News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಸಮುದ್ರ ಪಾಲಾಗುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೇಲೆಕ್ಕೆತ್ತಿದ ಹಸಿರು ದಳ

Green brigade picks up heaps of plastic waste dumped in sea due to heavy rains
Photo Credit : By Author

ಮಂಗಳೂರು: ಮೊನ್ನೆ ಸುರಿದ ಮಳೆಗೆ ಮಂಗಳೂರಿನ ಕುಳೂರು ಸಮೀಪ ಫಾಲ್ಗುಣಿ ನದಿಯಲ್ಲಿ ನಿಲ್ಲಿಸಿದ ಬೋಟ್ ಗಳ ಬದಿಯಲ್ಲಿ ಸಂಗ್ರಹವಾದ ರಾಶಿ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಮೇಲಕ್ಕೆ ಎತ್ತುವ ಕೆಲಸ ನಿನ್ನೆ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ನಡೆಯಿತು.

ಬೋಟ್ ಗಳು ಸಮುದ್ರಕ್ಕೆ ಇಳಿಯುವುದರಿಂದ ಅಲ್ಲಿ ಇರುವ ಎಲ್ಲಾ ಪ್ಲಾಸ್ಟಿಕ್ ಸಮುದ್ರ ಪಾಲಾಗುವುದನ್ನು ಮನಗಂಡು ರಾತ್ರಿಯೇ ತುರ್ತಾಗಿ ನಿರ್ಧಾರ ಮಾಡಿ ಮಂಗಳೂರು ಮಹಾನಗರಪಾಲಿಕೆ, ಅರಣ್ಯ ಇಲಾಖೆ ಮತ್ತು ಲಭ್ಯ ಸಂಘಸಂಸ್ಥೆ ಗಳ ಸಹಕಾರದಿಂದ ಪ್ಲಾಸ್ಟಿಕ್ ಮೇಲಕ್ಕೆ ಎತ್ತಲಾಯಿತು.

ಹಸಿರುದಳದ ವತಿಯಿಂದ ಭಾಗವಹಿಸಿ ಸುಮಾರು 8 ಜನ ಡಬ್ಲ್ಯೂಪಿ ಗಳನ್ನು ಕಸ ವಿಂಗಡಣೆ ಮಾಡಲು ನೇಮಿಸಿದರಿಂದ ಸ್ಥಳದಲ್ಲೆ ಪ್ಲಾಸ್ಟಿಕ್ ಲ್ಯಾಂಡ್ ಫಿಲ್ ಸೇರುವುದು ತಪ್ಪಿತು ಮತ್ತು ಅವರಿಗೂ ಆದಾಯ ವಾಯಿತು. ಈಜು ಬಾರದೇ ಇದ್ದರು ಲೈಫ್ ಜಾಕೆಟ್ ನ ಧೈರ್ಯದಲ್ಲಿ ನದಿಗೆ ಇಳಿದು ಮೈಯೆಲ್ಲಾ ಗಾಯ ಮಾಡಿ ಪ್ಲಾಸ್ಟಿಕ್ ತೆಗೆದದ್ದು ಹಸಿರು ದಳದ ಸದಸ್ಯರಿಗೆ ಒಂದು ಹೊಸ ಅನುಭವವನ್ನೇ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30359
ಶರಣ್‌ ರಾಜ್

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು