News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಪ್ರತ್ಯೇಕ ನಿಗಮ ಸ್ಥಾಪನೆ, ಪ್ರಣವಾನಂದ ಸ್ವಾಮೀಜಿಗೆ ಹೋರಾಟ ಕೈಬಿಡಲು ಆಮಿಷ

Pranavananda Swamiji asked to call off his agitation for setting up of a separate corporation
Photo Credit : R Bhat

ಮಂಗಳೂರು: ಬಿಲ್ಲವ ಈಡಿಗ ನಾಯ್ಕ ಸೇರಿ ಸುಮಾರು ಇಪ್ಪತ್ತಾರು ಪಂಗಡಗಳ ಅಭಿವದ್ಧಿ ದೃಷ್ಟಿಕೋನವಿಟ್ಟು ರಾಜ್ಯಸರಕಾರ ಬ್ರಹ್ಮಶ್ರೀ ನಾರಾಯಣಗುರು ಕೋಶ ಸ್ಥಾಪಿಸಿ ಆದೇಶ ಮಾಡಿದೆ , ಆದರೆ ಇದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಸರಕಾರದ ಆದೇಶ ಪ್ರತಿಯನ್ನು ಹರಿದು ಹಾಕುವ ಮೂಲಕ ಪ್ರಣಾವಾನಂದ ಸ್ವಾಮೀಜಿ ಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕು ಎನ್ನುವುದು ಬಿಲ್ಲವ ಈಡಿಗ ಸಮಾಜದ ಬೇಡಿಕೆ ಆದರೆ ಬ್ರಹ್ಮಶ್ರೀ ನಾರಾಯಣ ಗುರು ಕೋಶ ನಮ್ಮ ಸಮುದಾಯದ ಬೇಡಿಕೆ ಅಲ್ಲ ನಾವು ಕೇಳಿದ್ದು ನಿಗಮ ನೀವು ಕೊಡ್ತಾ ಇರೋದು ಕೋಶ , ನೀವು ಮೇಲ್ವರ್ಗದವರು ನಿಗಮ ಕೇಳಿದ್ರೆ ಕೊಡ್ತೀರಿ ನಮಗೆ ಯಾಕೆ ಕೊಡಲ್ಲ .ಸರ್ಕಾರದ ಈ ನಾಟಕದಿಂದ ನಮಗೆ ಸರ್ಕಾರ ದ್ರೋಹ ಬಗೆಯುತ್ತಿದ್ದು ಇಬ್ಬರು ಮಂತ್ರಿಗಳ ಮೌನ ,ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುತಂತ್ರ ರಾಜಕಾರಣದಿಂದ ಬಿಲ್ಲವ ಈಡಿಗ ಸಮುದಾಯಕ್ಕೆ ಅನ್ಯಾಯ ಆಗುತ್ತಿದ್ದು ನಿಮ್ಮ ರಾಜಕೀಯ ಸ್ವಾರ್ಥಕ್ಕೆ ಸಮುದಾಯ ವನ್ನು ಬಲಿಕೊಡಬೇಡಿ ಎಂದು ಆದೇಶವನ್ನು ಹರಿದು ಹಾಕುವ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಆಕ್ರೋಶಭರಿತವಾಗಿ ಮಾತನಾಡಿದ ನಮಗೆ ಬೆದರಿಕೆಯ ಜೊತೆಗೆ ಆಫರ್ ಕೂಡ ಬಂದಿದೆ ವಿಧಾನಸಭೆ ಎಲೆಕ್ಷನ್ ವರೆಗೂ ಇದನ್ನು ನಿಲ್ಲಿಸಿ ಸ್ವಾಮೀಜಿ ನಿಗಮ 25 ಶಾಪ್ ಗಳನ್ನು , ಎಂ ಐಸಿಎಲ್ ನೀವು ಹೇಳಿದವರ ಕಡೆ ಮಾಡಿಕೊಡ್ತೇವೆ 1ಫಾರ್ಚುನರ್ ಕಾರು ಕೊಡುತ್ತೇನೆ ಬೆಂಗಳೂರಿನಲ್ಲಿ 2ಸೈಟ್ ಕೊಡುತ್ತೇನೆಂದು ಹೋರಾಟವನ್ನು ಕೈ ಬಿಡಬೇಕೆಂದು ಹೇಳಿದ್ರು ನಾನು ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ ಸಂದರ್ಭ ಬಂದಾಗ ಹೇಳ್ತೇನೆ ಹಾಗಾದರೆ ಇದೆಲ್ಲಾ ಯಾತಕ್ಕಾಗಿ ನಮಗೆ ಭಿಕ್ಷೆ ಬೇಡ ಸ್ವಾಮಿ  ಇದೆಲ್ಲಾ ಬೇಕಾಗಿಲ್ಲ. ನಿಮ್ಮ ಭಿಕ್ಷೆ ನಂಬಿ ನಾವಿಲ್ಲ ಮಾಡು ಅಥವಾ ಮಡಿ ಅಂತಾರಲ್ಲ ಹಾಗೆ ನಮ್ಮ ಹೋರಾಟ . ಏನೇ ಆದ್ರೂ ನಾವು ಕೈ ಬಿಡುವುದಿಲ್ಲ ಎಂದು ಕಿಡಿಕಾರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು