ನಂಜನಗೂಡು: ಕಾಟೇರ ಸಿನಿಮಾ ಚಿತ್ರೀಕರಣದ ಹಿನ್ನೆಲೆಯಲ್ಲಿ ನಂಜನಗೂಡು ತಾಲೂಕಿನ ತುಮ್ಮ ನೇರಳೆ ಗ್ರಾಮದಲ್ಲಿ ನಟ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ನೆನ್ನೆಯಿಂದ ಚಿತ್ರೀಕರಣವನ್ನು ಗ್ರಾಮದಲ್ಲಿ ಪ್ರಾರಂಭ ಮಾಡಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಕಾಟೇರ ಸಿನಿಮಾದ ಚಿತ್ರೀಕರಣ ಗ್ರಾಮದಲ್ಲಿ ಮಾಡಲಾಗುತ್ತಿದ್ದು, ನೆಚ್ಚಿನ ನಟನನ್ನು ನೋಡಲು ಗ್ರಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ ಜಯ ಘೋಷ ಕೂಗಿದ್ದಾರೆ.
ನೆಚ್ಚಿನ ನಟನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು, ಗ್ರಾಮಕ್ಕೆ ಆಗಮಿಸಿದ ನಟ ದರ್ಶನ್ ಗೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಸುಮಾರು ನಾಲ್ಕು ದಿನಗಳ ಕಾಲ ಇದೇ ಗ್ರಾಮದಲ್ಲಿ ಚಿತ್ರಿಕರಣವನ್ನು ಹಮ್ಮಿಕೊಳ್ಳಲಾಗಿದ್ದು ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ.
ದರ್ಶನ್ ಅಭಿಮಾನಿಗಳು ನೆಚ್ಚಿನ ನಟನ ನೋಡಲು ತಂಡೂಪ ತಂಡವಾಗಿ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.