ಮಂಗಳೂರು: ಉಳ್ಳಾಲದ ವ್ಯಕ್ತಿಗೆ ಬರೋಬ್ಬರಿ 7 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದ್ದು, ಕರೆಂಟ್ ಬಿಲ್ ಮನೆ ಮಾಲೀಕ ಶಾಕ್ ಆಗಿದ್ದಾರೆ.
ಉಳ್ಳಾಲಬೈಲಿನ ನಿವಾಸಿ ಸದಾಶಿವ ಆಚಾರ್ಯ ಎಂಬವರಿಗೆ ಬಿಲ್ ರೀಡರ್ ಎಡವಟ್ಟಿನಿಂದ 7,71,072 ರೂ. ಬಿಲ್ ಬಂದಿದೆ. ಈ ಬಗ್ಗೆ ಮೀಟರ್ ರೀಡರ್ನನ್ನು ಇಷ್ಟೊಂದು ಬಿಲ್ ಯಾಕೆಂದು ವಿಚಾರಿಸಿದಾಗ ಮೆಸ್ಕಾಂ ಕಚೇರಿಯಲ್ಲಿ ಕೇಳಿ ಎಂದು ಹೇಳಿದ್ದಾರೆ.
99,338 ಯೂನಿಟ್ ಖರ್ಚಾಗಿದೆ ಎಂದು ಬಿಲ್ ನಲ್ಲಿ ನಮೂದಿಸಲಾಗಿದ್ದು, ಈ ಯಡವಟ್ಟಿನಿಂದ ಗ್ರಾಹಕ ತೊಂದರೆ ಅನುಭವಿಸುವಂತಾಗಿದೆ. ಈ ಮೊದಲು ಸದಾಶಿವ ಅವರಿಗೆ ಪ್ರತಿತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿದ್ದು, ಈ ತಿಂಗಳು 7,71,072 ರೂ. ಬಿಲ್ ಬಂದಿದೆ. ಇದರಿಂದ ಗ್ರಾಹಕ ಕಂಗಾಲಾಗಿದ್ದಾರೆ. ಈ ಬಗ್ಗೆ ಮೆಸ್ಕಾಂ ಕಚೇರಿಗೆ ಸದಾಶಿವ ಆಚಾರ್ಯ ದೂರು ನೀಡಿದ್ದಾರೆ.