News Karnataka Kannada
Saturday, May 04 2024
ಮಂಗಳೂರು

ಮಂಗಳೂರು: ದಸರಾ ಹಿನ್ನೆಲೆ ನಾಲ್ಕು ದಿನಗಳ ಹೆಚ್ಚುವರಿಯಾಗಿ ದಸರಾ ರಜೆ ಘೋಷಿಸಿದ ಶಿಕ್ಷಣ ಇಲಾಖೆ

The academic year 2023-24 for primary and secondary schools will begin from May 29
Photo Credit : News Kannada

ಮಂಗಳೂರು: ದಸರಾ ಹಿನ್ನೆಲೆಯಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಗೆ ಸಂಬಂಧಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನಾಲ್ಕು ದಿನಗಳ ಹೆಚ್ಚುವರಿಯಾಗಿ ದಸರಾ ರಜೆಯನ್ನು ನೀಡಲಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯಿಂದ ಸೆ.28ರಿಂದ ಆರ ವರೆಗೆ ನಾಲ್ಕು ದಿನಗಳ ಹೆಚ್ಚುವರಿ ರಜೆ ಘೋಷಿಸಿ ಆದೇಶ ಮಾಡಲಾಗಿದೆ.

ದಸರಾ ರಜೆಯನ್ನು ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ ಅ.3ರಿಂದ 16ರ ವರೆಗೆ ನಿಗದಿ ಪಡಿಸಲಾಗಿದೆ. ಆದರೆ ಮಂಗಳೂರಿನಲ್ಲಿ ಸೆ.26ರಿಂದಲೇ ಕುದ್ರೋಳಿ, ಮಂಗಳೂರು ದಸರಾ ಉತ್ಸವ ಇರುವುದರಿಂದ ಅದೇ ಸಂದರ್ಭದಲ್ಲಿ ರಜೆ ನೀಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್, ಶಿಕ್ಷಣ ಸಚಿವರಿಗೂ ಮನವಿ ನೀಡಿದ್ದರು.

ಅದರಂತೆ, ಜಿಲ್ಲಾಧಿಕಾರಿಗಳು ಮಂಗಳೂರಿನ ಮಟ್ಟಿಗೆ ರಜೆಯನ್ನು ಸೆ.26ರಿಂದ ಅ.10ರ ವರೆಗೆ ಮಾಡಬಹುದೆಂದು ಶಿಕ್ಷಣ ಸಚಿವರು ಸೂಚನೆ ನೀಡಿದ್ದರು. ಅದನ್ನೇ ಅನುಸರಿಸಿ ಕೆಲವು ಖಾಸಗಿ ಶಾಲೆಗಳು ಈಗಾಗಲೇ ಸೆ.27ರಿಂದ ತೊಡಗಿ ಅ.10ರ ವರೆಗೆ ರಜೆ ನೀಡಲು ಮುಂದಾಗಿತ್ತು.

ಆದರೆ ಇದರ ನಡುವೆಯೇ ಶಿಕ್ಷಣ ಇಲಾಖೆಯಿಂದ ಮಂಗಳೂರು ತಾಲೂಕು ವ್ಯಾಪ್ತಿಗೆ ಸಂಬಂಧಿಸಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ನವರಾತ್ರಿ ಹಬ್ಬದ ಆಚರಣೆಗೆ ಪೂರಕವಾಗುವಂತೆ ದಸರಾ ರಜೆಯನ್ನು ಸೆ.28ರಿಂದ ಆ1ರ ವರೆಗೆ ಹೆಚ್ಚುವರಿಯಾಗಿ ನಾಲ್ಕು ದಿನಗಳ ಕಾಲ ನೀಡಲು ಆದೇಶ ಮಾಡಲಾಗಿದೆ.

ಇದರ ನಡುವೆ ಅ.2ರಂದು ಮಹಾತ್ಮ ಗಾಂಧಿ ಜಯಂತಿಯನ್ನು ಶಾಲೆಯಲ್ಲಿ ಆಚರಣೆ ಮಾಡಬೇಕು, ಮತ್ತು ಹೆಚ್ಚುವರಿ ನೀಡಿರುವ ರಜೆಗಳನ್ನು ನವೆಂಬರ್ ತಿಂಗಳಲ್ಲಿ ಶನಿವಾರ ಪೂರ್ತಿ ತರಗತಿ ನಡೆಸುವ ಮೂಲಕ ಸರಿದೂಗಿಸಬೇಕು ಎಂದು ಸೂಚಿಸಲಾಗಿದೆ.

ಶಾಸಕ ವೇದವ್ಯಾಸ್ ಕಾಮತ್ ಅವರು ಮಾನ್ಯ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದಂತೆ ಶಾಲಾ ಮಕ್ಕಳ ದಸರಾ ರಜೆಯನ್ನು ಹಬ್ಬದ ಸಂದರ್ಭದಲ್ಲಿಯೇ ನೀಡಲು ಆದೇಶ ಬಂದಿರುವ ಹಿನ್ನೆಲೆ ಮಾನ್ಯ ಶಿಕ್ಷಣ ಸಚಿವರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.‌

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು