News Karnataka Kannada
Sunday, April 28 2024
ಸಮುದಾಯ

ಮಂಗಳೂರು: ಕಥೋಲಿಕ್‌ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವಕ್ಕೆ ಚಾಲನೆ

Mangaluru: The golden jubilee celebrations of the Catholic Diocese's Maintenance Council inaugurated
Photo Credit : News Kannada

ಮಂಗಳೂರು, ಅ.6: ದಕ್ಷಿಣಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿರುವ ಮಂಗಳೂರು  ಕಥೋಲಿಕ್‌ ಧರ್ಮಪ್ರಾಂತ್ಯದ ಪಾಲನಾ ಪರಿಷತ್ತಿನ ಸುವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಧರ್ಮಪ್ರಾಂತ್ಯದ ಪ್ರಮುಖರ ಸಭೆಯು ಬಿಷಪ್ ಹೌಸ್‌ನಲ್ಲಿ ಜರುಗಿತು.

ಅಧ್ಯಕ್ಷ ಸ್ಥಾನ ವಹಿಸಿದ್ದ ಬಿಷಪ್‌ ಅತೀ ಪೂಜ್ಯ ಡಾ. ಪೀಟರ್‌ಪಾವ್ಲ್ ಸಲ್ಡಾನ್ಹಾರವರು ಸ್ಮರಣ ಸಂಚಿಕೆಯ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ‘ಈ ಪಾಲನಾ ಪರಿಷತ್ತು ಕಳೆದ 50 ವರ್ಷಗಳಲ್ಲಿ ಧರ್ಮಸಭೆಯಲ್ಲಿ ಮಹತ್ವದ ಸಾಧನೆ ಹಾಗೂ ಬದಲಾವಣೆ ತರಲು ಶ್ರಮಿಸಿದೆ. ಇದರಲ್ಲಿ ಹಲವು ಧಾರ್ಮಿಕ ಹಾಗೂ ಜನ ಸಾಮಾನ್ಯರ ತ್ಯಾಗ ಮಹತ್ವದಾಗಿದೆ. ನಮ್ಮ ಕಾರ್ಯಕ್ರಮವು ಮುಂದಿನ ಪೀಳಿಗೆಗೆ ದಿಕ್ಕು ತೋರುವ ಕಾರ್ಯಕ್ರಮವಾಗಲಿ’ ಎಂದು ಹಾರೈಸಿದರು.

ಕಾರ್ಯಕ್ರಮದ ಸಂಚಾಲಕರಾದ ಎಂ. ಪಿ. ನೊರೊನ್ಹಾರವರು ಮೊದಲಿಗೆ ಪ್ರಾಸ್ತಾವಿಕವಾಗಿ ಮಾತನಾಡಿ ‘ಮಂಗಳೂರು ಧರ್ಮಪ್ರಾಂತ್ಯದಲ್ಲಿ ಪಾಲನಾ ಪರಿಷತ್ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸುವ ಸಂದರ್ಭದಲ್ಲಿ ಪ್ರತಿ ಚರ್ಚ್ಗಳಲ್ಲಿ ಉತ್ಸವವನ್ನು ಆಚರಿಸಲು ಬಿಷಪ್‌ರವರು ನಿರ್ಧರಿಸಿರುತ್ತಾರೆ. ಇದಲ್ಲದೆ ಇದೇ 2022 ಡಿಸೆಂಬರ್ 10ರಂದು ಫಾದರ್ ಮುಲ್ಲರ್ಸ್ ಕನ್ವೆನ್ಷನ್ ಸೆಂಟರ್‌ನಲ್ಲಿ ಧರ್ಮಪ್ರಾಂತ್ಯದ ಮಟ್ಟದ ಆಚರಣೆ ಜರಗಲಿದ್ದು ಹಲವಾರು ವಿಶೇಷ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದು, ಧರ್ಮಪ್ರಾಂತ್ಯದ 2000 ಪ್ರತಿನಿಧಿಗಳಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಸುವರ್ಣ ಮಹೋತ್ಸವದ ಆಚರಣೆ ಅಂತೆಯೇ ಅದರ ಫಲವಾಗಿ ಹಮ್ಮಿಕೊಳ್ಳಲಿರುವ ಮುಂದಿನ ಯೋಜನೆಗಳನ್ನು ಯಶಸ್ವಿಗೊಳಿಸಲು ವಿವಿಧ ಧಾರ್ಮಿಕ ಹಾಗೂ ಸಮುದಾಯದ ಮುಖಂಡರನ್ನು ನೇಮಿಸಲಾಗಿದೆ’ಎಂದು ತಿಳಿಸಿದರು.
ವಿಕಾರ್‌ ಜನರಲ್‌ ಅತೀ ವಂ. ಮ್ಯಾಕ್ಸಿಂ ನೊರೊನ್ಹಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಮಿತಿಯ ಪ್ರಮುಖರಾದ ವಂ.ಜೆ.ಬಿ ಸಲ್ಡಾನ್ಹಾ, ವಂ.ರೂಪೇಶ್ ಮಾಡ್ತಾ, ವಂ. ಅನಿಲ್ ಫೆರ್ನಾಂಡಿಸ್, ಲೂವಿ ಪಿಂಟೋ,  ರೊಯ್‌ಕ್ಯಾಸ್ಟಲಿನೋ ಕಾರ್ಯಕ್ರಮದ ಬಗ್ಗೆ ವಿವಿಧ ಮಾಹಿತಿಯನ್ನು ನೀಡಿದರು. ಪರಿಷತ್ತಿನ ಕಾರ್ಯದರ್ಶಿ  ಜಾನ್‌ಎಡ್ವರ್ಡ್ ಡಿಸಿಲ್ವಾ ಸ್ವಾಗತಿಸಿದರು. ಬೆಥನಿ ಪ್ರೊವಿನ್ಶಿಯಲ್ ವಂ. ಸಿಸಿಲಿಯಾ ಮೆಂಡೋನ್ಸಾ ಪ್ರಾರ್ಥನಾ ವಿಧಿ ನೆರೆವೆರಿಸಿದರು. ವಂ. ರೂಪೇಶ್ ಮಾಡ್ತಾ ಕಾರ್ಯಕ್ರಮ ನಿರೂಪಿಸಿದರು.

ವಂ.ಡೆನಿಸ್ ಮೋರಸ್ ಪ್ರಭು, ವಂ.ಜೆ.ಬಿಕ್ರಾಸ್ತ, ವಂ. ವಲೇರಿಯನ್‌ಡಿಸೋಜ, ವಂ. ಮಾರ್ಸೆಲ್ ಸಲ್ಡಾನ್ಹಾ, ವಂ. ವಿನ್ಸೇಂಟ್ ಮೊಂತೇರೊ, ವಂ. ಆಸ್ಟಿನ್ ಪೆರಿಸ್, ವಂ. ಜೇಮ್ಸ್ಡಿಸೋಜ, ವಂ. ಒನಿಲ್ ಡಿಸೋಜ, ವಂ. ವಿಜಯ್ ವಿಕ್ಟರ್ ಲೋಬೊ ಹಾಗೂ ಮುಖಂಡರಾದ ಸ್ಟಾನಿ ಲೋಬೊ, ಸುಶೀಲ್ ನೊರೊನ್ಹಾ, ವಲೇರಿಯನ್‌ಮೋರಸ್,  ರಿಚರ್ಡ್ ಮಿನೇಜಸ್,  ಎಲ್. ಜೆ. ಫೆರ್ನಾಂಡಿಸ್‌ ಮತ್ತಿತರರು ಹಾಜರಿದ್ದು ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿಇತರ ಹಲವು ಪ್ರಮುಖ ಧರ್ಮಗುರುಗಳು ಮತ್ತು ಮುಖಂಡರು ಪಾಲ್ಗೊಂಡರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು