚೀಟಿಯ ಅವಕಾಶ ಮೂಲಕ ಮತ ದಾನಕ್ಕೆ ಕಲ್ಪಿಸಲಾಗಿದೆ. 2014ರಲ್ಲಿ ಸರ್ವೋಚ್ಛ ನ್ಯಾಯಾಲಯವು ಮಂಗಳಮುಖೀಯರನ್ನು ಅಧಿಕೃತ ವಾಗಿ “ತೃತೀಯ ಲಿಂಗಿ’ಗಳು ಎಂದು ಘೋಷಿಸಿದ ಬಳಿಕ ಅವರಿಗೂ ಮತದಾರರ ಚೀಟಿಯನ್ನು ನೀಡುವ ಪ್ರಕ್ರಿಯೆ ಆರಂಭಗೊಂಡಿತ್ತು. ಜಿಲ್ಲೆಯ ಬಹುತೇಕ ಮಂಗಳ ಮುಖಿಯರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಹಲವು ವರ್ಷಗಳಿಂದ ಇಲ್ಲಿ ನೆಲೆಸಿರುವವರೇ ಆಗಿರುವ ಕಾರಣ ಸೂಕ್ತ ದಾಖಲೆಗಳ ಕೊರತೆಯಿಂದ ಮತ ದಾರರ ಚೀಟಿಯನ್ನು ಒದಗಿಸುವುದು ಕೂಡ ಜಿಲ್ಲಾಡ ಳಿತಕ್ಕೆ ತ್ರಾಸದಾಯಕ ಕೆಲಸವಾಗಿತ್ತು. ಹಾಗಿದ್ದರೂ ಹಲವು ಜಾಗೃತಿ ಕಾರ್ಯಕ್ರಮಗಳ ಮೂಲಕ ಜಿಲ್ಲಾಡಳಿತ ಮಂಗಳ ಮುಖೀಯರನ್ನು ಗುರುತಿಸಿ ಅವರಿಗೆ ಮತ ದಾನದ ಹಕ್ಕನ್ನು ನೀಡಿದ್ದು, 2018ರಲ್ಲಿ ಸುಮಾರು 100 ಮಂದಿ ಮತದಾರರಿದ್ದರೆ ಈ ಬಾರಿ ಆ ಸಂಖ್ಯೆ 75ಕ್ಕೆ ಇಳಿಕೆಯಾಗಿದೆ.

ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಬಹುತೇಕ ಪೂರ್ಣಗೊಂಡಿದ್ದರೂ ಎ. 11ರವರೆಗೂ ಆನ್‌ಲೈನ್ ಹಾಗೂ ಆಫ್ಘನ್‌ನಲ್ಲಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯ 10,29,678 ಮತದಾರರಲ್ಲಿ 20 ತೃತೀಯ ಲಿಂಗಿಯರು (ಮಂಗಳಾಮುಖೀಯರು) ಇದ್ದಾರೆ. ಜಿಲ್ಲಾ ಸ್ವೀಪ್ ಸಮಿತಿಯು ಉಡುಪಿ 80ನೇ ಬಡಗಬೆಟ್ಟು ನಿವಾಸಿಯಾಗಿರುವ ಮಂಗಳಮುಖೀ ಶೀಲಾ ಡೈಮಂಡ್ ಅವರಿಂದ ಈಗಾಗಲೇ ಮತದಾನ ಜಾಗೃತಿ ಹಾಗೂ ಮತ ದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ವೀಡಿಯೋ ಸಂದೇಶ ವನ್ನು ಸಿದ್ಧಪಡಿಸಿ, ಯುಟ್ಯೂಬ್ ಚಾಲನಲ್‌ನಲ್ಲೂ ಅದನ್ನು ಪ್ರಸಾರ ಮಾಡಿದೆ. ಈ ಮೂಲಕ ಜಿಲ್ಲಾ + ಸ್ವೀಪ್ ಸಮಿತಿಯು ಮಾದರಿ ನಡೆಯನ್ನು ಈಗಾಗಲೇ ಅನುಸರಿಸಿದೆ. ಜಿಲ್ಲೆಯಲ್ಲಿ 20 ಮಂಗಳಮುಖೀ ಮತದಾರರಿದ್ದಾರೆ. ಅವರಲ್ಲಿ 10 ಮಂದಿ ಸರ್ವಿಸ್ ಮತದಾರರು ಹಾಗೂ 10 ಮಂದಿ ಸಾಮಾನ್ಯ ಮತದಾರರಾಗಿದ್ದಾರೆ.

ಉಡುಪಿಯಲ್ಲಿ 2, ಬೈಂದೂರಿನಲ್ಲಿ 6, ಕುಂದಾಪುರದಲ್ಲಿ 4, ಕಾಪುವಿನಲ್ಲಿ 8 ಮಂದಿ ಯನ್ನು ಗುರುತಿಸಲಾಗಿದೆ. ಕಾರ್ಕಳ ಕ್ಷೇತ್ರದಲ್ಲಿ ಯಾರು ಇಲ್ಲ. 2018ರಲ್ಲಿ 24 ತೃತೀಯ ಲಿಂಗಿಗಳು ಮತ ದಾರರ ಪಟ್ಟಿಯಲ್ಲಿದ್ದರು. ಈಗ ಆ ಸಂಖ್ಯೆ 20ಕ್ಕೆ ಇಳಿದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು