News Karnataka Kannada
Friday, May 03 2024
ಮಂಗಳೂರು

ಮಂಗಳೂರು: ವ್ಯಕ್ತಿಯೋರ್ವನ ಹಣದಾಸೆಗೆ ಕಲುಷಿತಗೊಂಡ ಹಲವು ಬಾವಿಗಳು, ತ್ಯಾಜ್ಯ ದಂಧೆ ಬೆಳಕಿಗೆ

Mangaluru: Several wells and waste rackets have come to light for the greed of a person for his money.
Photo Credit : News Kannada

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುದ್ದುಪದವು ಎಂಬಲ್ಲಿ ವ್ಯಕ್ತಿಯೋರ್ವನ ಹಣದಾಸೆಗೆ ಹಲವು ಬಾವಿಗಳು ಕಲುಷಿತಗೊಂಡಿವೆ.

ಕುದ್ದುಪದವು ನಿವಾಸಿ ಗೋಪಾಲ ಪಾಟಾಳಿ ಎಂಬ ವ್ಯಕ್ತಿಯು ಹಣದಾಸೆಗೆ ಕೇರಳದ ಆಸ್ಪತ್ರೆಗಳ ಶೌಚಾಲಯಗಳ ದ್ರವತ್ಯಾಜ್ಯ ಗಳನ್ನು ವಿಲೇವಾರಿ ಮಾಡಿ ಕೃಷಿಕರ ನೀರಿನ ಮೂಲವನ್ನು ಮಲಿನ ಮಾಡುತ್ತಿದ್ದ.

ಬಂಟ್ವಾಳ ತಾಲೂಕಿನ ಕುದ್ದುಪದವು ಎಂಬಲ್ಲಿ ಈ ತ್ಯಾಜ್ಯ ದಂಧೆ ಬೆಳಕಿಗೆ ಬಂದಿದೆ. ದ್ರವ ತ್ಯಾಜ್ಯವನ್ನು ತಂದು ರಸ್ತೆ ಬದಿ ಹಾಗೂ ನಿರ್ಜನ ಪ್ರದೇಶದಲ್ಲಿ ದಂಧೆಕೋರರು ಸುರಿಯುತ್ತಿದ್ದರು. ಇದರಿಂದ ಊರು ತುಂಬಾ ದುರ್ನಾತ ಹೊಡೆಯುತ್ತಿತ್ತು. ಆರಂಭದಲ್ಲಿ ದುರ್ನಾತಕ್ಕೆ ಕಾರಣವೇನು ಎಂದು ತಿಳಿಯದೆ ಜನ ಕಂಗಾಲಾಗಿದ್ದರು.

ಕೊನೆಗೂ ಕೃಷಿಕರ ಬಾವಿಗಳಿಗೆ, ಹಳ್ಳಗಳಿಗೆ ಗೋಪಾಲ ಪಾಟಾಳಿ ಎಂಬಾತ ದ್ರವ ತ್ಯಾಜ್ಯವನ್ನು ಬಿಡುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಹಿಂದೆ ಹಲವು ಬಾರಿ ತ್ಯಾಜ್ಯ ಸುರಿಯುವ ಟ್ಯಾಂಕರ್ ಅನ್ನು ತಡೆದು ಪ್ರತಿಭಟಿಸಿ, ಚಾಲಕನನ್ನು ಪೊಲೀಸರಿಗೆ ಗ್ರಾಮಸ್ಥರು ಒಪ್ಪಿದ್ದರು. ಆದರೂ ಈ ದಂಧೆಮುಂದುವರಿಯುತ್ತಾಳೆ ಬಂದಿದೆ.

ಹೀಗಾಗಿ ಸ್ಥಳೀಯ ಪಂಚಾಯತ್ ಮತ್ತು ಪೊಲೀಸರಲ್ಲಿ ಗ್ರಾಮಸ್ಥರು ದೂರು ದಾಖಲಿಸಿದ್ದರು. ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ತ್ಯಾಜ್ಯ ಸುರಿದ ಸ್ಥಳವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪರಿಶೀಲನೆ ವೇಳೆ ಕೆಲವು ಬಾವಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದೆ. ಗೋಪಾಲ್ ಪಾಟಾಳಿ ತ್ಯಾಜ್ಯ ಸುರಿಯಲು ಟ್ಯಾಂಕರ್ ಒಂದಕ್ಕೆ 10 ಸಾವಿರ ಪಡೆದುಕೊಳ್ಳುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಇನ್ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿ ಪೊಲೀಸ್ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು