News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಧರ್ಮಪ್ರಾಂತ್ಯದ ಧಾರ್ಮಿಕ ಮುಖಂಡರು ಮತ್ತು ಪ್ರತಿನಿಧಿಗಳಿಂದ ಡಾ. ವೀರೇಂದ್ರ ಹೆಗ್ಗಡೆ ಭೇಟಿ

Religious leaders and representatives of The Diocese of Mangaluru. Meet Veerendra Heggade
Photo Credit :

ಮಂಗಳೂರು: ಇತ್ತೀಚೆಗೆ ರಾಜ್ಯಸಭಾ ಸದಸ್ಯರಾಗಿ ಭಾರತ ಸರಕಾರದಿಂದ ನಾಮ ನಿದೇರ್ಶನಗೊಂಡ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಾ ಪೂಜ್ಯ ಡಾ ಡಿ. ವಿರೇಂದ್ರ ಹೆಗ್ಗಡೆಯವರನ್ನು ಮಂಗಳೂರು ಧರ್ಮಪ್ರಾಂತ್ಯದ ಧಾರ್ಮಿಕ ಮುಖಂಡರು, ಕೆಥೋಲಿಕ್ ಸಭಾದ ಪದಾಧಿಕಾರಿಗಳು ಮತ್ತು ಯುವ ಮುಖಂಡರು, ಪಾದ್ರಿಗಳು, ಸನ್ಯಾಸಿನಿಯರು ಮತ್ತು ಜನ ಪ್ರತಿನಿಧಿಗಳು ಜುಲೈ 15, 2022, ಶುಕ್ರವಾರದಂದು ಪೂಜ್ಯರ ನಿವಾಸದಲ್ಲಿ ನಡೆದ ಔಪಚಾರಿಕ ಸಭೆಯಲ್ಲಿ ಭೇಟಿಯಾಗಿ ಮಂಗಳೂರು ಧರ್ಮಪ್ರಾಂತ್ಯದ ಪರವಾಗಿ ಆಭಿನಂದನೆ ಸಲ್ಲಿಸಿದರು.

ಈ ವೇಳೆ ಧರ್ಮಪ್ರಾಂತ್ಯದ ಶ್ರೇಷ್ಟಗರು ಅತೀ ವಂದನೀಯ ಮೊನ್ಸಿಂಜೊರ್ ಮ್ಯಾಕ್ಸಿಮ್ ಎಲ್ ನೊರೊನ್ಹಾ, ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಅತೀ ವಂದನೀಯ ಡಾ. ಜೆ ಬಿ ಸಲ್ಡಾನ್ಹಾ ಮತ್ತು ಶ್ರೀ ರೋಯ್ ಕ್ಯಾಸ್ಟೆಲಿನೊ, ‘ರಾಕ್ಣೊ’ ಕೊಂಕಣಿ ವಾರಪತ್ರಿಕೆಯ ನೀಯೋಜಿತ ಸಂಪಾದಕ ವಂದನೀಯ ರೂಪೇಶ್ ಮಾಡ್ತಾ, ಕೆನರಾ ಕಮ್ಯುನಿಕೇಶನ್ ಸೆಂಟರ್ ನಿರ್ದೇಶಕರಾದ ವಂದನೀಯ ಅನಿಲ್ ಫೆನಾರ್ಂಡಿಸ್, ಧರ್ಮಾಪ್ರಾಂತ್ಯದ ಪಾಲನಾ ಪರಿಷದ ಇದರ ಕಾರ್ಯದರ್ಶಿ ಡಾ ಜಾನ್ ಡಿಸಿಲ್ವಾ, ಅಂತರ್-ಧರ್ಮಿಯ ಸಂವಾದ ಆಯೋಗದ ಸದಸ್ಯ ಶ್ರೀ ರೋಮನ್ಸ್ ಲೋಬೋ ಬಿಷಪ್ ಮತ್ತು ಧರ್ಮಪ್ರಾಂತ್ಯದ ಪರವಾಗಿ ನಾಮನಿರ್ದೇಶಿತ ಸಂಸದ ಡಾ. ಹೆಗ್ಗಡೆ ಅವರನ್ನು ಅಭಿನಂದಿಸಿದರು.

ಮಂಗಳೂರಿನ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರ ಪರವಾಗಿ ಶ್ರೇಷ್ಟಗುರು ಅತೀ ವಂದನೀಯ ಮಾಕ್ಸಿಮ್ ಎಲ್.ನೊರೊನ್ಹಾ ಇವರು ಡಾ. ಹೆಗ್ಗಡೆಯವರನ್ನು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಗೌರವಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ. ಹೆಗ್ಗಡೆಯವರು “ಮಂಗಳೂರು ಬಿಷಪ್ ಇತ್ತೀಚೆಗೆ ನನ್ನೊಂದಿಗೆ ದೂರವಾಣಿ ಮೂಲಕ ಸಂದರ್ಶಿಸಿ ಹಾರೈಸಿದಾಗ ಅವರೊಂದಿಗೆ ಮಾತನಾಡಲು ನನಗೆ ತುಂಬಾ ಸಂತೋಷವಾಯಿತು. ಗ್ರಾಮೀಣಾಭಿವೃದ್ಧಿ ಯೋಜನೆಗಳು, ಸ್ವಯಂ ಉದ್ಯೋಗ ಮತ್ತು ಮಹಿಳಾ ಸಬಲೀಕರಣದ ಮೂಲಕ ನಾವು ಕೇಂದ್ರ ಸರ್ಕಾರವನ್ನು ಆಕರ್ಷಿಸಲು ಸಾಧ್ಯವಾಯಿತು ಮತ್ತು ಈ ಯಶಸ್ವಿ ಮಾದರಿಗಳು ದೇಶಾದ್ಯಂತ ಪುನರಾವರ್ತಿಸಲಾಗಿದೆ. ರಾಜ್ಯಸಭೆಗೆ ನನ್ನ ನಾಮನಿರ್ದೇಶನದ ಮೂಲಕ ನಾನು ದೇಶಕ್ಕೆ ನನ್ನ ಸೇವೆಯನ್ನು ವಿಸ್ತರಿಸುತ್ತೇನೆ ಮತ್ತು ನಿಮ್ಮೆಲ್ಲರನ್ನು ಪ್ರತಿನಿಧಿಸುತ್ತೇನೆ” ಎಂದು ನುಡಿದರು.

ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಅಧ್ಯಕ್ಷರು ಮತ್ತು ಪದಾಧಿಕಾರಿಗಳು. ಅಧ್ಯಕ್ಷರಾದ ಶ್ರೀ ಸ್ಟ್ಯಾನಿ ಲೋಬೊ, ಉಪಾಧ್ಯಕ್ಷರುಗಳಾದ ಶ್ರೀ ಮನೋಹರ್ ಕುಟಿನ್ಹೊ ಮತ್ತು ವಿನೋದ್ ಪಿಂಟೋ, ಖಜಾಂಚಿ ಶ್ರೀ ಅಲ್ಫೋನ್ಸ್ ಫೆನಾರ್ಂಡಿಸ್, ಜಂಟಿ ಖಜಾಂಚಿ ಶ್ರೀ ಫ್ರಾನ್ಸಿಸ್ ಸೆರಾವೊ ಮತ್ತು ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಪೌಲ್ ರೊಲ್ಫಿ ಡಿಕೋಸ್ಟಾ ಅವರು ಶ್ರೀ ಹೆಗ್ಗಡೆಯವರಿಗೆ ಹೂಗುಚ್ಚ ಮತ್ತು ಶಾಲು ಹೊದಿಸಿ ಅಭಿನಂದಿಸಿದರು.

ಕೆಥೋಲಿಕ್ ಸಭಾ, ಬೆಳ್ತಂಗಡಿ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಅಧ್ಯಕ್ಷರಾದ ಶ್ರೀ ಎಡ್ವರ್ಡ್ ರೇಗೋ, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಜೆರೋಮ್ ಲೋಬೋ, ಉಪಾಧ್ಯಕ್ಷ ಅರುಣ್ ಫೆನಾರ್ಂಡಿಸ್ ಹಾಗೂ ಜಂಟಿ ಕಾರ್ಯದರ್ಶಿ ಗ್ರೆಗೊರಿ ಫೆನಾರ್ಂಡಿಸ್ ಇವರು ಡಾ. ಹೆಗ್ಗಡೆಯವರನ್ನು ಶಾಲು ಹೊದಿಸಿ ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಬೆಳ್ತಂಗಡಿ ವಲಯದ ಧರ್ಮಗುರು ಆತೀ ವಂದನೀಯ ಜೋಸೆಫ್ ಕಾರ್ಡೋಜ, ಪ್ರಾಂಶುಪಾಲರಾದ ವಂದನೀಯ ಕ್ಲಿಫರ್ಡ್ ಪಿಂಟೋ ಮತ್ತು ಶ್ರೀಮತಿ ಪಾಲಿನ್ ರೇಗೋ ಕೂಡ ಪೂಜ್ಯರನ್ನು ಅಭಿನಂದಿಸಿದರು.

ಉಜಿರೆ ಚರ್ಚ್‍ನ ಧರ್ಮಗುರು ವಂದನೀಯ ಜೇಮ್ಸ್ ಡಿಸೋಜಾ, ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಂದನೀಯ ವಿಜಯ್ ಲೋಬೊ, ಮಡಂತ್ಯಾರು ಚರ್ಚಿನ ಧರ್ಮಗುರು ವಂದನೀಯ ಬಾಸಿಲ್ ವಾಸ್, ಶ್ರೀ ಲಿಯೋ ರೋಡ್ರಿಗಸ್, ಶ್ರೀ ವಿವೇಕ್ ವಿನ್ಸೆಂಟ್ ಪಾಯ್ಸ್ ಮತ್ತು ಶ್ರೀ ಜೆರಾಲ್ಡ್ ಮೊರಾಸ್ ಇವರು ಪೂಜ್ಯ ಡಾ. ಹೆಗ್ಗಡೆಯವರಿಗೆ ಅಭಿನಂದಿಸಿದರು.

ಬೆಳ್ತಂಗಡಿ ಮತ್ತು ಬದ್ಯಾರ್ನ  ಧರ್ಮ ಭಗಿನಿಯರು ಸಿಸ್ಟರ್ ಫ್ಲೋಸ್ಸಿ, ಸಿಸ್ಟರ್ ರಮಿತಾ, ಸಿಸ್ಟರ್ ಜ್ಯೋತ್ಸ್ನಾ, ಸಿಸ್ಟರ್ ಸೇವ್ರಿನ್ ಮತ್ತು ಸಿಸ್ಟರ್ ವಲ್ಸಾ ಅವರು ಡಾ. ಹೆಗ್ಗಡೆಯವರನ್ನು ಅಭಿನಂದಿಸಿ ಪುಷ್ಪಗುಚ್ಚವನ್ನು ಅರ್ಪಿಸಿದರು.

ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್‍ಮೆಂಟ್ (ಐ ಸಿ ವೈ ಎಂ) ಮಂಗಳೂರು ಇದರ ಸಂಚಾಲಕರಾದ ವಂದನೀಯ ಅಶ್ವಿನ್ ಕಾರ್ಡೋಜ, ಅಧ್ಯಕ್ಷ ಜೈಸನ್ ಲಾರೆನ್ಸ್ ಕ್ರಾಸ್ತಾ ಮತ್ತು ನವೀನ್ ಡಿಸೋಜಾ ಪೂಜ್ಯರನ್ನು ಅಭಿನಂದಿಸಿದರು.

ಶ್ರೀ ರೋಮನ್ಸ್ ಲೋಬೋ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, “ಡಾ ಹೆಗ್ಗಡೆಯವರು ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣವನ್ನು ಪಡೆದಿದ್ದಾರೆ, ಇದನ್ನು 2015 ರಲ್ಲಿ ಜನಸಾಮಾನ್ಯರ ಏಳಿಗೆಗೆ ಅವರ ಪರೋಪಕಾರಿ ಸೇವೆಗಳಿಗೆ ಮತ್ತು ದತ್ತಿ ಕಾರ್ಯಗಳಿಗಾಗಿ ಅವರಿಗೆ ನೀಡಲಾಯಿತು” ಎಂದರು. ರಾಜ್ಯಸಭಾ ನಾಮನಿರ್ದೇಶಿತ ಸದಸ್ಯ ಶ್ರೀ ಹೆಗ್ಗಡೆಯವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ರಾಜ್ಯದ ಪ್ರಾತಿನಿಧ್ಯವನ್ನು ವಿಸ್ತರಿಸುತ್ತಾರೆ. ಎಂದು ಅವರು ಉಲ್ಲೇಖಿಸಿದರು.

ಐದು ದಶಕಗಳಿಗೂ ಹೆಚ್ಚು ಕಾಲ ನಿಷ್ಠಾವಂತ ಪರೋಪಕಾರಿಯಾದ ಪೂಜ್ಯರು ಗ್ರಾಮೀಣಾಭಿವೃದ್ಧಿ, ಸ್ವಯಂ ಉದ್ಯೋಗದ ಮತ್ತು ಸ್ತ್ರಿ-ಸಬಲೀಕರಣದ ಉಪಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸುವ ಮೂಲಕ ಆವರ ಸೇವೆ ದೇಶದೆಲ್ಲೆಡೆ ವಿಸ್ತರಿಸಲಿ ಎಂದು ಶ್ರಿ ಲೋಬೊ ಹಾರೈಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು