News Karnataka Kannada
Monday, May 06 2024
ಮಂಗಳೂರು

ಮಂಗಳೂರು: ಮುಸ್ಲಿಂ ವಿದ್ಯಾರ್ಥಿ ಹಲ್ಲೆ ಪ್ರಕರಣದ ಅಸಲಿ ಕಾರಣ ಪತ್ತೆ

The real reason behind the assault of a Muslim student has been ascertained
Photo Credit : News Kannada

ಮಂಗಳೂರು: ಮದ್ರಸದ ತೆರಳುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗೆ ಕೇಸರಿ ಶಾಲು ಹಾಕಿಕೊಂಡಿದ್ದ ಇಬ್ಬರು ಯುವಕರು ಹಲ್ಲೆ ಮಾಡಿದ್ದಾರೆ ಅನ್ನೋ ಸುದ್ದಿ ಕಾಟಿಪಳ್ಳ ಕೃಷ್ಣಾಪುರದಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು.

ಇದನ್ನು ಮುಂದಿಟ್ಟು ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷವನ್ನು ಹರಡಿದರಿಂದ ಮುಸ್ಲಿಮ್ ಏರಿಯಾದಲ್ಲಿ ಆಕ್ರೋಶ ಉಂಟಾಗಿತ್ತು. ಆದರೆ ಪೊಲೀಸರ ತನಿಖೆಯ ಬಳಿಕ ಇಡೀ ಪ್ರಕರಣವೇ ಉಲ್ಟಾ  ಹೊಡೆದಿದೆ.

ಸೋಮವಾರ ಸಂಜೆ ಮದ್ರಸ ಶಿಕ್ಷಣಕ್ಕೆ ತೆರಳಿದ್ದ 13ವರ್ಷದ ಬಾಲಕನಿಗೆ ಹಲ್ಲೆ ಮಾಡಲಾಗಿದೆ ಎಂದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಆ ಭಾಗದ ಸಿಸಿಟಿವಿಗಳು ಆಧರಿಸಿ ತನಿಖೆ ನಡೆಸಿದಾಗ ಯಾವುದೇ ಸುಳಿವು ಲಭಿಸಿರಲಿಲ್ಲ. ನಂತರ ಪೊಲೀಸರು ಮದ್ರಸ ಶಿಕ್ಷಕರು ಹುಡುಗನ ಹೆತ್ತವರನ್ನು ಕರೆದು ವಿಚಾರಣೆ ನಡೆಸಿದರೂ. ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಹುಡುಗನೇ ಹಲ್ಲೆ ಘಟನೆಯ ಕಥೆ ಕಟ್ಟಿದನೆಂದು ತಿಳಿದುಬಂದಿದೆ.

ಹುಡುಗನಿಗೆ ತಾನು ಕಪ್ಪಾಗಿದ್ದೇನೆ ಯಾರೂ ಗಮನಿಸುತ್ತಿಲ್ಲ ಹೆತ್ತವರು ಕಷ್ಟದಿಂದ ಕಳಿಸಿದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಯಾರು ತನಗೆ ಸ್ನೇಹಿತರಿಲ್ಲ ಮನೆಯ ಬಡತನದಿಂದಾಗಿ ಸೈಕಲ್ ಇಲ್ಲ ಸೈಕಲ್ ಇದ್ದರೆ ಮಾತ್ರ ಫ್ರೆಂಡ್ಸ್ ಜೊತೆಗೆ ಬರ್ತಾರೆ ಎಂಬ ಕೀಳರಿಮೆಯ ಹೊಂದಿದ್ದ. ಇದೇ ಕಾರಣಕ್ಕಾಗಿ ಹಲ್ಲೆ ಮಾಡಿದರೆಂದು ಬಿಂಬಿಸಲು ತನ್ನ ಅಂಗಿಯನ್ನು ತಾನೇ ಪೆನ್ನಿನಲ್ಲಿ ಕುಕ್ಕಿ ಹರಿದುಕೊಂಡಿದ್ದ ವಿಷಯ ತನಿಖೆಯಲ್ಲಿ ಕಂಡುಬಂದಿದೆ.

ಈ ಘಟನೆಯನ್ನು ಕೋಮುದ್ವೇಷ ಹರಡಲು ಕೆಲವರು ಪ್ರಯತ್ನಪಟ್ಟಿದ್ದು, ಮದ್ರಸ ಉಸ್ತಾದ್ ಹುಡುಗನ ಹೆತ್ತವರು ಮತ್ತು ವೈದ್ಯರ ಸಮ್ಮುಖದಲ್ಲಿ ಆತನ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಕೋಮುದ್ವೇಷಗೆ ಕಾರಣವಾಗಿದ್ದ ಹಲ್ಲೆ ಘಟನೆಯ ಅಸಲಿ ಕಾರಣವನ್ನು ಪೊಲೀಸರು ಸಕಾಲದಲ್ಲಿ ಪತ್ತೆ ಹಚ್ಚಿ ಆಗುತ್ತಿದ್ದ ಅಪಾಯವನ್ನು ತಡೆಹಿಡಿದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು