News Karnataka Kannada
Monday, April 29 2024
ಮಂಗಳೂರು

ಮಂಗಳೂರು: ಕಡಲ್ಕೊರೆತ ಬಗ್ಗೆ ಸರಕಾರಕ್ಕೆ ಆಲಸ್ಯವೇಕೆ ಎಂದು ಪ್ರಶ್ನಿಸಿದ ಎಂ ವೀರಪ್ಪ ಮೊಯಿಲಿ

Mangaluru: M Veerappa Moily questioned why the government was lazy about sea erosion.
Photo Credit : News Kannada

ಮಂಗಳೂರು: ಕಡಲ್ಕೊರೆತ ತುರ್ತು ತಡೆ ಕಾಮಗಾರಿಗೆ ಎನ್ ಡಿ ಆರ್ ಎಫ್ ಸ್ಕೀಮ್ ನಿಂದ ಹಣ ಬಿಡುಗಡೆ ಮಾಡಲು ಅವಕಾಶವಿದ್ದರೂ ಎನ್ ಡಿ ಆರ್ ಎಫ್ ನಿಧಿಯನ್ನು ಖರ್ಚು ಮಾಡದೆ ಸುಮ್ಮನೆ ಕುಳಿತಿದ್ದಾರೆ. ಈವರೆಗೆ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಯಾರು ಅಡ್ಡಿ ಇದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಪ್ರಶ್ನಿಸಿದ್ದಾರೆ.

ಶನಿವಾರ ಬೆಳಿಗ್ಗೆ ಅವರು ಸೋಮೇಶ್ವರ ಉಚ್ಚಿಲ ಬಟ್ಟಂಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು ಕಡಲ್ಕೊರೆತ ಸಮಸ್ಯೆ ಹೊಸದೇನೂ ಅಲ್ಲ ನಮ್ಮ ಸರಕಾರ ಆಡಳಿತವಿದ್ದಾಗ ಅಳಿವೆ ಬಾಗಿಲು ಸೇರಿದಂತೆ ಅನೇಕ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿದ್ದೇವೆ ಯಾವುದೇ ಶಾಶ್ವತ ಕಾಮಗಾರಿ ನಡೆಸಿದರೂ ಪ್ರತಿವರುಷವೂ ನಿರ್ವಹಣಾ ಕಾಮಗಾರಿ ಅಗತ್ಯ.

ಆದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರವು ಅಸಡ್ಡೆ ತೋರಿ ಕಳೆದ 3ವರ್ಷಗಳಿಂದಲೂ ಕಡಲ್ಕೊರೆತ ಪೀಡಿತ ಉಚ್ಚಿಲ ಬಟ್ಟಪ್ಪಾಡಿ ಪ್ರದೇಶಗಳನ್ನು ಕಡೆಗಣಿಸುತ್ತಾ ಬಂದಿದೆ. ಬಜೆಟ್ ನಲ್ಲಿ ಕನಿಷ್ಠ ನಿರ್ವಹಣೆಗೂ ಹಣ ಕೊಡದಿದ್ದರೆ ಕಡಲು ಪ್ರಕ್ಷುಬ್ಧಗೊಂಡು ತೀರಪ್ರದೇಶವನ್ನು ನುಂಗುವುದು ಖಂಡಿತ. ಈಗಾಗಲೇ ಸ್ಥಳೀಯ ಭೋವಿ ಜನಾಂಗದವರು ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ತಾನು ಮತ್ತು ಶಾಸಕ ಖಾದರ್ ಅವರು ತಕ್ಷಣವೇ ಮುಖ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕಡಲ್ಕೊರೆತ ತಡೆಗೆ ತುರ್ತು ಮಾಧ್ಯಮಿಕ ಮತ್ತು ಶಾಶ್ವತ ಕಾಮಗಾರಿ ನಡೆಸುವ ಬಗ್ಗೆ ಮಾತುಕತೆ ನಡೆಸಲಿದ್ದೇವೆ ಎಂದರು. ಸ್ಥಳೀಯ ಶಾಸಕ ಯುಟಿಖಾದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ ಜೊತೆಯಲ್ಲಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು