News Karnataka Kannada
Tuesday, April 30 2024
ಮಂಗಳೂರು

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿಯರೊಂದಿಗೆ ಸಂವಾದ

mangaluru-interacts-with-foreigners-living-in-city-police-commissionerate-limits
Photo Credit : News Kannada

ಮಂಗಳೂರು: ತಮ್ಮ ದಾಖಲೆ ಪತ್ರಗಳು ಸರಿಯಾಗಿದ್ದಲ್ಲಿ , ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲದಿದ್ದಲ್ಲಿ ತಾವು ಸುರಕ್ಷಿತರು ಎಂದು ನಗರ ಪೊಲೀಸ್ ಕಮಿಷನರ್ ಎನ್ . ಶಶಿಕುಮಾರ್ ವಿದೇಶಿಯರಿಗೆ ಸೂಚನೆ ನೀಡಿದರು.

ಶಿಕ್ಷಣ , ಉದ್ಯೋಗ ನಿಮಿತ್ತ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿದೇಶಿಯರೊಂದಿಗೆ ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಸಂವಾದ ನಡೆಸಿದ ಅವರು , ತಮಗೆ ಯಾವುದೇ ರೀತಿ ತೊಂದರೆಯಾದರೆ 112 ಸಂಖ್ಯೆಗೆ ಕರೆ ಮಾಡಿದ್ದಲ್ಲಿ ನೀವು ಕರೆ ಮಾಡಿದ 15 ನಿಮಿಷಗಳೊಳಗಾಗಿ ಪೊಲೀಸರು ನೀವಿದ್ದಲ್ಲಿಗೆ ಬಂದು ನಿಮ್ಮ ಸಮಸ್ಯೆ , ತೊಂದರೆ ಬಗೆಹರಿಸುತ್ತಾರೆ ಎಂದು ವಿದೇಶಿಯರಿಗೆ ಧೈರ್ಯ ತುಂಬಿದರು .

ಶಿಕ್ಷಣ , ಉದ್ಯೋಗ ಕಾರಣದಿಂದ ಸುಮಾರು 50 ದೇಶಗಳ 336 ವಿದೇಶಿ ಪ್ರಜೆಗಳು ಮಂಗಳೂರಿನಲ್ಲಿ ಆಶ್ರಯಿಸಿದ್ದಾರೆ. ಅವರಲ್ಲಿ 210 ಪುರುಷರು,  126 ಮಹಿಳೆಯರು. ಇವರಲ್ಲಿ ಇಬ್ಬರು ಪಾಕಿಸ್ತಾನಿಯರೂ , ಇವರು 2015 ನಿಂದ ಮಂಗಳೂರಿನಲ್ಲಿದ್ದಾರೆ.

ಬಾಂಗ್ಲಾದೇಶ , ಇಥಿಯೋಪಿಯಾ , ಇರಾಕ್ , ಮಲೇಶಿಯಾ , ಫಿಲಿಫೈನ್ಸ್ , ಶ್ರೀಲಂಕಾ , ಯುಎಇ , ಯುಎಸ್ಎ ಮುಂತಾದ ದೇಶಗಳ ಪ್ರಜೆಗಳು ಇಲ್ಲಿ ವಾಸವಾಗಿದ್ದಾರೆ. ತಮ್ಮನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವೂ ಹೌದು .

ಆದ್ದರಿಂದ ತಮಗೇನಾದರೂ ತೊಂದರೆಯಾದಲ್ಲಿ ತಕ್ಷಣ ಮಂಗಳೂರು ಪೊಲೀಸರನ್ನು ಭೇಟಿಯಾದಲ್ಲಿ ನಿಮ್ಮ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದರು . ಈ ವೇಳೆ ವಿದೇಶಿ ಪ್ರಜೆಗಳು , ವಿದ್ಯಾರ್ಥಿಗಳು ಪೊಲೀಸ್ ಕಮಿಷನರ್ ಅವರೊಂದಿಗೆ ಸಂವಾದ ನಡೆಸಿದರು .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು