News Karnataka Kannada
Thursday, May 09 2024
ಮಂಗಳೂರು

ಮಂಗಳೂರು: ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೈ ರಿಸ್ಕ್ ಪ್ರೆಗ್ನೆನ್ಸಿಗಾಗಿ ಐಸಿಯು ಉದ್ಘಾಟನೆ

ICU inaugurated for high-risk pregnancy at LadyGoshan Hospital
Photo Credit : News Kannada

ಮಂಗಳೂರು: ರೋಟರಿ ಕ್ಲಬ್ ಆಫ್ ಮಂಗಳೂರು ಸಿಟಿ ತಮ್ಮ ಸಮುದಾಯ ಅಭಿವೃದ್ಧಿ ಆಧಾರಿತ ಯೋಜನೆಯ ಭಾಗವಾಗಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹೆಚ್ಚಿನ ಅಪಾಯದ ಗರ್ಭಧಾರಣೆಗಾಗಿ ತೀವ್ರ ನಿಗಾ ಘಟಕವನ್ನು ಸ್ಥಾಪಿಸಿದೆ.

ರೋಟರಿ ಫೌಂಡೇಶನ್ ನ ಜಾಗತಿಕ ಅನುದಾನದ ಅಡಿಯಲ್ಲಿ ಈ ಯೋಜನೆಯನ್ನು ರೋಟರಿ ಕ್ಲಬ್ ಆಫ್ ಸ್ಕೆರೆವಿಲ್ಲೆ, ಇಂಡಿಯಾನಾ ಯುಎಸ್ಎ ನೊಂದಿಗೆ ಜಂಟಿಯಾಗಿ ಪ್ರಾರಂಭಿಸಲಾಗಿದೆ. ಐಸಿಯು ಅನ್ನು ಪಿಡಿಜಿ ರೋಟರಿಯನ್ ಡಾ. ಎನ್. ರಂಜನ್ ಕಿಣಿ, ಚೇರ್ ಮನ್, ರೋಟರಿ ಫೌಂಡೇಶನ್ ಆರ್.ಐ. ಜಿಲ್ಲೆ 6540 ಯುಎಸ್ಎ ಹಸ್ತಾಂತರಿಸಲಿದ್ದಾರೆ.

ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ  ಪ್ರೊ ಚಾನ್ಸಲರ್ ಎನ್. ವಿಶಾಲ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶ್ವ ರೋಟರಾಕ್ಟ್ ಸಹ ಅಧ್ಯಕ್ಷ ಹಿಂದಿನ ಜಿಲ್ಲಾ ಗವರ್ನರ್ ರೋಟರಿಯನ್ ರವಿ ವಡ್ಲಮನಿ ದೀಪ ಬೆಳಗಿಸುವರು.

ಮಂಗಳೂರು ದಕ್ಷಿಣ ಶಾಸಕ  ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್  ಪೂರ್ಣಿಮಾ, ರೋಟರಿ ಜಿಲ್ಲಾ ಗವರ್ನರ್ ರೋಟರಿಯನ್ ಪ್ರಕಾಶ್ ಕಾರಂತ್, ನಿಕಟಪೂರ್ವ ಜಿಲ್ಲಾ ಗವರ್ನರ್ ರೋಟರಿಯನ್ ರವೀಂದ್ರ ಭಟ್, ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಗೌರವ ಅತಿಥಿಗಳಾಗಿ ಭಾಗವಹಿಸುವರು.

ಜಾಗತಿಕ ಅನುದಾನ ಯೋಜನೆಯ ಅಧ್ಯಕ್ಷ ರೋಟರಿಯನ್ ರಂಜನ್ ಹಾಗೂ ಕ್ಲಬ್ ಅಧ್ಯಕ್ಷ ರೋಟರಿಯನ್ ಬಸವಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ರೋಟರಿಯನ್ ಡಾ. ರಂಜನ್ ಕಿಣಿ, ರೋಟರಿಯನ್ ಬಸವ ಕುಮಾರ್, ರೋಟರಿಯನ್ ಡಾ. ರಂಜನ್, ರೋಟರಿಯನ್  ಕ್ಯಾನುಟ್ ಜೆ ಪಿಂಟೋ, – ನಿಕಟಪೂರ್ವ ಅಧ್ಯಕ್ಷರು, ರೋಟರಿಯನ್ ಪ್ರಶಾಂತ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು