News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಎನ್.ಐ.ಸಿ.ಯಿಂದ ಇ-ಆಸ್ತಿ ತಂತ್ರಾಂಶ ಅನುಷ್ಠಾನ

NIC implements e-property software
Photo Credit : News Kannada

ಮಂಗಳೂರು:  ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕೆಲವು ವರ್ಷಗಳ ಹಿಂದೆ ಇ- ಖಾತೆಯನ್ನು ಪ್ರಾರಂಭಿಸಲಾಗಿ ಈಗಾಗಲೇ 23,000 ಖಾತಾವನ್ನು ನೀಡಲಾಗಿದೆ. ಈ ವ್ಯವಸ್ಥೆಯು ಜಾರಿಗೆ ಬಂದ ನಂತರ ಕೆಲವೊಂದು ತಾಂತ್ರಿಕ ಅಡಚಣೆ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಖಾತೆ ಪಡೆಯುವಲ್ಲಿ ಸಾಮಾನ್ಯ ನಾಗರೀಕರು ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಖಾತಾ ನೀಡುವಲ್ಲಿ ವಿಳಂಭವಾಗುತ್ತಿದ್ದು ಈ ಸಮಸ್ಯೆ ಕಂಡು ಬಂದ ಹಿನ್ನೆಲ್ಲೆಯಲ್ಲಿ ಈ ವಿಷಯವನ್ನು ಸಾರ್ವಜನಿಕರು, ಜನ ಪ್ರತಿನಿಧಿಗಳೊಂದಿಗೆ ಇಲಾಖಾ ಮುಖ್ಯಸ್ಥರ ಗಮನಕ್ಕೆ ತಂದಿರುತ್ತಾರೆ.

ಈ ಕೆಲವೊಂದು ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ರಾಜ್ಯ ಇ- ಇಲಾಖೆಯ ಗಮನಕ್ಕೆ ತಂದು ಈ ಒಂದು ಸಮಸ್ಯೆಗಳನ್ನು ಶ್ರೀಘವಾಗಿ ಇತ್ಯರ್ಥ ಪಡಿಸಲು ಕ್ರಮ ತೆಗೆದುಕೊಳ್ಳುವ ಜೊತೆಗೆ ಈ ಒಂದು ಪದ್ಧತಿಯು ಜನ ಸ್ನೇಹಿ ಆಗುವುದರ ಜೊತೆಯಲ್ಲಿ ನಿಗದಿತ ಅವಧಿಯಲ್ಲಿ ಸೇವೆ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೋರಿಕೊಳ್ಳಲಾಗಿತ್ತು. ಈ ಎಲ್ಲಾ ಸಮಸ್ಯೆಗಳನ್ನು ತ್ವರಿತ ಗತಿಯಲ್ಲಿ ಇತ್ಯರ್ಥಗೊಳಿಸುವ ಬಗ್ಗೆ ನುರಿತ ತಂತ್ರಜ್ಞಾನದ ಮಾಹಿತಿಯೊಂದಿಗೆ  ಎನ್.ಐ.ಸಿ. ಇವರಿಂದ ಹೊಸ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ.

1. ಈ ತಂತ್ರಾಂಶವು ಬಳಕೆದಾರರ ಸ್ನೇಹಿಯಾಗಿದ್ದು ಜನ ಸ್ನೇಹಿಯಾಗಿರುವುದರಿಂದ ಅರ್ಜಿದಾರರು ಅವರ ಮೊಬೈಲ್ ಮೂಲಕವೇ ಈ ತಂತ್ರಾಶದಲ್ಲಿ ಅಳವಡಿಸಲಾದ ಅರ್ಜಿಯೊಂದಿಗೆ ಸುಲಭವಾಗಿ ತಮ್ಮ ಜಾಗದ ಆಸ್ತಿಗೆ ಸಂಬಂಧಪಟ್ಟಂತೆ ಮಾಹಿತಿಯನ್ನು  ಅಪ್ ಲೋಡ್  ಮಾಡಿ ಪಡೆಯುವ ಸುಲಭ ವ್ಯವಸ್ತೆಯಾಗಿರುತ್ತದೆ.

2. ಇ-ಆಸ್ತಿ ಸಾಫ್ಟ್ ವೇರ್ ತಂತ್ರಾಂಶವು ಆಪ್ ಮೂಲಕ ಸಿದ್ಧಪಡಿಸಲಾದ ಮಾಹಿತಿಯನ್ನು ಮಂಗಳೂರು ಸೇವಾ ಕೇಂದ್ರ ಗೆ ಸಲ್ಲಿಸಿಕೊಂಡು ಸುಲಭ ಖಾತೆ ಪಡೆಯಲು ಕಲ್ಪಿಸಲಾಗಿದೆ 3. ಸಾರ್ವಜನಿಕರ ಅನುಕೂಲತೆಗಾಗಿ ಅರ್ಜಿದಾರರೇ ಸ್ವತ: ಈ ಸಾಫ್ಟ್ ವೇರ್  ಮೂಲಕ ದಾಖಲೆಗಳನ್ನು ಅಪ್ ಲೋಡ್ ಮಾಡಿ ಖಾತಾ ಅರ್ಜಿಯನ್ನು ಮಂಗಳೂರು ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಸಲ್ಲಿಸಬಹುದಾಗಿದೆ. 4. ಈ ಆಪ್ ಮೂಲಕ ಸಲ್ಲಿಸಲಾದ ಅರ್ಜಿಗಳನ್ನು ಮಂಗಳೂರು ಸೇವಾ ಕೇಂದ್ರವು ನಿಗದಿತ ಅವಧಿಯಲ್ಲಿ ಸಮಯ ಖಚಿತ ಪಡಿಸಿಕೊಂಡು ಈಗಾಗಲೇ ನಿಗದಿಪಡಿಸಲಾದ ವ್ಯವಸ್ಥೆಯಲ್ಲಿ ಕಛೇರಿಗೆ ನೀಡಿ ಸಾರ್ವಜನಿಕರು ಅನಾವಶ್ಯಕವಾಗಿ ಕಾಯುವಿಕೆ ಇಲ್ಲದೆ ತ್ವರಿತ ಮತ್ತು ಸುಗಮವಾಗಿ ಸೇವೆಯನ್ನು ನೀಡುವ ಅವಕಾಶವನ್ನು ಕಲ್ಪಿಸಲಾಗಿದೆ.

5. ಸ್ಕ್ಯಾನ್ ಮಾಡಲಾದ ಎಲ್ಲಾ ಅರ್ಜಿಗಳನ್ನು ಸಿಸ್ಟಂನಲ್ಲಿ ಅಳವಡಿಸಲಾದ ನಂತರ ನೇರವಾಗಿ ಮಂಗಳೂರು ಸೇವಾ ಕೇಂದ್ರ ಮೂಲಕ ಸ್ವೀಕೃತಗೊಂಡು ಸ್ವಯಂ ಚಾಲಿತವಾಗಿ ಮಂಗಳೂರು ಮಹಾನಗರಪಾಲಿಕೆಯ ಸಂಬಂದಪಟ್ಟ ಶಾಖೆಗೆ ತಲುವುವುದಲ್ಲದೆ ಪ್ರತಿಯೊಂದು ಹಂತದಲ್ಲಿ ನಿಗದಿ ಪಡಿಸಲಾದ ಸಮಯ ಮಿತಿಯೊಳಗೆ ಖಾತಾ ಪ್ರಕ್ರಿಯೆಯನ್ನು ಇತ್ಯರ್ಥಗೊಳಿಸಲಾಗುವುದು,

6. ಕೆಲಸದ ಒತ್ತಡವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಸ್ತಿಯ ವಿಸ್ತೀರ್ಣಕ್ಕೆ ಅನುಗುಣವಾಗಿ ಅನುಮೋದನೆ ನೀಡುವ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.

7. ದಾಖಲೆಗಳ ಮತ್ತು ಇನ್ನಿತರ ಮಾಹಿತಿಗಳನ್ನು ಸುಲಭಗೊಳಿಸಲು ಮತ್ತು ನಾಗರೀಕರಿಗೆ ಅನುಕೂಲವಾಗಲು ಈ ವ್ಯವಸ್ಥೆಯನ್ನು ಇಲಾಖಾ ವ್ಯವಸ್ಥೆಯ ಮೂಲಕ ಅಂರ್ತಗತಗೊಳಿಸಲು ಸಂಯೋಜಿಸಲಾಗಿದೆ.

8. ಅರ್ಜಿದಾರರು ಅನುಮೋದಿತ ಇ-ಖಾತಾವನ್ನು ನಾಗರೀಕರ/ಮಂಗಳೂರು ಸೇವಾ ಕೇಂದ್ರ ಪೋರ್ಟಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

9. ಹೊಸ ವೈಶಿಷ್ಟತೆಯನ್ನು ಒಳಗೊಂಡ ಈ ಹೊಸ ಸಾಫ್ಟ್ ವೇರ್ ಅನ್ನು ಮಂಗಳೂರಿಗೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ.

10.ಸರ್ವರ್ ಸಮಸ್ಯೆ ಹಾಗೂ ನಿಧಾನಗತಿಯ ಇತರ ಸಮಸ್ಯೆಗಳನ್ನು ತ್ವರಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೊಸ ಇ-ಖಾತಾ ವ್ಯವಸ್ಥೆಯನ್ನು ರಾಜ್ಯ ವಿದ್ಯುದ್ಮಾನ ಕೇಂದ್ರದಿಂದ ನಿರ್ವಹಿಸಲಾಗುತ್ತಿದೆ.

11. ಪ್ರಸ್ತುತ . ಮ್ಯಾನ್ಯುಯಲ್ ಖಾತಾವನ್ನು ಇ-ಖಾತಾವನ್ನಾಗಿ ಪರಿವರ್ತಿಸುವುದನ್ನು ಈ ವ್ಯವಸ್ಥೆಯಲ್ಲಿ ಸಕ್ರಿಯಗೊಳಿಸಲಾಗಿದೆ. ಅಲ್ಲದೆ ಮ್ಯುಟೇಶನ್  ಪ್ರಕರಣಗಳನ್ನು ಶ್ರೀಪದಲ್ಲಿ ಈ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳಲು ಇ- ಆಡಳಿತ ಇಲಾಖೆಯು ಮಹಾನಗರಪಾಲಿಕೆಯೊಂದಿಗೆ ಸಂಯೋಜಿಸುತ್ತಿದೆ.

12. ಈ ಹೊಸ ವ್ಯವಸ್ಥೆಯಿಂದಾಗಿ ಕಡತ ವಿಲೆಯ ಹಂತಗಳನ್ನು ಕಡಿಮೆಗೊಳಿಸಲಾಗಿದೆ.  ಅರ್ಜಿದಾರರು ಅವರ ಆಸ್ತಿಗೆ ಸಂಬಂಧಿಸಿ ಸ್ಥಳದಲ್ಲಿಯೆ ಇದ್ದುಕೊಂಡು ಜಿ.ಪಿ.ಎಸ್. ಆಧಾರಿತ ಛಾಯಾ

ಚಿತ್ರ ತೆಗೆದುಕೊಂಡು ಅಗತ್ಯ ಮಾಹಿತಿಯನ್ನು ಮಂಗಳೂರು ಸೇವಾ ಕೇಂದ್ರಕ್ಕೆ ಸಲ್ಲಿಸುವುದರಿಂದ ಸಮಯ ಅವಕಾಶ ಉಳಿತಾಯವಾಗುವುದರಿಂದ ಪ್ರತ್ಯೇಕವಾಗಿ ಸ್ಥಳ ತನಿಖೆ ಮಾಡುವ ಅಗತ್ಯತೆ ಇರುವುದಿಲ್ಲ.

13. ಕಛೇರಿಯಲ್ಲಿ ಸ್ಕ್ಯಾನ್ ಮಾಡುವ ಹಾಗೂ ಇನ್ನಿತರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಸಮಯ ಬೇಕಾಗುತ್ತಿದ್ದು ಈಗ ಈ ಎಲ್ಲಾ ಕೆಲಸ ಕಾರ್ಯಗಳನ್ನು ನಾಗರೀಕ/ಮಂಗಳೂರು ಒನ್ ನಿರ್ವಹಿಸುವುದರಿಂದ ಸಮಯ ಅವಕಾಶ ಉಳಿತಾಯವಾಗುವುದರ ಜೊತೆಗೆ ಶೀಘ್ರದಲ್ಲಿ ಖಾತಾವನ್ನು ಸಾರ್ವಜನಿಕರಿಗೆ ನೀಡುವಲ್ಲಿ ಸಹಕಾರಿಯಾಗಲ್ಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು