News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ನೈರ್ಮಲ್ಯ, ಗುಣಮಟ್ಟ ಆಹಾರ ಉದ್ಯಮ ಯಶಸ್ಸಿನ ಸೂತ್ರ

Sanitation, quality and service is an important issue in the food industry
Photo Credit : News Kannada

ಮಂಗಳೂರು: ನ್ಯೂಸ್ ಕರ್ನಾಟಕದ ದಶಮಾನೋತ್ಸವದ ಅಂಗವಾಗಿ ಥ್ಯಾಂಕ್ಯೂ ಕರ್ನಾಟಕ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಮೈಲಿಗಲ್ಲು ಸಾಧಿಸಲು ಸ್ಪಿಯರ್ ಹೆಡ್ ಮೀಡಿಯಾ ಸಮೂಹವನ್ನು ಬೆಂಬಲಿಸಿದ್ದಕ್ಕಾಗಿ ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಸಂಸ್ಥೆ ಧನ್ಯವಾದ ಸಲ್ಲಿಸಿದೆ.

ಥ್ಯಾಂಕ್ಯೂ ಕರ್ನಾಟಕ ಸರಣಿಯಡಿ ಪ್ರತಿ ಗುರುವಾರ ಪ್ರಸಾರವಾಗುವ ಮಹಿಳೆಯರು, ಉದ್ಯಮಿಗಳು ಮತ್ತು ಸಾಧಕರನ್ನು ಉತ್ತೇಜಿಸುವ ಕಾರ್ಯಕ್ರಮಗಳಲ್ಲಿ ವುಮೆನ್ನಿಯಾ ಕಾರ್ಯಕ್ರಮವು ಒಂದು.

ಏಪ್ರಿಲ್ 6 ರ ಗುರುವಾರ ಪ್ರಸಾರವಾದ 24 ನೇ ಸಂಚಿಕೆಯ ಅತಿಥಿಯಾಗಿ ಬಿಸಿನೆಸ್ ತರಬೇತುದಾರ ದಿವ್ಯಾ ಡಿಸೋಜಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು  ನಿರೂಪಕಿ ಅನನ್ಯಾ ಹೆಗ್ಡೆ ನಿರೂಪಿಸಿದರು.

ಈ ಕಾರ್ಯಕ್ರಮವನ್ನು ನ್ಯೂಸ್ ಕರ್ನಾಟಕ.ಕಾಂ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರ ಮಾಡಲಾಯಿತು.

ದಿವ್ಯಾ ಡಿಸೋಜಾ ತಮ್ಮ ಬಾಲ್ಯದ ಬಗ್ಗೆ ಮಾತನಾಡಿ ನಾನು ಶಾಲೆಯಲ್ಲಿ ಅತ್ಯಂತ ತುಂಟ ವಿದ್ಯಾರ್ಥಿಯಾಗಿದ್ದೆ  ಮತ್ತು ನನ್ನ ಸಹಪಾಠಿಗಳಿಗೆ ಹೊಡೆಯುವ, ಕೀಟಲೆ ಮಾಡುವ ಸ್ವಭಾವದಿಂದ ಪ್ರತಿ ವಾರವೂ ಪೋಷಕರನ್ನು ಕರೆತರುವಂತೆ ಶಿಕ್ಷಕರು ಆದೇಶಿಸುತ್ತಿದ್ದರು ಎಂದು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

ನಾನು ವ್ಯಾಪಾರಿಗಳ ಕುಟುಂಬದಲ್ಲಿ ಬೆಳೆದು, ವ್ಯಾಪಾರ ಮಾಡುವ ಕುಟುಂಬದೊಂದಿಗೆ ವಿವಾಹವಾದ ನಂತರ, ನಾನು ಸಹ ವ್ಯವಹಾರಕ್ಕೆ ಸಹಾಯ ಮಾಡಲು ನಿರ್ಧರಿಸಿದೆ ” ಎಂದು ಮನದಾಳ ಹಂಚಿಕೊಂಡರು.

ನನ್ನ ಜೀವನದಲ್ಲಿ ಮಾವ ಸೇರಿದಂತೆ ಕುಟುಂಬದ ಎಲ್ಲರೂ ಅತ್ಯುತ್ತಮ ಸಹಕಾರ ಒದಗಿಸಿ, ಜೀವನದಲ್ಲಿ ಸಾಧನೆ ಮಾಡಲು ಉನ್ನತ ಸಹಕಾರ ಒದಗಿಸಿದ್ದಾರೆ. ನೈರ್ಮಲ್ಯ, ಗುಣಮಟ್ಟ ಮತ್ತು ಸೇವೆ ಆಹಾರ ಉದ್ಯಮದಲ್ಲಿ ಮಹತ್ವದ ವಿಷಯಗಳಾಗಿವೆ ಎಂದು ದಿವ್ಯಾ ಅನುಭವ ಹಂಚಿಕೊಂಡರು.

ನಾನು ಅದನ್ನು ವ್ಯವಹಾರವೆಂದು ಪರಿಗಣಿಸದೇ ಜೀವನದ ಭಾಗವೆಂದು ನಿಶ್ಚಯಿಸಿ ಮುಂದುವರಿದ ಕಾರಣ ಅದರಲ್ಲಿ ಸಂತೃಪ್ತಿ ದೊರೆತಿದೆ ಎಂದರು.

ಜಗತ್ತಿನಲ್ಲಿ ಟೀಕೆ, ಟಿಪ್ಪಣಿಗಳಿಗೆ ಕಿವಿಯಾಗದೇ ಸಾಧನೆಯ ಹಾದಿಯಲ್ಲಿ ಮುಂದುವರಿದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಉದ್ಯಮ ಯಶಸ್ಸಿನ ಸೂತ್ರವನ್ನು ವಿವರಿಸಿದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು